65% ಸೆಲ್ ಫೋನ್ ಬಳಕೆದಾರರು ಮಲಗುವಾಗ ತಮ್ಮ ಸೆಲ್ ಫೋನ್‌ಗಳನ್ನು ಹಾಸಿಗೆಯ ಮೇಲೆ ಇಟ್ಟು ಮಲಗುತ್ತಾರೆ. ಒಂದು ಭಾಗದ ಜನರು ವಾಸ್ತವವಾಗಿ ಧ್ಯಾನ ಅಥವಾ ವಿಶ್ರಾಂತಿ ಅಪ್ಲಿಕೇಶನ್‌ಗಳು/ಸಂಗೀತಕ್ಕಾಗಿ ಇದನ್ನು ಬಳಸಬಹುದಾದರೂ, ನಿಮ್ಮ ಸೆಲ್ ಫೋನ್‌ಗಳನ್ನು ಪಕ್ಕದಲ್ಲಿ ಇಟ್ಟು ಮಲಗುವಾಗ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಲಿದ್ದು, ಇದರಿಂದ ಕ್ಯಾನ್ಸರ್, ನಿದ್ರಾಹೀನತೆ ಸಮಸ್ಯೆ ಸೇರಿದಂತೆ ಇತರೆ ಅರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಪಕ್ಕದಲ್ಲಿ ಫೋನ್ ಇಟ್ಟು ಮಲಗಿದರೆ ಉಂಟಾಗುವ ಅರೋಗ್ಯ ಸಮಸ್ಯೆಗಳು
- ಕ್ಯಾನ್ಸರ್ ಬೆಳವಣಿಗೆ
- ನಿದ್ರಾಹೀನತೆ ಸಮಸ್ಯೆಗೆ ಕಾರಣ
- ಮಾನಸಿಕ ಆರೋಗ್ಯ, ಒತ್ತಡ
- ಚಿಕ್ಕ ಮಕ್ಕಳಿಗೆ ಮೆದುಳಿನ ಕಾಯಿಲೆ
ಇದನ್ನೂ ಓದಿ: Drinking water | ಈ ಹಣ್ಣುಗಳನ್ನು ತಿಂದ ಬಳಿಕ ನೀರು ಕುಡಿದರೆ ಆರೋಗ್ಯ ಹಾನಿ
1. ಕ್ಯಾನ್ಸರ್ ಬೆಳವಣಿಗೆ
ಮೊಬೈಲ್ ಫೋನ್ ನಿಂದ ಬರುವ ನಿಸ್ತಂತು ವಿಕಿರಣವು ತುಂಬಾ ಹಾನಿಕಾರಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗಲಿದೆ ಎಂದು ಹೇಳಿದೆ.
ಹಾಸಿಗೆಯಲ್ಲಿ ಮೊಬೈಲ್ ಫೋನ್ ಬಳಕೆ ಮಾಡಿದರೆ ಆಗ ಇದರಿಂದ ತಲೆಯ ಕ್ಯಾನ್ಸರ್ ಬೆಳವಣಿಗೆಯಾಗುವ ಸಾಧ್ಯತೆ ಇದೆ. ಇದು ಮೆದುಳಿನ ಕಾರ್ಯ ಹಾಗೂ ಅರಿವಿನ ಮೇಲೆ ಪರಿಣಾಮ ಬೀರುತ್ತದೆ.
2. ನಿದ್ರಾಹೀನತೆ ಸಮಸ್ಯೆಗೆ ಕಾರಣ
ನೀಲಿ ಬೆಳಕು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುವುದು ಎಂದು ಅಧ್ಯಯನಗಳು ಹೇಳಿದ್ದು, ಇದು ನಮ್ಮ ಸಿರ್ಕಾಡಿಯನ್ ಲಯದ ಮೇಲೆ ತುಂಬಾ ಪ್ರಬಲವಾಗಿ ಪರಿಣಾಮ ಬೀರುವುದು.
ಇದನ್ನೂ ಓದಿ: Urinary Tract Infection | ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? ಇಲ್ಲಿದೆ ಮಾಹಿತಿ
3. ಮಾನಸಿಕ ಆರೋಗ್ಯ, ಒತ್ತಡ
ಹಾಸಿಗೆಯಲ್ಲಿ ಮೊಬೈಲ್ ಬಳಕೆಯಿಂದ ಮಾನಸಿಕ ಆರೋಗ್ಯ ಹದಗೆಡುತ್ತದೆ. ಇದು ಖಿನ್ನತೆಯ ಅಪಾಯ ಹೆಚ್ಚಿಸುತ್ತದೆ. ಅದರಲ್ಲೂ ಹದಿಹರೆಯದವರಲ್ಲಿ ಇದರ ಸಾಧ್ಯತೆಯು ಅಧಿಕ. ಇದು ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುವುದು.
4. ಚಿಕ್ಕ ಮಕ್ಕಳಿಗೆ ಮೆದುಳಿನ ಕಾಯಿಲೆ
ಅಲ್ಲದೇ ಚಿಕ್ಕ ಮಕ್ಕಳ ಬಳಿ ಮೊಬೈಲ್ ಇಡುವದರಿಂದ ಮೆದುಳಿನ ಕಾಯಿಲೆಗಳು ಬರುತ್ತವೆ. ಹೀಗಾಗಿ ಮಲಗುವ ವೇಳೆ ಮೊಬೈಲ್ ನ್ನು ದೂರವಿಡಬೇಕು ಎ೦ದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ.