Puneeth Rajkumar : ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಇಂದಿಗೆ 3 ವರ್ಷವಾಗಿದ್ದು, ಅವರು ಬದುಕಿದ್ದಾಗ ಮಾಡಿದ ಸಹಾಯ ಮಾತ್ರ ಇನ್ನು ಅಮರ.
ಹೌದು, ಚಾಲೆಂಜಿಂಗ್ ನಟ ದರ್ಶನ್ ರ ಮೊದಲ ಸಿನಿಮಾ ‘ಮೆಜೆಸ್ಟಿಕ್’ಗೆ ಪುನೀತ್ ರಾಜ್‌ಕುಮಾರ್ ಸಹಾಯ ಮಾಡಿದ್ದರು. ಈ ಬಗ್ಗೆ ‘ಮೆಜೆಸ್ಟಿಕ್’ ನಿರ್ಮಾಪಕ ಭಾಮಾ ಹರೀಶ್ ಹೇಳಿದ್ದಾರೆ.
ಇದನ್ನೂ ಓದಿ: ಇಂದು ಅಪ್ಪು ಪುಣ್ಯಸ್ಮರಣೆ; ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ! ಅನುಶ್ರೀ ಭಾವುಕ ಪೋಸ್ಟ್
ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ಮಾಪಕ ಭಾಮಾ ಹರೀಶ್ ಮಾತನಾಡಿ, ‘ಮೆಜೆಸ್ಟಿಕ್ ಸಿನಿಮಾ ಚಿತ್ರೀಕರಣಕ್ಕೆ ಪೂರ್ಣಿಮಾ ಸಂಸ್ಥೆಯ ಯುನಿಟ್ ಅನ್ನು ಬಳಸಿಕೊಂಡಿದ್ದೆವು. ಚಿತ್ರೀಕರಣ ಮುಗಿದ ಮೇಲೆ ಹಣ ಕೊಡಲು ಹೋದೆ. ಆಗ ಪುನೀತ್ ‘ತೂಗುದೀಪ ಅಂಕಲ್ ನಮ್ಮ ಮನೆ ಸದಸ್ಯರು ಎಂದು ಹೇಳಿ, ಕಡಿಮೆ ಹಣ ಪಡೆದುಕೊಂಡರು. ಅಲ್ಲದೆ, ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು’ ಎಂದಿದ್ದಾರೆ.