Avocado fruit : ತೂಕ ಇಳಿಕೆ ಆವಕಾಡೊ ಹಣ್ಣಿನಲ್ಲಿರುವ (Avocado fruit) ಆರೋಗ್ಯಕರ ಕೊಬ್ಬು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುವುದರಿಂದ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುತ್ತದೆ.
Avocado fruit : ಆವಕಾಡೊ ಹಣ್ಣಿನ ಆರೋಗ್ಯಕರ ಪ್ರಯೋಜನಗಳು
- ಆವಕಾಡೊ ಹಣ್ಣಿನ ಸೇವನೆಯಿಂದ ಸಕ್ಕರೆ ಮಟ್ಟ ನಿಯಂತ್ರಣ
- ಆವಕಾಡೊ ಹಣ್ಣಿನಿಂದ ಮೂಳೆಗಳ ಆರೋಗ್ಯ
- ಆವಕಾಡೊ ಹಣ್ಣಿನ ಸೇವನೆಯಿಂದ ದೃಷ್ಟಿ ಸುಧಾರಿಸುತ್ತದೆ
- ಆವಕಾಡೊ ಹಣ್ಣು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
ಇದನ್ನೂ ಓದಿ: Colon Cancer | ಕರುಳಿನ ಕ್ಯಾನ್ಸರ್ ತಡೆಯಲು ಸಹಾಯ ಮಾಡುವ ಅದ್ಬುತ ಆಹಾರಗಳು ಇಲ್ಲಿವೆ..!
1. ಆವಕಾಡೊ ಹಣ್ಣಿನ ಸೇವನೆಯಿಂದ ಸಕ್ಕರೆ ಮಟ್ಟ ನಿಯಂತ್ರಣ
ಮಧುಮೇಹಿಗಳು ಆವಕಾಡೊ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹೆಚ್ಚಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ.
2. ಆವಕಾಡೊ ಹಣ್ಣಿನಿಂದ ಮೂಳೆಗಳ ಆರೋಗ್ಯ
ಆವಕಾಡೊಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುವದರಿಂದ ಇದರ ನಿಯಮಿತ ಬಳಕೆಯು ನಿಮ್ಮ ಮೂಳೆ ಬಲಪಡಿಸುತ್ತದೆ. ಕೀಲು ನೋವು, ಊತ & ಉರಿಯೂತ ನಿವಾರಿಸುತ್ತದೆ.
3. ಆವಕಾಡೊ ಹಣ್ಣಿನ ಸೇವನೆಯಿಂದ ದೃಷ್ಟಿ ಸುಧಾರಿಸುತ್ತದೆ
ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿದೋಷ ಹೊಂದಿದ್ದರೇ ಈ ಆವಕಾಡೊ ಹಣ್ಣಿನ ಸೇವನೆ ಪರಿಣಾಮಕಾರಿಯಾಗಿದೆ. ಇದು ಕಣ್ಣಿನ ದೃಷ್ಟಿ ಸುಧಾರಿಸಲು ಸಹಕಾರಿಯಾಗಿದೆ.
4. ಆವಕಾಡೊ ಹಣ್ಣು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
ಆವಕಾಡೊ ಹಣ್ಣಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ರಂಜಕ, ತಾಮ್ರ ಮತ್ತು ಸತುವಿನಂತಹ ಅನೇಕ ಪೋಷಕಾಂಶ ಸಮೃದ್ಧವಾಗಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯರಕ್ತನಾಳದ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Green chilies | ಹಸಿಮೆಣಸಿನ ಕಾಯಿಯ ಅದ್ಭುತ ಅರೋಗ್ಯ ಪ್ರಯೋಜನಗಳು