Bank holiday : ದೀಪಾವಳಿ ಹಬ್ಬದ (Diwali festival) ಸಂದರ್ಭದಲ್ಲಿ ಬ್ಯಾಂಕುಗಳು ಸತತ 4 ದಿನ ರಜೆ ಇರಲಿದ್ದು (Bank holiday), ಇದರಲ್ಲಿ ಭಾನುವಾರವೂ ಒಂದು ಒಳಗೊಂಡಿದೆ.
ಹೌದು, ಭಾರತದಲ್ಲಿ ಸಂಭ್ರಮದಿಂದ ಆಚರಿಸಲಾಗುವ ಹಬ್ಬಗಳಲ್ಲಿ ದೀಪಾವಳಿ ಹಬ್ಬವೂ ಒಂದು. ಈ ಹಬ್ಬದ ಸಂದರ್ಭದಲ್ಲಿ ಬ್ಯಾಂಕುಗಳು ಸತತ ನಾಲ್ಕು ದಿನ ಬಂದ್ ಆಗಿರಲಿದ್ದು, ಇದರಲ್ಲಿ ಭಾನುವಾರವೂ ಒಂದು ಒಳಗೊಂಡಿದೆ.
ಇದನ್ನೂ ಓದಿ: ದೀಪಾವಳಿ ವಿಶೇಷ: 31ರಂದು ಬೆಂಗಳೂರು-ಕಲಬುರಗಿ ಮಧ್ಯೆ ಸ್ಪೆಷಲ್ ಟ್ರೈನ್
ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ 15 ರಜೆಗಳಿದ್ದವು. ಮುಂಬರುವ ನವೆಂಬರ್ ತಿಂಗಳಲ್ಲಿ ರಜಾ ದಿನಗಳ ಸಂಖ್ಯೆ 13 ಇಡ್ಡಿ, ಕರ್ನಾಟಕದಲ್ಲಿ ಒಟ್ಟು 9 ದಿನ ಬ್ಯಾಂಕುಗಳಿಗೆ ರಜೆ ಇದೆ. ಈ ಪಟ್ಟಿಯಲ್ಲಿ ಎರಡು ಶನಿವಾರ & ನಾಲ್ಕು ಭಾನುವಾರದ ರಜೆಗಳು ಸೇರಿವೆ.
Bank holiday : ರಜಾ ದಿನಗಳ ಪಟ್ಟಿ ಇಲ್ಲಿದೆ
- ಅಕ್ಟೋಬರ್ 31, ಗುರುವಾರ: ಕಾಳಿ ಪೂಜೆ, ನರಕ ಚತುರ್ದಶಿ
- ನವೆಂಬರ್ 1, ಶುಕ್ರವಾರ: ದೀಪಾವಳಿ ಲಕ್ಷ್ಮೀ ಪೂಜೆ, ಕನ್ನಡ ರಾಜ್ಯೋತ್ಸವ
- ನವೆಂಬರ್ 2, ಶನಿವಾರ: ಬಲಿಪಾಡ್ಯಮಿ, ಗೋವರ್ಧನ ಪೂಜೆ, ವಿಕ್ರಮ್ ಸಂವತ್ ಹೊಸ ವರ್ಷದ ಆರಂಭ
- ನವೆಂಬರ್ 3, ಭಾನುವಾರ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment