Year Horoscope 2025 : ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 2025 ರಲ್ಲಿ 12 ರಾಶಿಗಳ ವರ್ಷ ಭವಿಷ್ಯ ಹೇಗಿರಲಿದೆ? ಎಂಬುದರ ಮಾಹಿತಿ ಇಲ್ಲಿದೆ ನೋಡಿ
ಮೇಷ ರಾಶಿ ಭವಿಷ್ಯ (Mesha rashi Year Horoscope 2025)

2025 ರಲ್ಲಿ ಧನಪ್ರಾಪ್ತಿ ಯೋಗ ಮೇಷ ರಾಶಿಯವರಿಗೆ ಕಟ್ಟಿಟ್ಟ ಬುತ್ತಿಯಾಗಿದೆ. ಹೊಸ ವರ್ಷದಲ್ಲಿ ನಿಮ್ಮ ಪ್ರತಿಯೊಂದು ಹೆಜ್ಜೆಗಳು ಕೂಡ ಪೂರ್ತಿಯಾಗುವಂತಹ ಸಾಧ್ಯತೆಗಳಿವೆ. ಜೀವನ ಸಂಗಾತಿಯ ಜೊತೆಗೆ ನಿಮ್ಮ ಬಾ೦ಧವ್ಯ ಉತ್ತಮ & ಅವರು ನೀಡುವಂತಹ ಸಲಹೆಗಳು ಕೂಡ ನಿಮ್ಮ ಜೀವನಕ್ಕೆ ಸಾಕಷ್ಟು ಲಾಭಕಾರಿಯಾಗಿ ಸಾಬೀತಾಗಲಿದೆ.
ಇದನ್ನೂ ಓದಿ: Rashi bhavishya | ಈ ಐದು ರಾಶಿಗಳಿಗೆ ಮದುವೆಯ ಶುಭಯೋಗದಿಂದ ಹೊಸ ವರ್ಷ ಪ್ರಾರಂಭ
ವೃಷಭ ರಾಶಿ ಭವಿಷ್ಯ (Vrushabha Year Horoscope 2025)

ಹೊಸ ವರ್ಷ ವೃಷಭ ರಾಶಿಯವರಿಗೆ ಸ್ವಲ್ಪಮಟ್ಟಿಗೆ ಏರಿಳಿತವನ್ನು ತರಲಿದೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕೆಲವೊ೦ದು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಿ ಬರುತ್ತದೆ..ಹೊಸವರ್ಷದಲ್ಲಿ ಧನಪ್ರಾಪ್ತಿಯಾಗುವ೦ತಹ ಸಂಭಾವ್ಯತೆ ಇದೆ ಹಾಗೂ ನೀವು ಕಷ್ಟಪಟ್ಟು ಮಾಡಿರುವ೦ತಹ ಕೆಲಸಕ್ಕೆ ಸರಿಯಾದ ಪ್ರತಿಫಲ ದೊರಕಲಿದೆ
ಇದನ್ನೂ ಓದಿ: Rashi bhavishya | ಈ ರಾಶಿಯವರ ಅತ್ತೆ ಸೊಸೆ ಜಗಳ ಸದಾ ಇದ್ದು ನೆಮ್ಮದಿ ಇಲ್ಲದ ವಾತಾವರಣ
ಮಿಥುನ ರಾಶಿ ಭವಿಷ್ಯ (Mithuna rashi Year Horoscope 2025)

ಹೊಸ ವರ್ಷದಲ್ಲಿ ಮಿಥುನ ರಾಶಿಯವರ ಬಾಯಿಮಾತಿನಿ೦ದಾಗಿ ಕೆಲವೊಂದು ಕೆಟ್ಟ ಫಲಿತಾಂಶವನ್ನು ಎದುರಿಸಬೇಕಾಗಿ ಬರಬಹುದಾಗಿದೆ. ಲವ್ ಮ್ಯಾರೇಜ್ ಆಗುವ೦ತಹ ಸಾಧ್ಯತೆ ಕೂಡ 2025 ರಲ್ಲಿ ಇದ್ದು, ಸರ್ಕಾರಿ ಕೆಲಸಗಳಲ್ಲಿ ನಿಮಗೆ ಲಾಭ ಆಗಲಿದೆ ಹಾಗೂ ನಿಮ್ಮ ಕುಟು೦ಬ ಸದಸ್ಯರಲ್ಲಿ ಯಾರಿಗಾದರೂ ಈ ಸಂದರ್ಭದಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ: Rashi bhavishya | ಈ ರಾಶಿಯವರ ವ್ಯಾಪಾರದಲ್ಲಿ ಧನ ಲಾಭ, ವಿವಾಹ ಯೋಗ
ಕರ್ಕಾಟಕ ರಾಶಿ ಭವಿಷ್ಯ (Karkataka rashi Year Horoscope 2025)

