Gruhalakshmi yojana : ಮನೆ ಒಡತಿಯರಿಗೆ ಗುಡ್ ನ್ಯೂಸ್; ಗೃಹಲಕ್ಷ್ಮಿಯರ ಖಾತೆಗೆ ₹6,000..!

Gruhalakshmi yojana : ಗೃಹಲಕ್ಷ್ಮಿ ಹಣ ಸರಿಯಾದ ಸಮಯಕ್ಕೆ ಖಾತೆ ಸೇರುತ್ತಿಲ್ಲ. ಹೀಗಾಗಿ ರಾಜ್ಯದ ಮನೆ ಒಡತಿಯರು ಬೇಸರಗೊಂಡಿದ್ದು, ಗೃಹಲಕ್ಷ್ಮೀ ಯೋಜನೆಯ ಹಣ ತಮ್ಮ ಖಾತೆಗೆ ಸೇರುವುದು ಯಾವಾಗ ಎಂದು ಕಾಯುತ್ತಿದ್ದಾರೆ. ಇದೇ ವೇಳೆ…

Gruhalakshmi yojana

Gruhalakshmi yojana : ಗೃಹಲಕ್ಷ್ಮಿ ಹಣ ಸರಿಯಾದ ಸಮಯಕ್ಕೆ ಖಾತೆ ಸೇರುತ್ತಿಲ್ಲ. ಹೀಗಾಗಿ ರಾಜ್ಯದ ಮನೆ ಒಡತಿಯರು ಬೇಸರಗೊಂಡಿದ್ದು, ಗೃಹಲಕ್ಷ್ಮೀ ಯೋಜನೆಯ ಹಣ ತಮ್ಮ ಖಾತೆಗೆ ಸೇರುವುದು ಯಾವಾಗ ಎಂದು ಕಾಯುತ್ತಿದ್ದಾರೆ.

ಇದೇ ವೇಳೆ ʻಗೃಹಲಕ್ಷ್ಮಿʼಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಶುಭ ಸುದ್ದಿ ನೀಡಿದ್ದು, ಈ ತಿಂಗಳು ಸೇರಿಸಿದರೆ ಬಾಕಿ ಉಳಿದಿರೋ ಒಟ್ಟು 3 ತಿಂಗಳ ಹಣ (₹6,000) ಬಾಕಿಯಿದ್ದು, ಅದನ್ನು ಶೀಘ್ರವೇ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಯಜಮಾನಿಯರಿಗೆ ಬಿಗ್ ಶಾಕ್; ಗೃಹಲಕ್ಷ್ಮಿ ಯೋಜನೆಯ ರದ್ದತಿ ಪಟ್ಟಿ ಬಿಡುಗಡೆ!

Vijayaprabha Mobile App free

Gruhalakshmi yojana : ಖಾತೆಗೆ ಹಣ, ಮುಗಿಯದ ಗೋಳು..!

ಆದರೆ,  ಕಳೆದೆರಡು ತಿಂಗಳಿಂದ ಬರದಿರುವ ಹಣ ಒಂದೇ ಬಾರಿ ಮನೆ ಯಜಮಾನಿಯರ ಅಕೌಂಟ್‌ಗೆ ಪಾವತಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಜುಲೈ, ಆಗಸ್ಟ್ ಮತ್ತು ಈ ತಿಂಗಳ ಹಣ ಖಾತೆಗಳಿಗೆ ವರ್ಗಾವಣೆಯಾಗುವುದು ಬಾಕಿ ಉಳಿದಿದೆ. ಆದರೆ, ಅನೇಕ ಮಹಿಳೆಯರಿಗೆ ಜೂನ್‌ ಹಣವೇ ಸಿಕ್ಕಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಚಾಕುನಿಂದ ಚುಚ್ಚಿ ಭೀಕರ ಕೊಲೆ; ರಕ್ತದ ಮಡುವಿನಲ್ಲೇ ಪ್ರಾಣ ಬಿಟ್ಟ ವ್ಯಕ್ತಿ..!

Gruhalakshmi yojana help desk : ಹೆಲ್ಪ್ ಡೆಸ್ಕ್ ಆರಂಭ.!

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಮಾಹಿತಿಗಾಗಿ ತಾಲೂಕುವಾರು ಹೆಲ್ಪ್ ಡೆಸ್ಕ್ ತೆರೆಯಲಾಗಿದ್ದು, ಸೂಕ್ತ ಮಾಹಿತಿ ನೀಡಲು ತಾಲ್ಲೂಕುವಾರು ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಇನ್ನು, ಇಲ್ಲಿಯವರೆಗೂ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳದೇ ಇರುವ ಫಲಾನುಭವಿಗಳು ಗ್ರಾಮ ಒನ್, ದಾವಣಗೆರೆ ಒನ್, ಸೇವಾಸಿಂಧೂ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ SBI ಯಿಂದ ಸಿಗಲಿದೆ 15,000; ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.