Dairy farming | ಹೈನುಗಾರಿಕೆ ಪ್ರೋತ್ಸಾಹಿಸಲು 57,000 ರೂ ಸಹಾಯಧನ, 1.60 ಲಕ್ಷ ಸಾಲ ಸೌಲಭ್ಯ; ಸರ್ಕಾರದ ಯೋಜನೆಗಳು ಇಲ್ಲಿವೆ

Dairy farming : ಹೈನುಗಾರಿಕೆ  ಪ್ರೋತ್ಸಾಹಿಸಲು ನಬಾರ್ಡ್ ಯೋಜನೆ, ಅಮೃತ ಸಿರಿ ಯೋಜನೆ ಸೇರಿದಂತೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವು ಯಾವುವು ನೋಡೋಣ Dairy farming ಸರ್ಕಾರದಿಂದ ಸಹಾಯಧನ ಹೈನುಗಾರಿಕೆಗೆ (Dairy…

Dairy farming

Dairy farming : ಹೈನುಗಾರಿಕೆ  ಪ್ರೋತ್ಸಾಹಿಸಲು ನಬಾರ್ಡ್ ಯೋಜನೆ, ಅಮೃತ ಸಿರಿ ಯೋಜನೆ ಸೇರಿದಂತೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವು ಯಾವುವು ನೋಡೋಣ

Dairy farming ಸರ್ಕಾರದಿಂದ ಸಹಾಯಧನ

ಹೈನುಗಾರಿಕೆಗೆ (Dairy farming) ರಾಜ್ಯ ಸರ್ಕಾರವು 57,000 ರೂ. ಸಹಾಯಧನ ನೀಡುತ್ತಿದೆ. ಈ ಸಹಾಯಧನ ಪಡೆಯಲು ಸ್ವಂತ ಭೂಮಿ ಹೊಂದಿರುವ ರೈತರು, ಹತ್ತಿರದ ಪಶು ಸಂಗೋಪನೆ ಇಲಾಖೆ ಕಾರ್ಯಾಲಯಕ್ಕೆ ಭೇಟಿ ನೀಡಿ, ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಬೇಕು.

ಇದನ್ನೂ ಓದಿ: NAMO Drone Didi Scheme | ಮಹಿಳೆಯರಿಗೆ ಉಚಿತವಾಗಿ ₹8 ಲಕ್ಷ; ಪ್ರಯೋಜನಗಳು, ಅರ್ಹತೆ, ಅರ್ಜಿ ಪ್ರಕ್ರಿಯೆ ಹೇಗೆ?

Vijayaprabha Mobile App free

Dairy farming ನಬಾರ್ಡ್ ಯೋಜನೆ

ಈ ಯೋಜನೆಯಡಿ, ಡೈರಿ ವ್ಯವಹಾರಕ್ಕಾಗಿ ತೆಗೆದುಕೊಳ್ಳುವ ಸಾಲದ ಮೇಲೆ ಸಬ್ಸಿಡಿ ಪಡೆಯಬಹುದು. ಈ ಯೋಜನೆಯಡಿ SC/ST ಫಲಾನುಭವಿಗಳಿಗೆ ಶೇ.33ರಷ್ಟು ಸಬ್ಸಿಡಿ ಹಾಗೂ ಸಾಮಾನ್ಯ ವರ್ಗದವರಿಗೆ ಶೇ.25ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಗರಿಷ್ಠ 25 ಲಕ್ಷ ರೂ. ಸಾಲ ಪಡೆಯಲು ಅವಕಾಶವಿದೆ.

Dairy farming ಮಹಿಳೆಯರಿಗೆ ಸಹಾಯಧನ

ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು, ಎಮ್ಮೆಖರೀದಿಗಾಗಿ ಪಡೆಯುವ ಸಾಲದ (ರೂ. 65000/-) ಮೇಲಿನ ಬಡ್ಡಿಯನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ 6% ಬಡ್ಡಿ ಸಹಾಯಧನ ನೀಡಲಾಗುತ್ತಿದೆ.

ಸಂಚಾರಿ ಪಶು ಚಿಕಿತ್ಸಾ ಘಟಕ ಜಾನುವಾರು ಆರೋಗ್ಯ & ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ರೈತರ ಮನೆಬಾಗಿಲಿಗೆ ತುರ್ತು ಅಗತ್ಯ ಪಶುವೈದ್ಯಕೀಯ ಸೇವೆಗಳನ್ನು ಒದಗಿಸಲು 290 ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ವಾಹನಗಳನ್ನು ಒದಗಿಸಿದೆ. ಜಾನುವಾರುಗಳಿಗೆ 24/7 ನಿರಂತರ ತುರ್ತು ಸೇವೆಯನ್ನು ಒದಗಿಸಲು 8277100200 ಸಹಾಯವಾಣಿಯನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: Bhagyalakshmi yojana : ಕರ್ನಾಟಕ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋಜನಗಳು

ಕಿಸಾನ್ ಕ್ರೆಡಿಟ್ ಕಾರ್ಡ್

ಅಲ್ಪಾವದಿ ಆರ್ಥಿಕ ನೆರವು ಪಡೆಯಲು ಈ ಯೋಜನೆ ಉತ್ತಮ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ರೂ.1.60 ಲಕ್ಷ ಸಾಲ ಸೌಲಭ್ಯ ಪಡೆಯಬಹುದು. ಸಾಲಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ನೀಡುತ್ತಿದ್ದು, ಸಕಾಲದಲ್ಲಿ ಮರುಪಾವತಿ ಮಾಡಿದರೆ ಹೆಚ್ಚುವರಿಯಾಗಿ ವಾರ್ಷಿಕ ಶೇ. 3 ರಷ್ಟು ಬಡ್ಡಿ ಸಹಾಯಧನ ಪಡೆಯಬಹುದು.

ಜಾನುವಾರು ವಿಮೆ

ರಾಜ್ಯದ ಎಲ್ಲಾ ಜಾನುವಾರು ಮಾಲೀಕರು ಗರಿಷ್ಠ 10 ಜಾನುವಾರು ಘಟಕಗಳಿಗೆ ವಿಮೆಯನ್ನು ಮಾಡಿಸಬಹುದು. ಒಟ್ಟು ಪ್ರೀಮಿಯಂ ಮೇಲಿನ ಸಹಾಯಧನ ಶೇ. 85% ಫಲಾನುಭವಿಯ ವಂತಿಕೆ ವಿಮೆಗೆ ಶೇ. 15% ಆಗಿದೆ

ಅಮೃತ ಸಿರಿ ಯೋಜನೆ

ಇಲಾಖೆಯ ಎಲ್ಲಾ ಜಾನುವಾರು ಕ್ಷೇತ್ರಗಳಲ್ಲಿ ಲಭ್ಯವಿರುವ ಹೆಚ್ಚುವರಿ ಹಸು, ಎಮ್ಮೆಗಳನ್ನು ಅಮೃತಸಿರಿ ಯೋಜನೆಯಡಿಯಲ್ಲಿ ತಳಿಗಳು ಲಭ್ಯವಿರುವ ಜಿಲ್ಲೆಗಳಲ್ಲಿ ರೈತರು, ದೇವವಾಸಿಯರು, ವಿಧವೆಯರು, ಶವಸಂಸ್ಕಾರ ಕಾರ್ಮಿಕರಿಗೆ ವಿತರಿಸಲಾಗುತ್ತದೆ. ಆ ಮೂಲಕ ಹೆಚ್ಚು ದೇಶಿ ತಳಿಯ ಹಸುಗಳ ಸಾಕಾಣಿಕೆ ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.