Rashmika Mandanna Remuneration : sacnilk.comನ ಇತ್ತೀಚಿನ ಬಾಕ್ಸ್ ಆಫೀಸ್ ವರದಿಯ ಪ್ರಕಾರ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ 645 ಕೋಟಿ ಗಳಿಕೆ ದಾಟಿದೆ ಎಂದು ಹೇಳಲಾಗಿದೆ. ಬಿಡುಗಡೆಯಾದ ಆರನೇ ದಿನಕ್ಕೆ ‘ಪುಷ್ಪ 2’ 52.50 ಕೋಟಿ ಸಂಗ್ರಹಿಸಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕೂಡ ಸಖತ್ ಮಿ೦ಚಿದ್ದಾರೆ
ಇದನ್ನೂ ಓದಿ: Pushpa-2 movie collection | ವಿಶ್ವಾದ್ಯಂತ 922 ಕೋಟಿ ಗಳಿಕೆ ಮಾಡಿದ ‘ಪುಷ್ಪ 2’ ಸಿನಿಮಾ
ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ (Rashmika Mandanna Remuneration for Pushpa 2)
ಪುಷ್ಪ ಮೊದಲ ಭಾಗದ ಸಿನಿಮಾ ಮಾಡುವಾಗ ರಶ್ಮಿಕಾ ಮಂದಣ್ಣ (Rashmika Mandanna) 3 ಕೋಟಿ ರೂಪಾಯಿ ಸಂಭಾವನೆ (Remuneration) ಪಡೆಯುತ್ತಿದ್ದರು. ಬಳಿಕ ಈಗ ಪುಷ್ಪ 2 ವರೆಗೂ ರಶ್ಮಿಕಾ ಯಶಸ್ಸು ಹೆಚ್ಚಾಗಿದೆ. ಈ ಕಾರಣಕ್ಕೆ ರಶ್ಮಿಕಾ ಪುಷ್ಪ 2 (Pushpa 2) ಸಿನಿಮಾದಲ್ಲಿ 8 ಕೋಟಿಯಿಂದ 10 ಕೋಟಿ ರೂಪಾಯಿ ಪಡೆದಿದ್ದಾರೆ ಎ೦ಬ ಸುದ್ದಿ ಕೇಳಿ ಬರುತ್ತಿದೆ.
ಇದನ್ನೂ ಓದಿ: Pushpa-2 | ಹಿಂದಿ ಬಾಕ್ಸ್ ಆಫೀಸ್ನಲ್ಲೇ 406 ಕೋಟಿ ರೂ ಬಾಚಿಕೊಂಡ ‘ಪುಷ್ಪ 2’; ಮೊದಲ ವಾರದ ಕಲೆಕ್ಷನ್ ಎಷ್ಟು?
ಪ್ಯಾನ್ ಇಂಡಿಯಾ ಸ್ಟಾರ್
ರಶ್ಮಿಕಾ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇದರಿಂದ ಅವರಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಪುಷ್ಪ 2 ಗೆಲುವಿನ ಬಳಿಕ ನಯನತಾರಾ, ದೀಪಿಕಾ ಪಡುಕೋಣೆಯ ಸಂಭಾವನೆಯನ್ನೂ ಮೀರಿ ರಶ್ಮಿಕಾ ಡಿಮ್ಯಾಂಡ್ ಇಟ್ಟಿದ್ದಾರೆಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.
ಸೂಪರ್‌ಸ್ಟಾರ್‌ಗಳಿಗೆ ಸೆಡ್ಡು
ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಲೇಡಿ ಸೂಪರ್‌ಸ್ಟಾರ್ ನಯನತಾರಾ. ಇವರಿಗೆ ಪೈಪೋಟಿ ನೀಡುತ್ತಿದ್ದವರು ತಮಿಳು ನಟಿ ತ್ರಿಶಾ. ಆದರೆ ಇದೀಗ ರಶ್ಮಿಕಾ ಇವರಿಬ್ಬರನ್ನೂ ಓವರ್ ಟೇಕ್ ಮಾಡಿದ್ದಾರೆಂಬುದು ಸುದ್ದಿ. ಅಲ್ಲದೆ ಬಾಲಿವುಡ್ ನ ದೀಪಿಕಾ ಪಡುಕೋಣೆಯನ್ನೂ ಹಿಂದಿಕ್ಕಿದ್ದಾರೆ ಎನ್ನಲಾಗಿದೆ.
Rashmika Mandanna Remuneration : ಸಂಭಾವನೆ ಏರಿಕೆ
ಪುಷ್ಪ 2 ಯಶಸ್ಸಿನ ಬಳಿಕ ರಶ್ಮಿಕಾ 16 ಕೋಟಿ ರೂಪಾಯಿಗೆ ಸಂಭಾವನೆ ಏರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ರಶ್ಮಿಕಾ ಕೈಯಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವ ಸಿಕಂದರ್, ದಿ ಗರ್ಲ್‌ಫ್ರೆಂಡ್, ಕುಬೇರ ಮತ್ತು ಹಲವು ಸಿನಿಮಾಗಳು ಇವೆ. ಈ ಚಿತ್ರಗಳಿಗೆ ಸಂಭಾವನೆ ಎಷ್ಟು ಪಡೆಯುತ್ತಾರೆ ಎನ್ನುವುದು ಕಾದು ನೋಡಬೇಕು.
ಇದನ್ನೂ ಓದಿ: Breaking | ಜೈಲಿನಿಂದ ರಿಲೀಸ್ ಆದ ನಟ ಅಲ್ಲು ಅರ್ಜುನ್