Gram Panchayat by-election : ರಾಜ್ಯ ರಾಜಕೀಯದಲ್ಲಿ ಹಗರಣಗಳ ಮಧ್ಯೆ ಇತ್ತೀಚೆಗೆ ಬೈಎಲೆಕ್ಷನ್ ಘೋಷಣೆ ಮಾಡಲಾಗಿತ್ತು. ಈ ನಡುವೆ ರಾಜ್ಯದ 531 ಗ್ರಾಮ ಪಂಚಾಯಿತಿಗಳಲ್ಲಿ (Gram Panchayat) ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ (by-election) ಘೋಷಣೆ ಮಾಡಲಾಗಿದೆ.
ಹೌದು, ಇತ್ತೀಚೆಗೆ ಚುನಾವಣಾ ಆಯೋಗವು ಸಂಡೂರು, ಶಿಗ್ಗಾಂವ್ ಹಾಗೂ ಚನ್ನಪಟ್ಟಣಕ್ಕೆ ಉಪಚುನಾವಣೆಯನ್ನು ಘೋಷಣೆ ಮಾಡಿದ್ದು, ಈಗ ನಾನಾ ಕಾರಣಗಳಿಂದಾಗಿ ತೆರವಾಗಿರುವ ರಾಜ್ಯದ 195 ತಾಲೂಕಿನ 531 ಗ್ರಾಮ ಪಂಚಾಯತಿಗಳ ಒಟ್ಟು 641 ಸ್ಥಾನಗಳಿಗೆ ರಾಜ್ಯ ಚುನಾವಣಾ ಉಪ ಚುನಾವಣೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಮಾತೃಶ್ರೀ ಯೋಜನೆಯಡಿ 12 ಸಾವಿರ ರೂ ; ಅರ್ಜಿ ಸಲ್ಲಿಕೆ ಹೇಗೆ?
ಇನ್ನು, ಈ ಚುನಾವಣೆ ನವೆಂಬರ್ 21 ರಂದು ಮತದಾನ ನಡೆಯಲಿದ್ದು, ನವೆಂಬರ್ 26 ರಂದು ಮತ ಎಣಿಕೆ ನಡೆಯಲಿದೆ. ಕರ್ನಾಟಕದ ಮೂರು ಕ್ಷೇತ್ರಗಳು ಸೇರಿ ವಿವಿಧ ರಾಜ್ಯಗಳ 47 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.