Pushpa-2 : ನಟ ಅಲ್ಲು ಅರ್ಜುನ್ (Allu Arjun) ವೃತ್ತಿ ಜೀವನಕ್ಕೆ ‘ಪುಷ್ಪ 2’ (Pushpa-2) ಸಿನಿಮಾದಿಂದ ದೊಡ್ಡ ಮೈಲೇಜ್ ಸಿಕ್ಕಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸುತ್ತಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಮಾಡುತ್ತಿರುವ ಗಳಿಕೆ ಕಂಡು ಎಲ್ಲರೂ ಹುಬ್ಬೇರಿಸಿದ್ದಾರೆ. ಹಿಂದಿ ವರ್ಷನ್ನಿಂದ ‘ಪುಷ್ಪ 2’ ಸಿನಿಮಾಗೆ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ (collection) ಆಗಿದೆ. ಇನ್ನೂ ಈ ಸಿನಿಮಾದ ಹವಾ ಕಡಿಮೆ ಆಗಿಲ್ಲ. ವೀಕೆಂಡ್ನಲ್ಲಿ ಮತ್ತೆ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ. ಅಲ್ಲು ಅರ್ಜುನ್ ಗೆ ಇನ್ನೊಮ್ಮೆ ರಾಷ್ಟ್ರ ಪ್ರಶಸ್ತಿ (National Award) ಸಿಗಬೇಕು ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇದನ್ನೂ ಓದಿ: Mokshita Pai | ಬಿಗ್‌ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಮಕ್ಕಳ ಕಳ್ಳಿ? ಮುಗ್ಧತೆ ಹಿಂದೆ ಕರಾಳ ಮುಖದ ಸತ್ಯವೇನು!?
Pushpa-2 ಮೊದಲ ವಾರದ ಕಲೆಕ್ಷನ್ ಎಷ್ಟು?
‘ಪುಷ್ಪ-2’ ಚಿತ್ರ ಮೊದಲ ವಾರದಲ್ಲಿ ರೂ.1067 ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿದೆ. ಮೊದಲ ವಾರದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆ ಸೃಷ್ಟಿಸಿದೆ ಎನ್ನಲಾಗಿದೆ. ನಿನ್ನೆ ರೂ.65 ಕೋಟಿ ಕಲೆಕ್ಷನ್ ಆಗಿದೆ. ಇದರಲ್ಲಿ ಹಿಂದಿಯಿಂದ 31.50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಡಿ.5ರಂದು ಈ ಚಿತ್ರ ಬಿಡುಗಡೆ ಆಗಿತ್ತು.
ಇದನ್ನೂ ಓದಿ: Keerthy Suresh: ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಕೀರ್ತಿ ಸುರೇಶ್