Sania Mirza : ಟೆನಿಸ್ ದಿಗ್ಗಜೆ ಸಾನಿಯಾ ಮಿರ್ಜಾ (Sania Mirza) ಅವರ ಎರಡನೇ ಮದುವೆ ಸುದ್ದಿ ಜೋರಾಗಿ ಕೇಳಿಬರುತ್ತಿರುವ ಬೆನ್ನಲ್ಲೇ, ಸಾನಿಯಾ ಮಿರ್ಜಾ ಜೊತೆಗಿನ ವಿಚ್ಛೇದನದ (divorce) ಬಳಿಕ ಶೋಯೆಬ್ ಮಲಿಕ್ (Shoaib Malik) ನೀಡಿರುವ ಜೀವನಾಂಶ (Alimony) ಎಷ್ಟು ಎಂಬ ವಿಚಾರ ಕೂಡ ಸದ್ದು ಮಾಡುತ್ತಿದೆ.
ಹೌದು, ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಟೆನಿಸ್ ದಿಗ್ಗಜೆ ಸಾನಿಯಾ ಮಿರ್ಜಾ ಅವರ ದಾಂಪತ್ಯ ಜೀವನ ಅಂತ್ಯಗೊಂಡಿದ್ದು, ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಆದರೆ, ಇದೆಲ್ಲದರ ನಡುವೆ ಟೆನಿಸ್ ತಾರೇ ಸಾನಿಯಾ ಮಿರ್ಜಾ ಅವರು ಎರಡನೇ ಮದುವೆ ಆಗಲಿದ್ದಾರೆ ಎಂಬ ವದಂತಿ ಸಹ ಹರಡುತ್ತಿದೆ.
ಸಾನಿಯಾ ಮಿರ್ಜಾಗೂ ಮೊದಲು ಶೋಯೆಬ್ ಮಲಿಕ್ ಅವರು ಆಯೇಷಾ ಎಂಬುವರನ್ನು ಮದುವೆಯಾಗಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗೆಯೆ ಇವರಿಬ್ಬರು ವಿಚ್ಛೇದನವನ್ನು ಪಡೆದುಕೊಂಡರು. ವಿಚ್ಛೇದನದ ಬಳಿಕ ಆಯೇಷಾಳಿಗೆ ಕ್ರಿಕೆಟಿಗ ಶೋಯೆಬ್ ಮಲಿಕ್ ಜೀವನಾಂಶವಾಗಿ 15 ಕೋಟಿ ರೂಪಾಯಿ ಜೀವನಾಂಶ ನೀಡಿದರು ಎನ್ನಲಾಗುತ್ತದೆ.
ಇನ್ನು, ಮಾಧ್ಯಮ ವರದಿಗಳ ಪ್ರಕಾರ ಶೋಯೆಬ್ ಮಲಿಕ್ 230 ಕೋಟಿ ಮೌಲ್ಯದ ಆಸ್ತಿಯ ಒಡೆಯ ಎನ್ನಲಾಗಿದ್ದು, ಮೊದಲ ಪತ್ನಿಗೆ ನೀಡಿದ ಜೀವನಾಂಶದ ಮೊತ್ತಕ್ಕಿಂತ ಸಾನಿಯಾಗೆ ಹೆಚ್ಚು ಜೀವನಾಂಶ ನೀಡಿರಬಹುದು ಎಂಬ ಅನುಮಾನ ಅನೇಕರನ್ನು ಕಾಡುತ್ತಿದ್ದು, ಇದು ಎಷ್ಟು ಎಂದು ಇನ್ನೂ ಸ್ಪಷ್ಟವಾಗಿಲ್ಲ.
ಸಾನಿಯಾ ಮಿರ್ಜಾ 2010 ರಲ್ಲಿ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದು, ವಿಚ್ಛೇದನದ ಮೂಲಕ ದಂಪತಿ ಬೇರ್ಪಟ್ಟಿದ್ದಾರೆ. ಸದ್ಯ ಶೋಯೆಬ್ ಮಲಿಕ್‌ನಿಂದ ಬೇರ್ಪಟ್ಟ ನಂತರ ಟೆನಿಸ್ ತಾರೇ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.