Gold price : ದೀಪಾವಳಿಗೆ ಚಿನ್ನ ಖರೀದಿಸುವವರಿಗೆ ಮತ್ತೆ ಶಾಕ್ ನೀಡಿದ್ದು, ಮತ್ತೆ ಚಿನ್ನದ ಬೆಲೆ (Gold price) 710 ರೂ. ಏರಿಕೆಯಾಗಿದೆ.
ಹೌದು, ವಾರಾಂತ್ಯದಲ್ಲೂ ಚಿನ್ನದ ಬೆಲೆ ಗ್ರಾಮ್ಗೆ 65 ರೂನಷ್ಟು ಹೆಚ್ಚಳವಾಗಿದ್ದು, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು, ವಿದೇಶದ ಮಾರುಕಟ್ಟೆಗಳಲ್ಲಿ ಕಳೆದ ಒಂದೆರಡು ವಾರದಿಂದ ಚಿನ್ನದ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಯಗಳಾಗಿಲ್ಲವಾದರೂ, ಭಾರತದ ಮಾರುಕಟ್ಟೆಯಲ್ಲಿ ತೀವ್ರ ಮಟ್ಟದ ಏರಿಕೆ ಆಗುತ್ತಿದೆ.
ಇದನ್ನೂ ಓದಿ: Jio Bharat | ಭರ್ಜರಿ ದೀಪಾವಳಿ ಆಫರ್; ಅಂಬಾನಿಯಿಂದ 4G ಫೋನ್ 700ರೂ.ಗಿಂತ ಕಡಿಮೆ ಬೆಲೆಗೆ!
ಇನ್ನು, ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಮತ್ತೆ ದಾಖಲೆ ಮಟ್ಟ ತಲುಪಿದ್ದು, ನಿನ್ನೆ ಶನಿವಾರ 10 ಗ್ರಾಂ 100 ರೂ ಏರಿಕೆಯಾಗಿದ್ದ ಚಿನ್ನದ ಬೆಲೆ, ಇಂದು 650 ರೂ ಏರಿಕೆಯಾಗಿದ್ದು 73,600 ರೂ ಮಟ್ಟಕ್ಕೆ ಏರಿದೆ. ಇನ್ನು, 24 ಕ್ಯಾರೆಟ್ ಚಿನ್ನದ ದರವು 710 ರೂ. ಏರಿಕೆಯಾಗಿದ್ದು, 80,290 ರೂ.ಗೆ ತಲುಪಿದೆ. ಅಲ್ಲದೆ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 80,440ರೂ.ಗೆ ಜಿಗಿದಿದೆ. ಬೆಳ್ಳಿಯು ಪ್ರತಿ ಕೆಜಿಗೆ 98,000ರೂ ನಂತೆ ಮಾರಾಟವಾಗುತ್ತಿದೆ.