Drinking water : ಕೆಲವು ಆಹಾರಗಳನ್ನು ಸೇವಿಸಿದ ನಂತರ ನೀರನ್ನು ಕುಡಿಯಬೇಡಿ (Drinking water ) ಎಂದು ನಾವು ಸಾಮಾನ್ಯವಾಗಿ ಸಲಹೆ ನೀಡುತ್ತೇವೆ. ಅದರಂತೆ ಕಲ್ಲಂಗಡಿ, ಸೀಬೆಹಣ್ಣು, ಸೌತೆಕಾಯಿ, ಕಿತ್ತಳೆ, ಕಾಕ್ಡಿ, ಅನಾನಸ್, ದ್ರಾಕ್ಷಿಹಣ್ಣು, ಸ್ಟ್ರಾಬೆರಿ. ಆಹಾರವನ್ನು ಜೀರ್ಣಿಸಿಕೊಳ್ಳಲು ನಿಮ್ಮ ದೇಹಕ್ಕೆ ನಿರ್ದಿಷ್ಟ pH ಮಟ್ಟ ಬೇಕಾಗುತ್ತದೆ. ಈಗಾಗಲೇ ನೀರನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ನೀವು ನೀರನ್ನು ಸೇವಿಸಿದರೆ ಈ pH ಮಟ್ಟವು ತೊಂದರೆಗೊಳಗಾಗುತ್ತದೆ. ಇದರಿಂದ ಆರೋಗ್ಯ ಹಾನಿ ಉಂಟಾಗಬಹುದು
Drinking water : ಈ ಹಣ್ಣುಗಳನ್ನು ತಿಂದ ಬಳಿಕ ನೀರು ಕುಡಿದರೆ ಆರೋಗ್ಯ ಹಾನಿ
- ಕಲ್ಲಂಗಡಿ
- ಪೇರಳೆ
- ದಾಳಿಂಬೆ
- ಸಿಟ್ರಸ್ ಹಣ್ಣುಗಳು
- ಬಾಳೆಹಣ್ಣು
ಕಲ್ಲಂಗಡಿ
ಕೆಂಪು ಕಲ್ಲಂಗಡಿ ಹಣ್ಣು ಹೆಚ್ಚು ನೀರಿನಾಂಶ ಹೊಂದಿರುವ ಹಣ್ಣು. ಹಾಗಾಗಿ ಕಲ್ಲಂಗಡಿ ತಿಂದ ಮೇಲೆ ನೀರು ಕುಡಿಯಬಾರದು ಎ೦ದು ವೈದ್ಯರು ಹೇಳುತ್ತಾರೆ. ಹೀಗೆ ಮಾಡಿದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ತೊಂದರೆಗೊಳಗಾಗಿ ಅಜೀರ್ಣ ಉಂಟಾಗಬಹುದು.
ಇದನ್ನೂ ಓದಿ: Urinary Tract Infection | ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? ಇಲ್ಲಿದೆ ಮಾಹಿತಿ
ಪೇರಳೆ
ಪೇರಳೆ ಹಣ್ಣಿನಲ್ಲಿ ಫೈಬರ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಹೊರತುಪಡಿಸಿ ಫೋಲಿಕ್ ಆಮ್ಲ, ಪೊಟ್ಯಾಸಿಯಮ್ ಮತ್ತು ತಾಮ್ರದ ಉತ್ತಮ ಮೂಲವಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಪೇರಳೆ ಹಣ್ಣು ತಿಂದ ಮೇಲೆ ನೀರು ಕುಡಿದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಹದಗೆಡುತ್ತದೆ.
ದಾಳಿಂಬೆ
ದಾಳಿಂಬೆ ಎಲ್ಲರಿಗೂ ಇಷ್ಟವಾಗುವ ಹಣ್ಣು. ಹಾಗೂ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ ಇದನ್ನು ತಿಂದ ನಂತರ ನೀರು ಕುಡಿಯಬಾರದು. ಹೀಗೆ ಮಾಡಿದರೆ ವಾಕರಿಕೆ, ಆಮ್ಮಿಯತೆ ಮತ್ತು ವಾಂತಿ ಉಂಟಾಗುತ್ತದೆ.
ಇದನ್ನೂ ಓದಿ: Fenugreek | ತಾಯಿಯ ಎದೆಹಾಲು ಹೆಚ್ಚಿಸುವ ಮೆಂತ್ಯ ಸೊಪ್ಪಿನ ಆರೋಗ್ಯ ಪ್ರಯೋಜನಗಳು
ಸಿಟ್ರಸ್ ಹಣ್ಣುಗಳು
ಕಿತ್ತಳೆ, ಆಮ್ಲಾ, ದ್ರಾಕ್ಷಿ, ಮತ್ತು ಇತ್ಯಾದಿ ಹುಳಿ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಬಾರದು. ಇದರಿಂದ ದೇಹದ ಪಿಹೆಚ್ ಮಟ್ಟವು ಹದಗೆಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಸಹ ತೊಂದರೆಗೊಳಗಾಗುತ್ತದೆ.
ಬಾಳೆಹಣ್ಣು
ಬಾಳೆಹಣ್ಣು ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ತಿಂದ ನಂತರ ನೀರು ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ, ವಾಂತಿ ಅಥವಾ ಭೇದಿ ಕೂಡ ಆರಂಭವಾಗಬಹುದು.
ಇದನ್ನೂ ಓದಿ: Stroke | ಪಾರ್ಶ್ವವಾಯು ಬರದಂತೆ ತಡೆಯಲು ಟಾಪ್ 5 ಸಲಹೆಗಳು