ಹೈದರಾಬಾದ್: ಪಂಜಾಗುಟ್ಟದಲ್ಲಿರುವ ಶ್ರೀಕೃಷ್ಣ ಜ್ಯುವೆಲ್ಲರಿ ಶೋರೂಂನಲ್ಲಿ ಕಳ್ಳತನ ನಡೆದಿದ್ದು, ಶೋರೂಂನ ಉದ್ಯೋಗಿಗಳೇ 6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಶೋರೂಂನ ಮ್ಯಾನೇಜರ್ ಕೂಡ ನಾಪತ್ತೆಯಾಗಿದ್ದಾರೆ. ಉದ್ಯೋಗಿಗಳಾದ ಉದಯ್ ಕುಮಾರ್, ಚಿಂಟು, ಸತ್ಯ, ಅಜಯ್, ಟಿಂಕು ಮತ್ತು ಚಂದ್ರಮ್ ಶ್ರೀಕಾಂತ್ ಬಬ್ಬೂರಿ, ವ್ಯವಸ್ಥಾಪಕ ಸುಕೇತು ಶಾ ಸೇರಿ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ.
ಮತ್ತೊಂದು ಬೆಳವಣಿಗೆಯಲ್ಲಿ, ಮ್ಯಾನೇಜರ್‌ನ ಪತ್ನಿ ಬಂಜಾರಾಹಿಲ್ಸ್ ಪೊಲೀಸರಿಗೆ ನಾಪತ್ತೆ ದೂರು ಸಲ್ಲಿಸಿದ್ದು, ಆಭರಣ ಅಂಗಡಿಯ ಆಡಳಿತ ಮಂಡಳಿಯ ಕಿರುಕುಳದಿಂದ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ. ಆಕೆ ಪತ್ರ ಮತ್ತು ವಿಡಿಯೋವನ್ನು ಪೊಲೀಸರಿಗೆ ಸಲ್ಲಿಸಿದ್ದಾಳೆ.