Actor Darshan : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಬಿಗ್ ರಿಲೀಫ್ ಸಿಕ್ಕಿದ್ದು, 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶ (High Court order) ಹೊರಡಿಸಿದೆ.
ದರ್ಶನ್ ಪರ ಸಿವಿ ನಾಗೇಶ್ ವಾದ ಹಾಗೂ ದರ್ಶನ್ ವಿರುದ್ಧ ಎನ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಸುದೀರ್ಘ ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಎಸ್ ಶೆಟ್ಟಿ ಅವರು ಈ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: Darshan Bail: 131 ದಿನಗಳ ಬಳಿಕ ಇಂದೇ ಜೈಲಿನಿಂದ ದರ್ಶನ್ ರಿಲೀಸ್!
Actor Darshan : ದರ್ಶನ್ ಗೆ ಹೈಕೋರ್ಟ್‌ನಿಂದ ಖಡಕ್ ಸೂಚನೆ
ಇನ್ನು ಮಧ್ಯಂತರ ಜಾಮೀನು ಮಂಜೂರು ನೀಡಿದ ಹೈಕೋರ್ಟ್ ನಟ ದರ್ಶನ್‌ಗೆ ಹಲವು ಸೂಚನೆಗಳನ್ನು ನೀಡಿದ್ದು, 1 ವಾರದಲ್ಲಿ ಚಿಕಿತ್ಸೆಯ ವಿವರಗಳನ್ನು ಕೋರ್ಟ್‌ಗೆ ನೀಡಬೇಕು. ಅಲ್ಲದೇ ಪಾಸ್‌ಪೋರ್ಟ್ ಸಡೆಂಡರ್‌ಗೆ ಕೂಡ ಸೂಚಿಸಿದ್ದಾರೆ.
ಇನ್ನು ಹೈಕೋರ್ಟ್ ಸೂಚನೆ ಹಿನ್ನಲೆ ಜೈಲ್‌ಗೆ ತಲುಪುತ್ತಿದ್ದಂತೆ ದರ್ಶನ್ ಬಿಡುಗಡೆ ಸಾಧ್ಯತೆ ಇದ್ದು,131 ದಿನಗಳ ಜೈಲುವಾಸದ ಬಳಿಕ ಆರೋಪಿ ದರ್ಶನ್‌ಗೆ ರಿಲೀಫ್ ಸಿಕ್ಕಂತಾಗಿದೆ.