Actor Allu Arjun : ಹೈದರಾಬಾದ್‌ನ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಿನ್ನೆ ಬಂಧನಕ್ಕೊಳಗಾಗಿದ್ದ, ನಟ ಅಲ್ಲು ಅರ್ಜುನ್ ಚಂಚಲಗೂಡ ಜೈಲಿನಿಂದ ಶನಿವಾರ (ಇಂದು) ಮುಂಜಾನೆ ಬಿಡುಗಡೆಯಾಗಿದ್ದಾರೆ.
ಹೌದು, ಕಾಲ್ತುಳಿತ ಪ್ರಕರಣದಲ್ಲಿ ನಿನ್ನೆ ಬಂಧನಕ್ಕೊಳಗಾಗಿದ್ದ, ನಟ ಅಲ್ಲು ಅರ್ಜುನ್ ನಂತರ ನಾಂಪಲ್ಲಿ ನ್ಯಾಯಾಲಯ 14 ದಿನ ರಿಮಾಂಡ್ ವಿಧಿಸಿತ್ತು. ಬಂಧನ ಪ್ರಶ್ನಿಸಿ ಅಲ್ಲು ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದು, ಮಧ್ಯಂತರ ಜಾಮೀನು ಮಂಜೂರಾಗಿತ್ತು
ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ನಂತರ ಇಂದು ನಟನನ್ನು ಬಿಡುಗಡೆಗೊಳಿಸಲಾಗಿದ್ದು, ಹೈಕೋರ್ಟ್‌ನ ಮಧ್ಯಂತರ ಜಾಮೀನು ಆದೇಶವನ್ನು ಪರಿಶೀಲಿಸಿದ ನಂತರ ಜೈಲು ಅಧಿಕಾರಿಗಳು ಅವರನ್ನು ಹಿಂಬದಿಯ ಗೇಟ್ ಮೂಲಕ ಕಳುಹಿಸಿದ್ದಾರೆ.
ನಟನನ್ನು ಬರಮಾಡಿಕೊಳ್ಳಲು ಕುಟುಂಬದವರು ಜೈಲಿನತ್ತ ಆಗಮಿಸಿದ್ದಾರೆ. ಇನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡ ಜೈಲಿನ ಬಳಿ ನೆರೆದಿದ್ದಾರೆ.