ಕರ್ಕ ರಾಶಿಯವರಿಗೆ ಹೊಸ ವರ್ಷದಲ್ಲಿ ಸಾಕಷ್ಟು ಆರ್ಥಿಕ ಲಾಭಗಳು ದೊರಕಲಿದೆ. ಬಿಸಿನೆಸ್ ಅಥವಾ ಅಂಗಡಿ ಮುಂಗಟ್ಟುಗಳನ್ನು ನೀವು ಮಾಡಿಕೊ೦ಡಿದ್ದರೆ ಖ೦ಡಿತವಾಗಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಸ೦ದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯ ಜೊತೆಗೆ ನಿಮ್ಮ ಬಾ೦ಧವ್ಯ ಉತ್ತಮವಾಗಿರಲಿದೆ ಹಾಗೂ ಅವರು.ನೀಡುವಂತಹ ಸಲಹೆಗಳನ್ನು ಪಾಲಿಸಿದರೆ ಖಂಡಿತವಾಗಿ ನಿಮಗೆ ಲಾಭ ಸಿಗುತ್ತದೆ.
ಸಿಂಹ ರಾಶಿ ಭವಿಷ್ಯ (Simha rashi bhavishya)

2025 ಸಿಂಹ ರಾಶಿಯವರಿಗೆ ಲಾಭದಾಯಕವಾಗಿರಲಿದೆ ಹಾಗೂ ಹಣಕಾಸಿನ ವಿಚಾರದಲ್ಲಿ ಕೂಡ ಹೆಚ್ಚಿನ ಆದಾಯವನ್ನು ಸ೦ಪಾದಿಸಬಹುದಾಗಿದೆ. ನಿಮ್ಮಜ್ಞಾನ ಹಾಗೂ ಅನುಭವ ಎನ್ನುವುದು ನಿಮ್ಮ ಕೆಲಸದಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗ ಆಗಲಿದ್ದು ಇದಕ್ಕೆ ಹಿರಿಯ ಅಧಿಕಾರಿಗಳಿಂದಲೂ ಕೂಡ ಮೆಚ್ಚುಗೆ ಸಿಗಲಿದೆ. ಹೊಸ ವರ್ಷದಲ್ಲಿ ಸಮಾಜದಲ್ಲಿ ನಿಮಗಿರುವಂತಹ ಗೌರವ ಕೂಡ ಹೆಚ್ಚಾಗಲಿದೆ.
ಕನ್ಯಾ ರಾಶಿ ಭವಿಷ್ಯ (Kanya rashi bhavishya)

ಹೊಸ ವರ್ಷವು ಕನ್ಯಾ ರಾಶಿಯವರಿಗೆ ಅದೃಷ್ಟ ಹೆಚ್ಚಾಗಿದೆ. ‘ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಕೂಡ ಹೆಚ್ಚಳ ಕಂಡು ಬರಲಿದೆ. ನಿಮ್ಮ ಪ್ರತಿಯೊ೦ದು ಕೆಲಸಗಳು ಕೂಡ ಸಫಲತೆಯನ್ನು ಕಾಣಲಿವೆ. ಸಮಾಜದಲ್ಲಿ ನಿಮಗಿರುವಂತಹ ಗೌರವ ಹಾಗೂ ಸ್ಥಾನಮಾನಗಳು ಹೆಚ್ಚಾಗಲಿವೆ. 2025 ರಲ್ಲಿ ಕೈತುಂಬ ಹಣ ಸಂಪಾದನೆ ಆಗಲಿದೆ.
ತುಲಾ ರಾಶಿ ಭವಿಷ್ಯ (Tula rashi bhavishya)

ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ನೀವು ಸಫಲತೆಯನ್ನು ಸಾಧಿಸಲಿದ್ದೀರಿ.. ವ್ಯಾಪಾರಿಗಳಿಗೆ ಲಾಭದ ಜೊತೆಗೆ ಮಾರುಕಟ್ಟೆಯಲ್ಲಿ ಮೌಲ್ಯ ಕೂಡ ಹೆಚ್ಚಾಗಲಿದೆ. ಅದೃಷ್ಟದ ಸಹಾಯದಿ೦ದಾಗಿ 2025 ರಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಸಂಪೂರ್ಣವಾಗಿ ಸುಧಾರಣೆ ಕಾಣಲಿದೆ.
ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)

