ಅಪ್ಪು ಪುಣ್ಯಸ್ಮರಣೆ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 3 ವರ್ಷ. ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ ಎಂದು ಅನುಶ್ರೀ (Anushree) ಭಾವುಕ ಪೋಸ್ಟ್ ಮಾಡಿದ್ದಾರೆ.
ಹೌದು, ಅಪ್ಪು (Puneeth Rajkumar) ಅವರ ಪುಣ್ಯಸ್ಮರಣೆಗೆ (Remembrance) ಅಭಿಮಾನಿಗಳು, ಸ್ನೇಹಿತರು, ಬಂಧಗಳು ಅನ್ನದಾನ, ಉಚಿತ ಆರೋಗ್ಯ ಶಿಬಿರ ಸೇರಿ ಹಲವಾರು ಸಮಾಜಮುಖಿ ಸೇವಾ ಕಾರ್ಯ ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ: Actor Darshan : ನಟ ದರ್ಶನ್ ಗೆ ಪಾರ್ಶ್ವವಾಯು ಆಗುವ ಸಾಧ್ಯತೆ..? ವೈದ್ಯಕೀಯ ವರದಿಯಲ್ಲಿ ಬಹಿರಂಗ..!
ಬದುಕಿದ್ದಾಗ ಪುನೀತ್ ಅಭಿಮಾನಿಗಳ ಪಾಲಿಗೆ ನಿಜ ಹೀರೋ ಆಗಿ, ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಸಹೃದಯಿಯಾಗಿ ಅಸಂಖ್ಯ ಕನ್ನಡಿಗರ ಪ್ರೀತಿ-ಗೌರವಕ್ಕೆ ಪಾತ್ರರಾಗಿದ್ದರು. ಬಾಲ ನಟನೆಯಲ್ಲೇ ರಾಷ್ಟ್ರ ಪ್ರಶಸ್ತಿಯನ್ನು ಪಡೆದು ತಾರಾಲೋಕದಲ್ಲಿ ದ್ರುವತಾರೆಯಾಗಿ ಮಿನುಗಿ ಮರೆಯಾಗಿರುವ ನಮ್ಮ ಅಪ್ಪುಗೆ ನಮನಗಳು.
Puneeth Rajkumar Remembrance : ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ! ಅನುಶ್ರೀ ಭಾವುಕ ಪೋಸ್ಟ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರ ಫೇವರಿಟ್ ನಟರೇ ಆಗಿದ್ದರು. ಅಭಿಮಾನಿಗಳು ಅಷ್ಟೇ ಅಲ್ಲ, ಸಿನಿಮಾ ಮಂದಿ ಕೂಡ ಅಪ್ಪು ಅಭಿಮಾನಿಗಳು ಆಗಿದ್ದು, ಆ ವಿಚಾರದಲ್ಲಿ ನಟಿ-ನಿರೂಪಕಿ ಅನುಶ್ರೀ ಪುನೀತ್ ಅವರ ಮಹಾನ್ ಅಭಿಮಾನಿ ಆಗಿದ್ದಾರೆ.
ಅದೆಷ್ಟು ಅಂದ್ರೆ, ಅಪ್ಪು ಇಲ್ಲದೆ ಮಾತುಗಳನ್ನ ಆಡೋದಿಲ್ಲ. ಅಷ್ಟೊಂದು ಅಭಿಮಾನವನ್ನ ಈಗಲೂ ಇಟ್ಟುಕೊಂಡಿರೋ ಆ್ಯಂಕರ್ ಅನುಶ್ರೀ ಇದೀಗ ಅಪ್ಪು ಪುಣ್ಯ ಸ್ಮರಣೆ ದಿನ ಒಂದು ಭಾವುಕ ಪೋಸ್ಟ್ ಹಾಕಿದ್ದಾರೆ. ಅಪ್ಪು ಹಾಡಿರೋ ಹಾಡೊಂದರ ಸಾಲನ್ನೆ ವಿಶೇಷವಾಗಿಯೇ ಬರೆದಿದ್ದಾರೆ.
View this post on Instagram




