Rashi bhavishya : ಜಾತಕ ಇಂದು 01 ನವಂಬರ್ 2024 ಗುರುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ (Mesha rashi bhavishya)
ಈ ರಾಶಿಯವರಿಗೆ ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಲಾಭ ಸಿಗಬಹುದು, ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ, ಆಡಳಿತ ಪಕ್ಷದಿ೦ದ ನಿಮಗೆ ಬೆ೦ಬಲ ಸಿಗಲಿದೆ.
ಇದನ್ನೂ ಓದಿ : Rashi bhavishya | ಇಂದಿನ ರಾಶಿ ಭವಿಷ್ಯ; 31-10-2024 ಗುರುವಾರ
ವೃಷಭ ರಾಶಿ ಭವಿಷ್ಯ (Vrushabha rashi bhavishya)
ಈ ರಾಶಿಯವರಿಗೆ ಉದ್ಯೋಗದಲ್ಲಿ ಸ೦ತೃಪ್ತಿ, ನಿರೀಕ್ಷಿತ ವ್ಯಕ್ತಿಗಳಿ೦ದ ಸಕಾರಾತ್ಮಕ ಸ್ಪ೦ದನೆ. ಕಾರ್ಯಗಳ ನೆರವೇರಿಕೆ, ಸಣ್ಣ ಪ್ರಯಾಣ ಸಾಧ್ಯತೆ, ಅನಗತ್ಯ ವಾದ ವಿವಾದಗಳಿಂದ ದೂರವಿರಿ.
ಮಿಥುನ ರಾಶಿ ಭವಿಷ್ಯ (Mithuna rashi bhavishya)
ಈ ರಾಶಿಯವರಿಗೆ ಬದುಕಿನಲ್ಲಿ ಹೊಸ ಪಾಠಗಳು. ಹೊಸಬರ ಪರಿಚಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ ಸಿಗಲಿದ್ದು, ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ.
ಇದನ್ನೂ ಓದಿ : Deepavali | ದೀಪಾವಳಿಯ ಮುನ್ನ ಮನೆಯನ್ನು ಸ್ವಚ್ಚಗೊಳಿಸುವುದು ಯಾಕೆ ಗೊತ್ತಾ?
ಕರ್ಕಾಟಕ ರಾಶಿ ಭವಿಷ್ಯ (Karkataka rashi)
ಈ ರಾಶಿಯವರ ಬಹಳ ದಿನಗಳ ಆಸೆ ನೆರವೇರುವುದು, ಪ್ರೀತಿ ಪ್ರೇಮದ ವಿಷಯಗಳಿ೦ದ ಚಿ೦ತೆ. ಪ್ರಾರ್ಥನೆಯಿ೦ದ ಅನುಕೂಲ, ಕೆಲಸದ ಮೂಲಕ ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳಿವೆ.
ಸಿಂಹ ರಾಶಿ ಭವಿಷ್ಯ (Simha rashi)
ಈ ರಾಶಿಯವರಿಗೆ ಉತ್ತಮ ಅವಕಾಶಗಳು ಪ್ರಾಪ್ತಿ ಆಗಲಿದ್ದು, ಉದ್ಯೋಗದಲ್ಲಿ ಕೀರ್ತಿ ಸಿಗಲಿದೆ. ಉದ್ಯಮಕ್ಕೆ ಎದುರಾದ ಸಮಸ್ಯೆಗಳ ನಿವಾರಣೆ, ಕುಟು೦ಬದಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಬಹುದು.
ಕನ್ಯಾ ರಾಶಿ ಭವಿಷ್ಯ (Kanya rashi)
ಈ ರಾಶಿಯವರು ಆತ್ಮಬಲ ವೃದ್ಧಿಗೆ ಯತ್ನಿಸಿ. ಕಚೇರಿಯಲ್ಲಿ ಅನುಕೂಲದ ವಾತಾವರಣ, ಉದ್ಯಮಿ ಗೆಳೆಯನ ಅನಿರೀಕ್ಷಿತ ಭೇಟಿ, ಅನಗತ್ಯ ಕೋಪ ಮತ್ತು ಚರ್ಚೆಯನ್ನು ತಪ್ಪಿಸಿ.
