ಬೆಂಗಳೂರು: ದೇಶದಲ್ಲಿ 2 ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, ಮದುವೆ ಸೀಸನ್ ಆರಂಭವಾಗುವ ಈ ವೇಳೆ ಚಿನ್ನದ ಬೆಲೆ ಕಡಿಮೆಯಾಗುತ್ತಿರುವುದು ಚಿನ್ನ ಖರೀದಿಸುವವರಿಗೆ ಖುಷಿ ತಂದಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆಯಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹47,180 ದಾಖಲಾಗಿದ್ದು, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹43,250 ಆಗಿದೆ. ಆದರೆ, ಬೆಳ್ಳಿ ಬೆಲೆ ಹೆಚ್ಚಳವಾಗಿದ್ದು, ನಿನ್ನೆ ₹67 ಸಾವಿರ ಇದ್ದ ಬೆಳ್ಳಿ ಬೆಲೆ ಇಂದು ₹69 ಸಾವಿರ ಆಗಿದೆ.
ಇಂದಿನ ಪೆಟ್ರೋಲ್, ಡೀಸೆಲ್ ರೇಟ್:
ದೇಶದಲ್ಲಿ ಸತತ 12 ದಿನಗಳಿಂದ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಇಂದು ಸ್ಥಿರವಾಗಿದ್ದು, ಕರ್ನಾಟಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.22 ಆಗಿದ್ದು,1 ಲೀಟರ್ ಡೀಸೆಲ್ ದರ ₹85.47 ದಾಖಲಾಗಿದೆ.
ಇನ್ನು ರಾಜಸ್ಥಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹97.10 ಆಗಿದ್ದು,1 ಲೀಟರ್ ಡೀಸೆಲ್ ದರ ₹89.44 ಆಗಿದೆ. ಉತ್ತರ ಪ್ರದೇಶ 1 ಲೀಟರ್ ಪೆಟ್ರೋಲ್ ದರ ₹88.92 ಆಗಿದ್ದು,1 ಲೀಟರ್ ಡೀಸೆಲ್ ದರ ₹81.41 ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ 1 ಲೀಟರ್ ಪೆಟ್ರೋಲ್ ದರ ₹91.78 ಆಗಿದೆ.