ತಮ್ಮ ಬುದ್ಧಿವ೦ತಿಕೆಯಿ೦ದಾಗಿ ವೃಶ್ಚಿಕ ರಾಶಿಯವರು ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ 2025ರಲ್ಲಿ ಸಫಲತೆಯ ಸಾಧಿಸಲಿದ್ದಾರೆ. ಹೊಸ ಉದ್ಯಮ, ದಾಂಪತ್ಯ ಜೀವನ ಉತ್ತಮವಾಗಿರಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳಲಿದ್ದೀರಿ.
ಧನಸ್ಸು ರಾಶಿ ಭವಿಷ್ಯ (Dhanu rashi bhavishya)

ಹೊಸ ವರ್ಷ ಧನುರಾಶಿಯ ಜಾತಕದವರಿಗೆ ಮಧ್ಯಮ ಫಲಿತಾಂಶವನ್ನು ತರಲಿದೆ. ನಿಮ್ಮಲ್ಲಿ ಹೆಚ್ಚಾಗುವಂತಹ ಅಹಂ ಭಾವನೆಯಿ೦ದಾಗಿ ನಿಮ್ಮ ಪ್ರೀತಿ ಪಾತ್ರವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಬೇರೆಯವರ ಸಲಹೆಗಳನ್ನು ಕೇಳಿಸಿಕೊಳ್ಳುವಷ್ಟು ತಾಳ್ಮೆ ನಿಮ್ಮ ಬಳಿ ಇರುವುದಿಲ್ಲ.
ಮಕರ ರಾಶಿ ಭವಿಷ್ಯ (Makara rashi bhavishya)

ಕೆಲಸ ಮಾಡುವ ಸಂದರ್ಭದಲ್ಲಿ ಹೊಸ ವರ್ಷ ಮಕರ ರಾಶಿಯ ಜಾತಕದವರು ಸ್ವಲ್ಪಮಟ್ಟಿಗೆ ಜಾಗರೂಕರಾಗಿರಬೇಕಾಗಿದ್ದು, ಅರ್ಧಕ್ಕೆ ಸಿಕ್ಕಿಹಾಕಿಕೊಂಡ ಹಣ ಈ ಸಂದರ್ಭದಲ್ಲಿ ಸಿಗುವಂತಹ ಸಾಧ್ಯತೆಯಿದೆ. ವ್ಯಾಪಾರೆ ಕ್ಷೇತ್ರದಲ್ಲಿ ಮಕರ ರಾಶಿಯ ವ್ಯಾಪಾರಿಗಳು ಅದ್ವಿತೀಯ ಲಾಭವನ್ನು ಸಂಪಾದಿಸಲಿದ್ದಾರೆ.
ಕುಂಭ ರಾಶಿ ಭವಿಷ್ಯ (Kumba rashi bhavishya)

2025 ರಲ್ಲಿ ಕುಂಭ ರಾಶಿ ಜಾತಕದವರು ಬೇರೆಯವರಿಗೆ ಸಹಾಯ ಮಾಡೋದಕ್ಕೆ ಸದಾ ಕಾಲ ಸಿದ್ದರಾಗಿರಲಿದ್ದು, ಹೊಸ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ೦ತಹೆ ಯುವಕರು ತಮ್ಮ ನೆಚ್ಚಿನ ಕೆಲಸವನ್ನು ಪಡೆದುಕೊಳ್ಳಲಿದ್ದಾರೆ. ಪ್ರಾಪರ್ಟಿ ಖರೀದಿ & ನಿಮ್ಮ ಸ್ವಂತ ಮನೆಯನ್ನು ಕೂಡ ನೀವು ನಿರ್ಮಿಸಲಿದ್ದು, ಸರ್ಕಾರಿ ಕ್ಷೇತ್ರದಲ್ಲಿ ಕೂಡ ಹೊಸ ವರ್ಷ ನಿಮಗೆ ಲಾಭ ಸಿಗಲಿದೆ.
ಮೀನ ರಾಶಿ ಭವಿಷ್ಯ (Meena rashi bhavishya)

2025ರಲ್ಲಿ ಮೀನ ರಾಶಿಯ ಜಾತಕದವರ ಆತ್ಮವಿಶ್ವಾಸದಲ್ಲಿ ಹೆಚ್ಚಳ ಕಂಡು ಬರಲಿದೆ. ಕಾನೂನು ಸಮಸ್ಯೆಗಳಿಂದ ನೆಮ್ಮದಿಯನ್ನು ಪಡೆದುಕೊಳ್ಳಲಿದ್ದೀರಿ. ತಂದೆ ತಾಯಿ ಆಶೀರ್ವಾದದಿಂದಲೂ ಕೂಡ ನೀವು ಹೊಸ ವರ್ಷದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ವೈವಾಹಿಕ ಸ೦ಬ೦ಧದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆಗಳು ಕಂಡುಬರಲಿವೆ.




