ಮಾಸ್ಕೊ: ಹಕ್ಕಿಜ್ವರಕ್ಕೆ ಕಾರಣವಾಗುವ ಎಚ್5ಎನ್8 ಸೋಂಕು ಮನುಷ್ಯನಿಗೂ ಹರಡಿರುವ ವಿಶ್ವದ ಮೊದಲ ಪ್ರಕರಣ ರಷ್ಯಾದ ದೇಶದ ಮಾಸ್ಕೊದಲ್ಲಿ ಬೆಳಕಿಗೆ ಬಂದಿದೆ.
ಹೌದು ಮಾಸ್ಕೊದಲ್ಲಿ ಹಕ್ಕಿಜ್ವರಕ್ಕೆ ಕಾರಣವಾಗುವ ಎಚ್5ಎನ್8 ಸೋಂಕು ಪ್ರಕರಣ ವರದಿಯಾಗಿದ್ದು, ರಷ್ಯಾದ ಆರೋಗ್ಯ ಕಣ್ಗಾವಲು ಸಮಿತಿಯ ಮುಖ್ಯಸ್ಥೆ ಅನ್ನಾ ಪೊಪೋವಾ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಮಾಸ್ಕೊದ ಕೋಳಿ ಫಾರಂ ಒಂದರಲ್ಲಿ ಕೆಲಸ ಮಾಡುತ್ತಿದ್ದ 7 ಮಂದಿಯಲ್ಲಿ ಹಕ್ಕಿಜ್ವರಕ್ಕೆ ಕಾರಣವಾಗುವ ಎಚ್5ಎನ್8 ಪತ್ತೆ ಆಗಿದ್ದು,ಮನುಷ್ಯನಿಗೂ ಹರಡಿರುವ ವಿಶ್ವದ ಮೊದಲ ಪ್ರಕರಣ ಇದಾಗಿದ್ದು, ಈ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಮುಖ್ಯಸ್ಥೆ ಅನ್ನಾ ಪೊಪೋವಾ ಹೇಳಿದ್ದಾರೆ.
ಈಗಾಗಲೇ ವಿಶ್ವದಾತ್ಯಂತ ಕರೋನ ಸೋಂಕಿನಿಂದ ಕಂಗಾಲಾಗಿರುವ ಜನರು, ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಮಾನವನಲ್ಲಿಯೂ ಕೂಡ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಎಲ್ಲೆಡೆ ಹಕ್ಕಿಜ್ವರದ ಆತಂಕ ಶುರುವಾಗಿದೆ.