Alzheimer disease : ಆಲ್‌ಝಮರ್ ಕಾಯಿಲೆ ಹಂತಹಂತವಾಗಿ ವ್ಯಕ್ತಿಯನ್ನು ಹೇಗೆಲ್ಲಾ ಕಾಡುತ್ತೆ ಗೊತ್ತಾ..?

Alzheimer disease : ಆಲ್‌ಝಮರ್ ಕಾಯಿಲೆಯು ಮೆದುಳಿನ ಅಸ್ವಸ್ಥತೆಯಾಗಿದ್ದು ಅದು ಕಾಲಾನಂತರದಲ್ಲಿ ಉಲ್ಬಣಗೊಳ್ಳುತ್ತದೆ. ಇದು ಕೆಲವು ಪ್ರೋಟೀನ್‌ಗಳ ನಿಕ್ಷೇಪಗಳಿಗೆ ಕಾರಣವಾಗುವ ಮೆದುಳಿನಲ್ಲಿನ ಬದಲಾವಣೆಗಳಿಂದ ನಿರೂಪಿಸಲ್ಪಟ್ಟಿದೆ. ಆಲ್‌ಝಮರ್ ಕಾಯಿಲೆಯು ಮೆದುಳನ್ನು ಕುಗ್ಗಿಸುತ್ತದೆ ಮತ್ತು ಮೆದುಳಿನ ಜೀವಕೋಶಗಳನ್ನು…

Alzheimer disease

Alzheimer disease : ಆಲ್‌ಝಮರ್ ಕಾಯಿಲೆಯು ಮೆದುಳಿನ ಅಸ್ವಸ್ಥತೆಯಾಗಿದ್ದು ಅದು ಕಾಲಾನಂತರದಲ್ಲಿ ಉಲ್ಬಣಗೊಳ್ಳುತ್ತದೆ. ಇದು ಕೆಲವು ಪ್ರೋಟೀನ್‌ಗಳ ನಿಕ್ಷೇಪಗಳಿಗೆ ಕಾರಣವಾಗುವ ಮೆದುಳಿನಲ್ಲಿನ ಬದಲಾವಣೆಗಳಿಂದ ನಿರೂಪಿಸಲ್ಪಟ್ಟಿದೆ.

ಆಲ್‌ಝಮರ್ ಕಾಯಿಲೆಯು ಮೆದುಳನ್ನು ಕುಗ್ಗಿಸುತ್ತದೆ ಮತ್ತು ಮೆದುಳಿನ ಜೀವಕೋಶಗಳನ್ನು ಸಾಯಿಸುತ್ತದೆ. ಆಲ್‌ಝಮರ್ ಕಾಯಿಲೆಯು ಬುದ್ಧಿಮಾಂದ್ಯತೆಗೆ ಸಾಮಾನ್ಯ ಕಾರಣವಾಗಿದೆ – ಮೆಮೊರಿ, ಆಲೋಚನೆ, ನಡವಳಿಕೆ ಮತ್ತು ಸಾಮಾಜಿಕ ಕೌಶಲ್ಯಗಳಲ್ಲಿ ಕ್ರಮೇಣ ಕುಸಿತ. ಈ ಬದಲಾವಣೆಗಳು ವ್ಯಕ್ತಿಯ ಕಾರ್ಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ.

ಇದನ್ನೂ ಓದಿ: ದಿನಕ್ಕೊಂದು ಖರ್ಜೂರ ಸೇವಿಸುವುದರಿಂದ ಆಗುವ ಪ್ರಯೋಜನಗಳು..!

Vijayaprabha Mobile App free

Alzheimer disease : ಆಲ್‌ಝಮರ್ ಕಾಯಿಲೆಯು ಹಂತಗಳು

  1. ಮೊದಲ ಹಂತ: ದೌರ್ಬಲ್ಯ ಇಲ್ಲದೆ ಇರುವುದು
  2. ಎರಡನೇ ಹಂತ: ತುಂಬಾ ಲಘು ಮರೆವು
  3. ಮೂರನೇ ಹಂತ: ಮಧ್ಯಮ ಮರೆವು
  4. ನಾಲ್ಕನೇ ಹಂತ: ಮಿತವಾದ ಮರೆವು
  5. ಐದನೇ ಹಂತ: ಮಧ್ಯಮದಿಂದ ತೀವ್ರ
  6. ಆರನೇ ಹಂತ: ತೀವ್ರ ಕುಸಿತ
  7. ಏಳನೇ ಹಂತ: ತುಂಬಾ ತೀವ್ರ ಮರೆವು

ಮೊದಲ ಹಂತ: ದೌರ್ಬಲ್ಯ ಇಲ್ಲದೆ ಇರುವುದು

ಮೊದಲನೇ ಹಂತದಲ್ಲಿ ಆಲ್‌ಝಮರ್ (Alzheimer disease) ಇರುವಂತಹ ವ್ಯಕ್ತಿಯಲ್ಲಿ ಯಾವುದೇ ರೀತಿಯ ದೌರ್ಬಲ್ಯಗಳು ಕಂಡುಬರುವುದಿಲ್ಲ. ನೆನಪಿನ ಸಮಸ್ಯೆ ಅಥವಾ ಬೇರೆ ಯಾವುದೇ ಲಕ್ಷಣಗಳು ಅವರಿಗೆ ಇರಲ್ಲ ಮತ್ತು ಬೇರೆ ಮನುಷ್ಯರಂತೆ ಸಾಮಾನ್ಯರಾಗಿರುತ್ತಾರೆ.

ಇದನ್ನೂ ಓದಿ: Gooseberry : ನೆಲ್ಲಿಕಾಯಿಯ ಆರೋಗ್ಯ ಪ್ರಯೋಜನಗಳು

ಎರಡನೇ ಹಂತ: ತುಂಬಾ ಲಘು ಮರೆವು

ವಯಸ್ಸಾದ ಕೆಲವು ಜನರಲ್ಲಿ ನೆನಪು ಕಡಿಮೆ ಆಗುವುದಲ್ಲದೆ ತಾವಿಟ್ಟ ವಸ್ತುಗಳನ್ನು ಮರೆಯುತ್ತಾರೆ. ಆದರೆ ಇದನ್ನು ಸಾಮಾನ್ಯವಾಗಿ ವಯಸ್ಸಾದ ವೇಳೆ ಕಾಡುವಂತಹ ಮರೆವು ಎಂದೇ ಭಾವಿಸಲಾಗುವುದಲ್ಲದೆ, ನೆನಪಿನ ಪರೀಕ್ಷೆ ವೇಳೆ ಇವರು ಉತ್ತಮವಾಗಿರುವರು ಮತ್ತು ಇವರ ಪ್ರೀತಿಪಾತ್ರರಿಗೆ ಅಥವಾ ವೈದ್ಯರಿಗೆ ಸಮಸ್ಯೆಯು ತಿಳಿದುಬರದು.

ಮೂರನೇ ಹಂತ: ಮಧ್ಯಮ ಮರೆವು

ಈ ಹಂತದಲ್ಲಿ ವ್ಯಕ್ತಿಗೆ ಮಾತಿನ ವೇಳೆ ಸರಿಯಾದ ಶಬ್ದವನ್ನು ಹೇಳಲು ಸಾಧ್ಯವಾಗದೆ ಇರುವುದು. ಹೊಸಬರ ಹೆಸರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಕಷ್ಟವಾಗುವುದು. ಇನ್ನು, ಮೂರನೇ ಹಂತದಲ್ಲಿ ಇರುವ ವ್ಯಕ್ತಿಗಳು ಯಾವಾಗಲೂ ತನ್ನ ವಸ್ತುಗಳನ್ನು ಮರೆಯುತ್ತಾರೆ. ಇದರಲ್ಲಿ ಕೆಲವು ಅಮೂಲ್ಯವಾದ ವಸ್ತುಗಳು ಆಗಿರಬಹುದು.

ನಾಲ್ಕನೇ ಹಂತ: ಮಿತವಾದ ಮರೆವು

ಈ ಹಂತದಲ್ಲಿ ಆಲ್‌ಝಮರ್ ಲಕ್ಷಣಗಳು ಸ್ಪಷ್ಟವಾಗಿ ಕಂಡುಬರುವುದಲ್ಲದೆ, ತಾತ್ಕಾಲಿಕ ಮರೆವು(ತಾವು ಏನು ತಿಂದಿದ್ದೇವೆ ಎನ್ನುವುದನ್ನು ಮರೆಯುವುದು) ಆರ್ಥಿಕತೆ ಮತ್ತು ಹಣ ಪಾವತಿಸಲು ಅಸಮರ್ಥರಾಗುವುದು. ತನ್ನ ಜೀವನದ ಹಿಂದಿನ ಘಟನೆಗಳನ್ನು ಸಹ ಮರೆಯುತ್ತಾರೆ.

ಇದನ್ನೂ ಓದಿ: Cupping therapy : ಕಪ್ಪಿಂಗ್ ಥೆರಪಿ ರಹಸ್ಯವೇನು ? ಯಾವ ಸಮಸ್ಯೆಗಳನ್ನು ಗುಣಪಡಿಸಲಾಗುತ್ತದೆ ?

ಐದನೇ ಹಂತ: ಮಧ್ಯಮದಿಂದ ತೀವ್ರ

ಈ ಹಂತದಲ್ಲಿರುವ ಜನರಿಗೆ ದಿನನಿತ್ಯದ ಕಾರ್ಯಗಳಲ್ಲಿ ಹೆಚ್ಚಿನ ನೆರವು ಬೇಕಾಗುವುದು. ತಮ್ಮ ಬಗ್ಗೆ ಇರುವಂತಹ ಕೆಲವು ಸರಳ ವಿಚಾರಗಳನ್ನು ಅವರು ಮರೆಯುತ್ತಾರೆ. ವ್ಯಕ್ತಿಗಳು ತಮ್ಮ ದೈನಂದಿನ ಕಾರ್ಯಗಳನ್ನು ಮಾಡಬಲ್ಲರು. ಇವರು ಸ್ನಾನ ಹಾಗೂ ಶೌಚಕ್ಕೆ ಹೋಗಬಲ್ಲರು. ಇವರಿಗೆ ತಮ್ಮ ಮನೆಯವರ ಬಗ್ಗೆ ಹಾಗೂ ತಮ್ಮ ಹಿಂದಿನ ಜೀವನದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುತ್ತದೆ. ತಮ್ಮ ಬಾಲ್ಯ ಹಾಗೂ ಯೌವನದ ಬಗ್ಗೆ ತಿಳಿದಿರುತ್ತದೆ.

ಆರನೇ ಹಂತ: ತೀವ್ರ ಕುಸಿತ

ಈ ಹಂತದಲ್ಲಿರುವ ವ್ಯಕ್ತಿಗಳಿಗೆ ಸಂಬಂಧಿಕರು ಮತ್ತು ಸ್ನೇಹಿತರ ಹೊರತಾಗಿ ಬೇರೆಯವರ ಮುಖ ಪರಿಚಯ ಆಗದೆ ಇರುವುದು. ಹಾಗೂ ತಮ್ಮ ವೈಯಕ್ತಿಕ ಇತಿಹಾಸವನ್ನು ಮರೆಯುತ್ತಾರೆ. ಶೌಚ ಹಾಗೂ ಸ್ನಾನಕ್ಕೆ ಹೋಗಬೇಕಾದರೂ ಅವರಿಗೆ ಬೇರೆಯವರ ನೆರವು ಬೇಕಾಗುವುದಲ್ಲದೆ, ನಡವಳಿಕೆ ಹಾಗೂ ವೈಯಕ್ತಿಕವಾಗಿ ಕೆಲವು ಮಹತ್ವದ ಬದಲಾವಣೆ ಆಗುತ್ತದೆ.

ಏಳನೇ ಹಂತ: ತುಂಬಾ ತೀವ್ರ ಮರೆವು

ಇದು ಅಮರ್ ಕಾಯಿಲೆಯ ಅಂತಿಮ ಹಂತ. ಈ ಹಂತದಲ್ಲಿ ಇರುವ ವ್ಯಕ್ತಿಗಳು ಸಾವಿನ ಸಮೀಪದಲ್ಲಿ ಇರುವರು. ಈ ಹಂತದಲ್ಲಿ ಇರುವ ವ್ಯಕ್ತಿಗಳು ಸರಿಯಾಗಿ ಮಾತನಾಡಲು ಮತ್ತು ವಾತಾವರಣಕ್ಕೆ ಸ್ಪಂದಿಸಲು ಆಗಲ್ಲ. ಮತ್ತು ದೈನಂದಿನ ಪ್ರತಿಯೊಂದ ಚಟುವಟಿಕೆಗೂ ನೆರವು ಬೇಕಾಗುವುದು. ಅಂತಿಮ ಹಂತದಲ್ಲಿ ಇವರಿಗೆ ನುಂಗುವುದು ಕೂಡ ಕಷ್ಟವಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.