2 ದಿನದ ಹಿಂದೆ ಬೆಂಗಳೂರಿನಲ್ಲಿ ಸಂಚಲನ ಸೃಷ್ಟಿಸಿದ್ದ ಯುವತಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣ ತಿರುವು ಪಡೆದಿದ್ದು ಸಂತ್ರಸ್ತೆ ವಿರುದ್ಧವೇ ದೂರು ದಾಖಲಾಗಿದೆ.
ಪಾನಮತ್ತಳಾಗಿದ್ದ ಯುವತಿ ಕಾರು ಚಲಾಯಿಸಿ ತಮ್ಮ ಆಟೋಗೆ ಡಿಕ್ಕಿ ಹೊಡೆದು ಪರಾರಿಯಾಗಿರುವುದಾಗಿ ಚಾಲಕ ದೂರು ನೀಡಿದ್ದಾರೆ.
ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಬ್‌ನಲ್ಲಿ ಪಾರ್ಟಿ ಮುಗಿಸಿ ಅಪರಿಚಿತ ವ್ಯಕ್ತಿ ಬೈಕ್‌ನಲ್ಲಿ ತೆರಳುವ ವೇಳೆ ಅತ್ಯಾಚಾರ ಯತ್ನವಾಗಿತ್ತು.
ಅದಕ್ಕೂ ಮೊದಲು ಆಕೆ ಸ್ನೇಹಿತನ ಜತೆ ಕಾರು ಚಲಾಯಿಸಿ ಆಟೊಕ್ಕೆ ಡಿಕ್ಕಿ ಹೊಡೆದಿದ್ದಳು ಎನ್ನಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment