ಸ್ಕಂದ ಮಾತೆಯ ಆರಾಧನೆ : ಇಂದು ನವರಾತ್ರಿಯ ಐದನೇ ದಿನ ಪಂಚಮಿ ತಿಥಿಯಂದು ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯ (Skandamata) ಆರಾಧನೆ ಮಾಡಲಾಗುತ್ತದೆ. ಸ್ಕಂದ ಮಾತೆ, ದೇವಿ ಪಾರ್ವತಿಯ ರೂಪಗಳಲ್ಲಿ ಒಂದಾಗಿದ್ದು ಕಾರ್ತಿಕೇಯನ ತಾಯಿಯೂ ಆಗಿದ್ದಾರೆ.
ಈ ದಿನದ ಆರಾಧನೆಯು ಶಕ್ತಿಯು, ಧೈರ್ಯ ಮತ್ತು ಶಾಂತಿಯುಳ್ಳ ಜೀವನಕ್ಕಾಗಿ ಪ್ರಾರ್ಥನೆ ಮಾಡಲಾಗುತ್ತದೆ. ಈ ಅವತಾರದಲ್ಲಿ ದೇವಿಯು ಸಿಂಹದ ಮೇಲೆ ಕುಳಿತು ತನ್ನ ಆರು ಮುಖದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವುದಾಗಿದ್ದು, ತಾಯಿಯ ಈ ಅವತಾರವು ಹೆಚ್ಚು ಶಕ್ತಿಯುತವಾದದ್ದು ಎನ್ನಲಾಗುತ್ತದೆ.
ಇದನ್ನೂ ಓದಿ: kushmanda devi : ಇಂದು ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಆರಾಧನೆ
ಪಾರ್ವತಿಯಾಗಿದ್ದ ದೇವಿಯು ಸ್ಕಂದಮಾತಾ ಆದ ಪೌರಾಣಿಕ ಹಿನ್ನೆಲೆ
ಪುರಾಣದ ಪ್ರಕಾರ, ತಾರಕಾಸುರ ಎಂಬ ರಾಕ್ಷಸನು ಬ್ರಹ್ಮ ದೇವನಿಂದ ಅಮರತ್ವದ ವರವನ್ನು ಪಡೆದಿದ್ದನು. ಆದರೆ, ಬ್ರಹ್ಮನು ತಾರಕಾಸುರನಿಗೆ ಶಿವನ ಮಗನಿಂದ ಮಾತ್ರ ಸಾವಾಗಬಹುದು ಎಂದು ಹೇಳಿದನು. ತಾರಕಾಸುರನು ಶಿವನು ಮದುವೆಯಾಗುವುದಿಲ್ಲ ಎಂದು ಭಾವಿಸಿದ್ದನು.
ಆದರೆ, ಶಿವನು ಪಾರ್ವತಿಯನ್ನು ವಿವಾಹವಾದ ನಂತರ, ಕಾರ್ತಿಕೇಯನು ಜನಿಸಿದನು ಮತ್ತು ತಾರಕಾಸುರನನ್ನು ಸಂಹರಿಸಿದನು. ಇಂತಹ ಸ್ಕಂದನಿಗೆ ತಾಯಿಯಾದ್ದರಿಂದ ಕಾರ್ತಿಕೇಯನು ಅವಳನ್ನು ಸ್ಕಂದಮಾತಾ ಎಂದು ಕರೆದ.
ಇದನ್ನೂ ಓದಿ: Tomato price : ದಿಢೀರ್ ಏರಿದ ಕೆಂಪು ಸುಂದರಿ ದರ; ಕೆ.ಜಿ ಟೊಮೆಟೊ ಬೆಲೆ 100 ರೂ!
ಈ ಕಾರಣಕ್ಕಾಗಿ ನವರಾತ್ರಿಯಲ್ಲಿ ಸ್ಕಂದ ಮಾತೆಯ ಆರಾಧನೆ ಮಾಡಬೇಕು
ಸ್ಕಂದಮಾತೆಯ ಆರಾಧನೆಯು ಭಕ್ತರಿಗೆ ಮೋಕ್ಷ, ಶಕ್ತಿ, ಸಮೃದ್ಧಿ ಮತ್ತು ಸಂಪತ್ತನ್ನು ನೀಡುತ್ತದೆ. ಸ್ಕಂದಮಾತೆಯ ಪೂಜೆ ಮಾಡಿದರೆ ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗುತ್ತದೆ ಮತ್ತು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎನ್ನಲಾಗುತ್ತದೆ.
ಈ ಅವತಾರಕ್ಕೆ ಆರಾಧನೆ ಮಾಡುವುದರಿಂದ ಜೀವನದ ಸದ್ಗತಿ ಮತ್ತು ಆಧ್ಯಾತ್ಮಿಕ ಸಂತುಷ್ಟಿಯನ್ನು ಪಡೆಯಬಹುದು. ಸ್ಕಂದಮಾತೆಯ ಆಶೀರ್ವಾದದಿಂದ ಭಕ್ತರು ದೈವಿಕ ತೇಜಸ್ಸಿನಿಂದ ಬೆಳಗುತ್ತಾರೆ. ಅವಳ ಆರಾಧನೆಯು ಅಂತಿಮವಾಗಿ ಮೋಕ್ಷಕ್ಕೆ ಸಹಕಾರಿಯಾಗಿದೆ.
ಇದನ್ನೂ ಓದಿ: ಖಾತೆಗೆ ರೂ.2,000 ಜಮಾ ಆಗಿಲ್ಲವೇ? ಹೀಗೆ ಮಾಡಿ
ಸ್ಕಂದ ಮಾತೆಯ ಆರಾಧನೆ ಮಾಡುವಾಗ ಈ ತಪ್ಪುಗಳನ್ನು ಮಾಡಬಾರದು
- ಸ್ಕಂದ ಮಾತೆಯ ಆರಾಧನೆ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು.
- ಪೂಜೆಯ ಸ್ಥಳ ಮತ್ತು ಪೂಜಾ ಸಾಮಗ್ರಿಗಳನ್ನು ಶುದ್ಧವಾಗಿಡಬೇಕು.
- ನಮಗೆ ಇಷ್ಟ ಬಂದಾಗ ಪೂಜೆ ಮಾಡಬಾರದು.
- ಆರಾಧನೆಗೆ ಸೂಕ್ತ ಸಮಯವನ್ನು ಆಯ್ಕೆ ಮಾಡಬೇಕು.
- ಪೂಜೆಯನ್ನು ಶ್ರದ್ಧೆಯಿಂದ ಮಾಡಬೇಕು ಮತ್ತು ಶುದ್ಧ ವಸ್ತ್ರಗಳನ್ನು ಧರಿಸಬೇಕು.
- ಆರಾಧನೆ ಮಾಡುವಾಗ ಮನಸ್ಸು ಶಾಂತವಾಗಿರಬೇಕು ಮತ್ತು ಏಕಾಗ್ರತೆ ಇರಬೇಕು.
- ಪೂಜೆಯ ದಿನ ಮಾಂಸಾಹಾರ ಸೇವನೆ ಮಾಡುವಂತಿಲ್ಲ.
- ಧೂಮಪಾನ, ಮದ್ಯಪಾನ ಮಾಡಬಾರದು.
- ಬೆಳಗ್ಗಿನ ಹೊತ್ತು ಮಲಗಬಾರದು.
ದುರ್ಗೆಯ 9 ರೂಪಗಳಲ್ಲಿ ಒಂದಾದ ಸ್ಕಂದ ಮಾತೆಯ ಮಹತ್ವ
ಸ್ಕಂದ ಮಾತಾ ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ದೇವಿಯ ರೂಪವಾಗಿದೆ. ಸ್ಕಂದ ಮಾತೆಯ ಪೂಜೆಯಿಂದ ಭಕ್ತರು ಮೋಕ್ಷದ ಮಾರ್ಗವನ್ನು ಪ್ರವೇಶಿಸಬಹುದು. ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ. ಮಕ್ಕಳು ಇಲ್ಲದವರಿಗೆ ಸಂತಾನ ಭಾಗ್ಯವನ್ನು ನೀಡುತ್ತಾಳೆ ಎಂಬ ನಂಬಿಕೆಯಿದ್ದು, ದೇವಿಯನ್ನು ಪೂಜಿಸಿದರೆ ಶಾಂತಿ ಮತ್ತು ಸಂತೋಷವೂ ನೆಲೆಸುತ್ತದೆ.