MLA Moiddin Bava brother dead body : ಮಾಜಿ ಶಾಸಕ ಮೊಯಿದ್ದೀನ್ ಬಾವ (Former MLA Mohiuddin Bava) ಅವರ ಸಹೋದರ ಹಾಗೂ ಉದ್ಯಮಿ ಮಮ್ತಾಜ್ ಅಲಿ ಮೃತದೇಹ ಇದೀಗ ಮಂಗಳೂರಿನ ಕುಳೂರು ಸೇತುವೆ ಕೆಳಗೆ ಪತ್ತೆಯಾಗಿದೆ.
ಹೌದು, ಉದ್ಯಮಿ ಮಮ್ತಾಜ್ ಅಲಿ ಅವರು ನಿನ್ನೆ ಮುಂಜಾನೆ ಮನೆಯಿಂದ ನಾಪತ್ತೆಯಾಗಿದ್ದು, ಕುಳೂರು ಸೇತುವೆ ಮೇಲೆ ಅವರ ಕಾರು ಡ್ಯಾಮೇಜ್ ಆದ ಸ್ಥಿತಿಯಲ್ಲಿ ಕುಳೂರಿನ ಸೇತುವೆ ಮೇಲೆ ಪತ್ತೆಯಾಗಿತ್ತು. ಅಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು. ನದಿಯಲ್ಲಿ ರಕ್ಷಣಾ ತಂಡಗಳು ನಿನ್ನೆಯಿಂದ ಶೋಧಕಾರ್ಯ ನಡೆಸುತ್ತಿದ್ದವು. ಇದೀಗ ನದಿಯಲ್ಲಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಮಾಜಿ ಶಾಸಕನ ಸಹೋದರ ನಾಪತ್ತೆಗೆ BIG ಟ್ವಿಸ್ಟ್: ಸೂಸೈಡ್ ಶಂಕೆ
ಸದ್ಯ ಬಂದಿರುವ ಮಾಹಿತಿ ಪ್ರಕಾರ, ಮಮ್ತಾಜ್ ಅಲಿ ಅವರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಆದರೆ, ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೋ ಅಥವಾ ನೀರಿಗೆ ಆಕಸ್ಮಿಕವಾಗಿ ಬಿದ್ದಿದಾರೆಯೋ ಎಂಬುದು ಖಚಿತವಾಗಲಿದೆ.