ತುಲಾ ರಾಶಿ ಭವಿಷ್ಯ (Tula rashi)
ಈ ರಾಶಿಯವರಿಗೆ ಬಹುವಿಧ ಆಸಕ್ತಿ, ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಲಿದ್ದು, ಶುಭ ಸಮಯ ಆರ೦ಭವಾಗಲಿದೆ. ದೇವರ ಆಶೀರ್ವಾದ ಇರಲಿದೆ, ಮಾತಿನಲ್ಲಿ ಮಾಧುರ್ಯವಿರುತ್ತದೆ.
ವೃಶ್ಚಿಕ ರಾಶಿ ಭವಿಷ್ಯ (Vrischika rashi)
ಈ ರಾಶಿಯವರು ದೇಹಾರೋಗ್ಯದತ್ತ ಗಮನ ಹರಿಸಿ. ಹಿತಶತ್ರುಗಳ ಬಗೆಗೆ ಎಚ್ಚರವಿರಲಿ. ಸ್ವಂತ ಉದ್ಯಮಕ್ಕೆ ಪೈಪೋಟಿ ಜಾಸ್ತಿಯಿದ್ದು, ಪ್ರವಾಸಕ್ಕೆ ಹೋಗುವ ಸಾಧ್ಯತೆಗಳಿವೆ.
ಧನು ರಾಶಿ ಭವಿಷ್ಯ (Dhanu rashi)
ಈ ರಾಶಿಯವರಿಗೆ ಶ್ರಮ ಹೆಚ್ಚಾಗಲಿದೆ, ಸ೦ಗಾತಿಯ ಆರೋಗ್ಯ ಸುಧಾರಣೆಯಾಗಲಿದೆ. ಸಹೋದ್ಯೋಗಿಗಳಿ೦ದ ಸಹಾಯ, ತಾಯಿಯ ಬ೦ಧುಗಳ ಭೇಟಿ, ಎಚ್ಚರಿಕೆಯಿ೦ದ ವಾಹನ ಚಲಾಯಿಸಿ.
ಮಕರ ರಾಶಿ ಭವಿಷ್ಯ (Makara rashi)
ಈ ರಾಶಿಯವರಿಗೆ ಆತ್ಮಸ್ಥರ್ಯ ಹೆಚ್ಚಾಗಲಿದ್ದು, ಗೌರವ ಪ್ರಾಪ್ತಿ ಸಿಗಲಿದೆ. ಸ್ವಂತ ಉದ್ಯಮ ಹಂತಹಂತವಾಗಿ ಅಭಿವೃದ್ಧಿಯಾಗಲಿದೆ. ಹಳೆಯ ಮಿತ್ರನಿಂದ ಸಹಾಯ, ಅತಿಯಾದ ಕೋಪವನ್ನು ತಪ್ಪಿಸಿ.
ಕುಂಭ ರಾಶಿ ಭವಿಷ್ಯ (Kumba rashi)
ಈ ರಾಶಿಯವರಿಗೆ ಇಂದು ಮಿಶ್ರಫಲಗಳ ದಿನವಾಗಿರುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ, ಕೆಲಸದ ಭಾರ ಹೆಚ್ಚಳವಾಗಲಿದೆ. ಕೃಷಿ ಭೂಮಿ ವಿಸ್ತರಣೆಗೆ ಯೋಜನೆ, ಸ೦ಗಾತಿಯ ಆರೋಗ್ಯದ ಕಡೆ ಗಮನ ಕೊಡಿ.
ಮೀನಾ ರಾಶಿ ಭವಿಷ್ಯ (Meena rashi)
ಈ ರಾಶಿಯವರು ಮು೦ಗೋಪದ ಪ್ರವೃತ್ತಿಗೆ ಕಡಿವಾಣ ಹಾಕಿ. ಸಹೋದ್ಯೋಗಿಗಳಿ೦ದ ಮೆಚ್ಚುಗೆ ಸಿಗಲಿದ್ದು, ಸ೦ಗಾತಿಯ ಕಡೆಯಿ೦ದ ಶುಭ ವಾರ್ತೆ ಕೇಳಬಹುದು.