ನವದೆಹಲಿ: ಆನ್‌ಲೈನ್ ವಂಚನೆ ಮತ್ತು ಫಿಶಿಂಗ್‌ಗಳನ್ನು ತಡೆಗಟ್ಟಲು ವಾಣಿಜ್ಯ ಸಂದೇಶಗಳನ್ನು ಪತ್ತೆಹಚ್ಚಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಡಿಸೆಂಬರ್ 1 ರಿಂದ ಅಂದರೆ ಇಂದಿನಿಂದ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಇತ್ತೀಚೆಗೆ ಸೈಬರ್ ಕ್ರೈಮ್ ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.
ಟ್ರೇಸ್‌ಬಿಲಿಟಿ ನಿಯಮ ಹೊಸ OTP ಪತ್ತೆಹಚ್ಚುವಿಕೆ ನಿಯಮಗಳನ್ನು ಸೇರಿದಂತೆ APK ಫೈಲ್‌ಗಳು ಮತ್ತು ಮೋಸದ ಸಂದೇಶಗಳನ್ನು ಟೆಲಿಕಾಂ ಕಂಪನಿಗಳು ನಿರ್ಬಂಧಿಸುವುದಿಲ್ಲ. ಅದಲ್ಲದೆ ಸರ್ಕಾರದ ಈ ನಿರ್ಧಾರದಿಂದ ಬ್ಯಾಂಕಿಂಗ್‌ನಂತಹ ಪ್ರಮುಖ ವಹಿವಾಟುಗಳಿಗೆ, ಇನ್ನಿತರ ಕಾರ್ಯಗಳಿಗೆ ಒಟಿಪಿಗಳು ವಿಳಂಬವಾಗುತ್ತವೆ ಎನ್ನುವ ಆತಂಕ ಉಂಟಾಗಿದೆ.
ಆದರೆ ಇದಕ್ಕೆ TRAI ಉತ್ತರಿಸಿದ್ದು, ನಕಲಿ ಒಟಿಪಿಗಳಿಂದ ಜನರು ಅತಿ ಹೆಚ್ಚಾಗಿ ಮೋಸ ಹೋಗುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆ ಇದನ್ನು ತಡೆಯಲು ಈ ಹೊಸ ನಿಯಮವನ್ನು ತರಲಾಗಿದೆ. ಇನ್ನು ಮುಂದೆ ಒಟಿಪಿಗಳು ತಡವಾಗದಂತೆ ಕಾಳಜಿ ವಹಿಸುತ್ತೇವೆ ಎಂದು TRAI ಸ್ಪಷ್ಟಪಡಿಸಿದೆ.