ಇಂದು ನವರಾತ್ರಿಯ ಒಂಬತ್ತನೇ ದಿನ ಸಿದ್ದಿದಾತ್ರೀ ಆರಾಧನೆ: ಪೂಜಾ ವಿಧಾನ, ಮಹತ್ವ

Siddhidatri devi : ನವರಾತ್ರಿಯಂದು ದೇವಿಯ ಒಂಬತ್ತು ಅವತಾರಗಳಲ್ಲಿ ಕೊನೆಯದಾಗಿ ಬರುವುದು ಸಿದ್ಧಿದಾತ್ರೀ ದೇವಿ ಸ್ವರೂಪವಾಗಿದೆ. ಆ ಜಗಜ್ಜನನಿಯನ್ನು ಶರನ್ನವರಾತ್ರಿಯ ಒಂಬತ್ತನೇ ದಿನದಂದು ಆರಾಧಿಸುವುದರಿಂದ ಎಲ್ಲ ಸಿದ್ದಿಗಳು ದೊರೆಯುತ್ತವೆ. ಅರ್ಧನಾರೀಶ್ವರನಾದ ಶಿವ ಭಗವಾನ್ ಶಿವನು…

siddhidatri devi

Siddhidatri devi : ನವರಾತ್ರಿಯಂದು ದೇವಿಯ ಒಂಬತ್ತು ಅವತಾರಗಳಲ್ಲಿ ಕೊನೆಯದಾಗಿ ಬರುವುದು ಸಿದ್ಧಿದಾತ್ರೀ ದೇವಿ ಸ್ವರೂಪವಾಗಿದೆ. ಆ ಜಗಜ್ಜನನಿಯನ್ನು ಶರನ್ನವರಾತ್ರಿಯ ಒಂಬತ್ತನೇ ದಿನದಂದು ಆರಾಧಿಸುವುದರಿಂದ ಎಲ್ಲ ಸಿದ್ದಿಗಳು ದೊರೆಯುತ್ತವೆ.

ಅರ್ಧನಾರೀಶ್ವರನಾದ ಶಿವ

ಭಗವಾನ್ ಶಿವನು ಈ ದೇವಿಯಿಂದಲೇ ಅಷ್ಟಸಿದ್ದಿಗಳನ್ನು ಪಡೆದಿದ್ದರಿಂದ ಅರ್ಧನಾರೀಶ್ವರನಾಗಿ ಪ್ರಸಿದ್ಧನಾದನು. ಶಾಸ್ತ್ರೀಯ ವಿಧಾನದಿಂದ ಹಾಗೂ ಅತ್ಯಂತ ನಿಷ್ಠೆಯಿಂದ ಸಿದ್ದಿದಾತ್ರೀಯ ಉಪಾಸನೆ ಮಾಡುವ ಭಕ್ತರನ್ನು ಅರಿಷಡ್ವರ್ಗಗಳಿಂದ ಪಾರುಮಾಡಿ ಎಲ್ಲ ಬಗೆಯ ಕೋರಿಕೆಗಳನ್ನು ಈಡೇರಿಸುತ್ತಾಳೆ.

ಇದನ್ನೂ ಓದಿ: ಇಂದು ಆಯುಧಪೂಜೆ; ಉಪವಾಸ ದೀಕ್ಷೆಗೆ ಶುಭ ಸಮಯ ಯಾವಾಗ..?

Vijayaprabha Mobile App free

ದೇವಿಯ ಸ್ವರೂಪ

ಕಮಲ ಪುಷ್ಪದ ಮೇಲೆ ತೇಜೋಮಯಿಯಾಗಿ, ಪ್ರಸನ್ನವದನಳಾಗಿ, ಅಭಯಕಾರಿಣಿಯಾಗಿ ವಿರಾಜಮಾನಳಾಗಿರುವ ಇವಳ ಬಲ ಕೈಗಳಲ್ಲಿ ಚಕ್ರ & ಗದೆಯಿದ್ದು ಎಡ ಕೈಗಳಲ್ಲಿ ಶಂಖ & ಕಮಲ ಪುಷ್ಪಗಳಿವೆ. ಸಿದ್ದಿರಾತ್ರಿ ದೇವಿಯ ವಾಹನ ಸಿಂಹ.

ಪೂಜಾ ವಿಧಾನ

•ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಶುಭ್ರ ಬಟ್ಟೆಗಳನ್ನು ಧರಿಸಿ

ತಾಯಿ ವಿಗ್ರಹವನ್ನು ಕಲಶದ ಬಳಿ ಇರಿಸಿ

ದೇವಿಗೆ ಅಡಿಕೆ, ವೀಳ್ಯದೆಲೆ, ಗುಲಾಬಿ ಹೂವನ್ನು ಅರ್ಪಿಸಿ

ವಿಗ್ರಹದ ಮುಂದೆ ತುಪ್ಪದ ದೀಪ ಬೆಳಗಿಸಿ, ಶ್ರೀ ದುರ್ಗಾ ಸಪ್ತಶತಿ ಪಠಿಸಿ

ಕುಟು೦ಬದೊಟ್ಟಿಗೆ ದೇವಿಗೆ ಆರತಿ ಮಾಡಿ, ಸಿದ್ದಿರಾತ್ರಿ ಮಂತ್ರ ಹೇಳಿ

ಇದನ್ನೂ ಓದಿ: ಇಂದು ಶಾಂತ ಸ್ವರೂಪಿ ದೇವಿ ಮಹಾಗೌರಿ ಆರಾಧನೆ: ಪೂಜೆ ವಿಧಾನ, ಮಹತ್ವ

ದೇವಿಗೆ ಈ ವಸ್ತುಗಳನ್ನು ಅರ್ಪಿಸಿ

ದುರ್ಗಾರ್ಚನ ವಿಧಾನದ ಪ್ರಕಾರ, ನವಮಿ ದಿನಾ೦ಕದ೦ದು, ಕಂಚಿನ ಪಾತ್ರೆಯಲ್ಲಿ ತೆಂಗಿನ ನೀರು & ತಾಮ್ರದ ಪಾತ್ರೆಯಲ್ಲಿ ಜೇನುತುಪ್ಪವನ್ನು ದೇವಿಗೆ ಅರ್ಪಿಸಬೇಕು. ಕಾಳಿಕಾ ಪುರಾಣದಲ್ಲಿ ಒ೦ದು ಮಡಕೆ ಅಥವಾ ಕುಂಬಳಕಾಯಿಯನ್ನು ಕೂಡ ನೀಡಬಹುದು. ಕಬ್ಬಿನ ರಸವನ್ನು ದೇವಿಗೆ ಅರ್ಪಿಸಬಹುದು.

ಸಿದ್ಧಿದಾತ್ರಿ ಪೂಜಾ ಮಂತ್ರ

ಓಂ ದೇವಿ ಸಿದ್ದಿಧಾತ್ರಿಯೆ ನಮಃ ಓಂ ದೇವಿ ಸಿದ್ಧಿಧಾತ್ರಿಯೇ ನಮಃ ಸಿದ್ಧ ಗಂಧರ್ವ ಯಕ್ಷರಸುರೈರಮಾರೈರಪಿ ಸೆವ್ಯಾಮಾನಾ ಸದಾಭುಯಾತ್ ಸಿದ್ದಿದಾ సిద్ధిదాయిని ||

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.