Urinary tract infection | ಮೂತ್ರನಾಳದ ಸೋಂಕನ್ನು ತಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Urinary tract infection : ಶಾಲೆಗೆ ಹೋಗುವ ಮಕ್ಕಳು ಸಾಮಾನ್ಯವಾಗಿ ಶಾಲೆಯಲ್ಲಿ ಹೆಚ್ಚು ನೀರು ಕುಡಿಯುವುದಿಲ್ಲ ಈ ಕಾರಣದಿಂದಾಗಿ ಮೂತ್ರನಾಳದ ಸೋಂಕು (urinary tract infections) ಹೆಚ್ಚಾಗುತ್ತಿದೆ. ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ಶಾಲೆಗೆ ಹೋಗುವ ಮಕ್ಕಳು…

Urinary Tract Infection

Urinary tract infection : ಶಾಲೆಗೆ ಹೋಗುವ ಮಕ್ಕಳು ಸಾಮಾನ್ಯವಾಗಿ ಶಾಲೆಯಲ್ಲಿ ಹೆಚ್ಚು ನೀರು ಕುಡಿಯುವುದಿಲ್ಲ ಈ ಕಾರಣದಿಂದಾಗಿ ಮೂತ್ರನಾಳದ ಸೋಂಕು (urinary tract infections) ಹೆಚ್ಚಾಗುತ್ತಿದೆ.

ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು

ಶಾಲೆಗೆ ಹೋಗುವ ಮಕ್ಕಳು ದೀರ್ಘಕಾಲದವರೆಗೆ ಮೂತ್ರ ಹಿಡಿದಿಟ್ಟುಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಮಕ್ಕಳು ಈ ರೀತಿ ಮಾಡುವುದರಿಂದ ಮೂತ್ರಕೋಶದಲ್ಲಿ ಬ್ಯಾಕ್ಟಿರಿಯಾ ಹೆಚ್ಚಾಗುತ್ತದೆ ಎಂದು ವೈದ್ಯರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Fruits and vegetables | ಹೃದಯಾಘಾತದಿಂದ ದೂರ ಇರಿಸಬಲ್ಲ ಹಣ್ಣು ಮತ್ತು ತರಕಾರಿಗಳು

Vijayaprabha Mobile App free

ಕೊಳಕು ಶೌಚಾಲಯಗಳ ಬಳಕೆ

ಸಾಮಾನ್ಯವಾಗಿ ಶಾಲೆಗಳಲ್ಲಿ ಹಲವಾರು ಮಕ್ಕಳು ಒಂದೇ ಶೌಚಾಲಯಗಳನ್ನು ಬಳಕೆ ಮಾಡುವುದರಿಂದ ಆ ಶೌಚಾಲಯಗಳು ಸ್ವಚ್ಛವಾಗಿರುವುದಿಲ್ಲ. ಹಾಗಾಗಿ ಅಂತಹ ಕೊಳಕು ಶೌಚಾಲಯಗಳನ್ನು ಬಳಸುವುದರಿಂದಲೂ ಮೂತ್ರದ ಸೋಂಕಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ಸೋಂಕಿನ ಲಕ್ಷಣಗಳು

  • ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು & ಉರಿಯೂತ.
  • ಆಗಾಗ ಮೂತ್ರ ವಿಸರ್ಜನೆ ಮಾಡುವುದು.
  • ಮೂತ್ರದಲ್ಲಿ ರಕ್ತ ಕಂಡುಬರುವುದು.
  • ಜ್ವರ ಮತ್ತು ಆಯಾಸ.
  • ಹೊಟ್ಟೆಯಲ್ಲಿ ನೋವು.

ಇದನ್ನೂ ಓದಿ: Yogurt | ರಾತ್ರಿ ಮೊಸರು ಸೇವಿಸಿದರೆ ಇವೆ ಅನೇಕ ಆರೋಗ್ಯ ಸಮಸ್ಯೆಗಳು

ಸೋಂಕು ತಡೆಯಲು ಹೀಗೆ ಮಾಡಿ

ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಉತ್ತಮ ಅಭ್ಯಾಸಗಳನ್ನು ಕಲಿಸಬೇಕು. ದಿನಕ್ಕೆ ಸರಿಯಾದ ಪ್ರಮಾಣದ ನೀರು ಕುಡಿಯುವಂತೆ ನೋಡಿಕೊಳ್ಳಬೇಕು. ಶೌಚಾಲಯವನ್ನು ಹೇಗೆ ಬಳಸಬೇಕೆಂದು ಅವರಿಗೆ ಕಲಿಸಬೇಕು. ಸೂಕ್ಷ್ಮ ಪ್ರದೇಶಗಳ ಸ್ವಚ್ಛತೆಯ ಬಗ್ಗೆಯೂ ಅವರಿಗೆ ವಿವರವಾಗಿ ತಿಳಿ ಹೇಳಬೇಕು ಎಂದು ವೈದ್ಯರು ಹೇಳುತ್ತಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.