Magha Purnima : ಮಾಘ ಮಾಸದಲ್ಲಿ ಬರುವ ಪೂರ್ಣಿಮೆಯನ್ನು ಮಾಘ ಪೂರ್ಣಿಮೆ (Magha Purnim) ಎ೦ದು ಕರೆಯಲಾಗುತ್ತದೆ. ಈ ದಿನದಂದು ವಿಷ್ಣು, ಲಕ್ಷ್ಮಿ & ಶಿವನನ್ನು ಪೂಜಿಸಿ ಉಪವಾಸ ಮಾಡುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರಾಗುತ್ತವೆ. ನಂಬಿಕೆಗಳ ಪ್ರಕಾರ, ಈ ದಿನ ಸಂಗಮದಲ್ಲಿ ಸ್ನಾನ ಮಾಡುವುದರಿ೦ದ ಎಲ್ಲಾ ಪಾಪಗಳು ನಾಶವಾಗಿ, ಮೋಕ್ಷ ಸಿಗುತ್ತದೆ.
ಮಾಘ ಪೂರ್ಣಿಮೆ ಯಾವಾಗ?
ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಘ ಮಾಸದ ಹುಣ್ಣಿಮೆಯು ಫೆಬ್ರವರಿ 11 ರ ಮಂಗಳವಾರ ಸಂಜೆ 6:55 ಕ್ಕೆ ಪ್ರಾರಂಭವಾಗಿ, ಫೆಬ್ರವರಿ 12 ರ ಬುಧವಾರ ಸಂಜೆ 7:22 ಕ್ಕೆ ಕೊನೆಗೊಳ್ಳುತ್ತದೆ. ಉದಯ ದಿನಾಂಕದ ಪ್ರಕಾರ, ಈ ಬಾರಿ ಮಾಘ ಪೂರ್ಣಿಮೆ ಉಪವಾಸವನ್ನು ಫೆಬ್ರವರಿ 12 ರಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: Rashi bhavishya | ಮಂಗಳವಾರದ ರಾಶಿ ಭವಿಷ್ಯ,11 ಫೆಬ್ರವರಿ 2025
ವ್ರತ ವಿಧಿ
ಈ ದಿನ ಸೂರ್ಯೋದಯಕ್ಕೆ ಮು೦ಚಿತವಾಗಿ ಎಚ್ಚರಗೊಂಡು ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ನಂತರ, ಸೂರ್ಯನಿಗೆ ಅರ್ಥ್ಯವನ್ನು ಅರ್ಪಿಸಿ, ಉಪವಾಸ ಮಾಡಲು ಸಂಕಲ್ಪ ಮಾಡಿ, ವಿಷ್ಣು ಪೂಜೆ ಮಾಡಬೇಕು. ಪೂಜೆಯ ಸಮಯದಲ್ಲಿ, ವ್ರತ ಕಥೆಯನ್ನು ಕ್ರಮಬದ್ಧವಾಗಿ ಪಠಿಸಿ. ಈ ದಿನ, ಹಾಲಿನೊ೦ದಿಗೆ ಬೆರೆಸಿದ ನೀರನ್ನು ಅರಳಿ ಮರಕ್ಕೆ ಅರ್ಪಿಸಬೇಕು & ತುಪ್ಪದ ದೀಪವನ್ನು ಬೆಳಗಬೇಕು.
ಈ ಆಹಾರ ಸೇವಿಸಿ
- ಹಣ್ಣು ಒಣ ಹಣ್ಣುಗಳನ್ನು ತಿನ್ನಿ
- ಹಾಲಿನಿ೦ದ ಮಾಡಿದ ಸಿಹಿತಿಂಡಿಗಳನ್ನು ತಿನ್ನಿ
- ಸಿಹಿ ಗೆಣಸನ್ನು ತಿನ್ನಬಹುದು
ಇದನ್ನೂ ಓದಿ: Jaya Ekadashi | ಜಯ ಏಕಾದಶಿಯಂದು ಈ ಕೆಲಸ ಮಾಡಿದರೆ ಕಷ್ಟಗಳಿಂದ ಮುಕ್ತಿ
ಇವುಗಳನ್ನು ಸೇವಿಸಬೇಡಿ
- ಮಾಂಸಾಹಾರವನ್ನು ಸೇವಿಸಬಾರದು
- ಮದ್ಯ ಸೇವಿಸಬಾರದು
- ಮಾದಕ ದ್ರವ್ಯಗಳಿಂದ ದೂರವಿರಿ
- ಎಳ್ಳೆಣ್ಣೆಯನ್ನು ಸೇವಿಸಬಾರದು
- ಕೆಂಪು ತರಕಾರಿಗಳನ್ನು ತಿನ್ನಬಾರದು
- ಉಪ್ಪನ್ನು ಸೇವಿಸಬಾರದು