ದೇಶದ ದೂರಸಂಪರ್ಕ ಸೇವಾ ವಲಯದ ಪ್ರಮುಖ ಕಂಪನಿಯಾದ ಏರ್‌ಟೆಲ್, ‘ಏರ್‌ಟೆಲ್ ಬ್ಲ್ಯಾಕ್’ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆಯಿಂದ ಗ್ರಾಹಕರು ಒಂದೇ ಬಿಲ್ ಪಾವತಿಸಿ 3 ಸೇವೆಗಳನ್ನು ಪಡೆಯಬಹುದಾಗಿದೆ.
ಹೌದು ನೀವು 1 ಬಿಲ್ ಪಾವತಿಯಿಂದ ಏರ್‌ಟೆಲ್ ಎಕ್ಸ್‌ಟ್ರೀಮ್ ಡಿಟಿಎಚ್, ಏರ್‌ಟೆಲ್ ಫೈಬರ್ ಬ್ರಾಡ್‌ಬ್ಯಾಂಡ್ ಮತ್ತು ಏರ್‌ಟೆಲ್ ಮೊಬೈಲ್ ಸೇವೆಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಈ ಯೋಜನೆಯಲ್ಲಿ ಒಟ್ಟು 4 ಪ್ಲಾನ್‌ಗಳನ್ನು ಪರಿಚಯಿಸಲಾಗಿದೆ ಎಂದು ಕಂಪನಿಯ ಮಾರುಕಟ್ಟೆ ಮತ್ತು ಸಂವಹನ ವಿಭಾಗದ ನಿರ್ದೇಶಕ ತಿಳಿಸಿದ್ದಾರೆ.
ಏರ್ಟೆಲ್ ಬ್ಲಾಕ್ ಯೋಜನೆಗಳು ರೂ.998 ರಿಂದ ಪ್ರಾರಂಭವಾಗುತ್ತವೆ. ಏರ್ಟೆಲ್ ಎಕ್ಸ್ಟ್ರೀಮ್ ಬ್ರಾಡ್ಬ್ಯಾಂಡ್ ಯೋಜನೆ ರೂ .499 ರಿಂದ ಪ್ರಾರಂಭವಾಗುತ್ತದೆ. ಡಿಟಿಎಚ್ ಸರ್ವಿಸ್ ರೀಚಾರ್ಜ್ ರೂ.153 ರಿಂದ ಪ್ರಾರಂಭವಾಗುತ್ತದೆ. ಅಲ್ಲದೆ, ಪೋಸ್ಟ್‌ಪೇಯ್ಡ್ ಮೊಬೈಲ್ ಯೋಜನೆಗಳು ರೂ. 499 ರಿಂದ ಪ್ರಾರಂಭವಾಗುತ್ತವೆ. ಅಂದರೆ ಈ ಮೂರಕ್ಕೂ 1150 ರೂ. ಆಗುತ್ತದೆ.
ಏರ್ಟೆಲ್ ಬ್ಲಾಕ್ ಅಡಿಯಲ್ಲಿ ಕಂಪನಿಯು 4 ಯೋಜನೆಗಳನ್ನು ನೀಡುತ್ತಿದೆ. ನೀವು ರೂ .998 ಯೋಜನೆಯನ್ನು ತೆಗೆದುಕೊಂಡರೆ, ನಿಮಗೆ ಎರಡು ಪೋಸ್ಟ್‌ಪೇಯ್ಡ್ ಸಂಪರ್ಕಗಳು ಮತ್ತು ಒಂದು ಡಿಟಿಎಚ್ ಸಂಪರ್ಕ ಸೇವೆ ಸಿಗುತ್ತದೆ. ಇನ್ನು, 1349 ರೂ. 1598 ಮತ್ತು 2099 ರೂ. ಕೂಡ ಇವೆ. ನಿಮ್ಮ ಪ್ಲ್ಯಾನ್ ಆಧಾರದ ಮೇಲೆ ನೀವು ಪಡೆಯುವ ಪ್ರಯೋಜನಗಳು ಸಹ ಬದಲಾಗುತ್ತವೆ.