ಹಿಂದಿನ ದಿನದ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರ ನಿನ್ನೆ ನಡೆದ ಕೇಂದ್ರ ಬಜೆಟ್ ಘೋಷಣೆ ಬಳಿಕ ಆಭರಣಗಳು ದುಬಾರಿಯಾಗಿದ್ದು, ಚಿನ್ನ-ಬೆಳ್ಳಿ ಬೆಲೆಯು ಗಗನಕ್ಕೇರಿದೆ.
ಹೌದು, ಕರ್ನಾಟಕದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 540ರೂ ಏರಿಕೆಯಾಗಿ 57,870ರೂ.(ನಿನ್ನೆ 57,330)ಗೆ ತಲುಪಿದೆ. ಹಾಗೆಯೇ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯೂ 500 ರೂ ಹೆಚ್ಚಳವಾಗಿ 53,050 ರೂ.(ನಿನ್ನೆ 52,550) ಆಗಿದೆ. ಇನ್ನು, ಬೆಳ್ಳಿ ಬೆಲೆಯಲ್ಲಿಯೂ 1500 ರೂ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ.76,000(ನಿನ್ನೆ ರೂ.74,500) ಆಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.