Gruhalakshmi yojana : ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಬೆಟ್ಟದಂತಹ ನಿರೀಕ್ಷೆ ಮಂಜಿನಂತೆ ಕರಗುವ ಸಮಯ ಬಂದಿದೆ. ಗೃಹಲಕ್ಷ್ಮೀ ಯೋಜನೆಯ ಎರಡು ಕಂತಿನ ಹಣ ಬಿಡುಗಡೆ ಮಾಡುತ್ತಿದ್ದು, ನಾಲ್ಕು ಸಾವಿರ ರೂ. ಮಹಿಳಾ ಮಣಿಗಳಿಗೆ ಅನುಕೂಲ ಆಗಿದೆ.
ಹೌದು, ಈ ಕುರಿತು ಮಾಹಿತಿ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಗೃಹಲಕ್ಷ್ಮಿ ಯೋಜನೆಯ ಜುಲೈ & ಆಗಸ್ಟ್ ತಿಂಗಳ ಹಣ 2 ಕಂತಿನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಅ.7 & 9ರಂದು ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ. ನವರಾತ್ರಿ ಹಬ್ಬದ ವೇಳೆ 2 ಕಂತಿನ ಗೃಹಲಕ್ಷ್ಮಿ ಹಣ ನಿಮಗೆಲ್ಲಾ ಬರುತ್ತಿದ್ದು, ಹಣ ಸಿಕ್ಕ ಬಳಿಕ ಭರ್ಜರಿಯಾಗಿ ಹೋಳಿಗೆ ಊಟ ಮಾಡಿ, ಅದೇ ನನಗೆ ಸಂತೋಷ. ಗೃಹಲಕ್ಷ್ಮಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬಗರ್ ಹುಕುಂ ಜಮೀನು ನೀಡಲು ಸರ್ಕಾರ ಕ್ರಮ; ಏನಿದು ‘ಬಗರ್ ಹುಕುಂ’..?
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಿದ್ದು, ಈವರೆಗೂ ಬರೋಬ್ಬರಿ 1ಕೋಟಿ 24 ಲಕ್ಷಕ್ಕೂ ಅಧಿಕ ಮನೆಯ ಯಜಮಾನಿಯರು ಈ ಯೋಜನೆ ನೊಂದಣಿ ಮಾಡಿಕೊಂಡಿದ್ದಾರೆ.