Atal Pension Yojana : ಅಟಲ್ ಪಿಂಚಣಿ ಯೋಜನೆ ಅಸಂಘಟಿತ ಕಾರ್ಮಿಕರ ವರ್ಗದ ನಿವೃತ್ತರಿಗೆ ಪ್ರಯೋಜನಗಳನ್ನು ನೀಡಲಿದ್ದು, 60 ವರ್ಷ ವಯಸ್ಸಿನ ನಂತರ ಸುರಕ್ಷಿತ ಪಿಂಚಣಿಯನ್ನು ಒದಗಿಸುತ್ತದೆ.
Atal Pension Yojana ಹೂಡಿಕೆಯ ವಯೋಮಿತಿ
18ನೇ ವಯಸ್ಸಿನಲ್ಲಿಅಟಲ್ ಪೆನ್ನನ್ ಸ್ಕಿಮ್ ಪಡೆದರೆ ಒಟ್ಟು 42 ವರ್ಷ ಕಾಲ ಹೂಡಿಕೆ ಮಾಡಲು ಗರಿಷ್ಠ ಅವಕಾಶ ಇರಲಿದ್ದು, ನಿಮ್ಮ ವಯಸ್ಸು 30 ವರ್ಷವಾಗಿದ್ದರೆ 30 ವರ್ಷ ಹೂಡಿಕೆಗೆ ಅವಕಾಶ ಇರುತ್ತದೆ.
ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆಯಡಿ ಪ್ರತಿ ತಿಂಗಳು ರೂ.5 ಸಾವಿರ; ಖಾತೆ ತೆರೆಯೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
Atal Pension Yojana : ತಿಂಗಳಿಗೆ ಎಷ್ಟು ಪ್ರೀಮಿಯಂ
ನಿವೃತ್ತಿ ಬಳಿಕ ನೀವು 1,000 ರೂ ಪಿಂಚಣಿ ಪಡೆಯಬೇಕೆಂದರೆ 30ನೇ ವಯಸ್ಸಿನಿ೦ದ ಆರ೦ಭಿಸಿ ಪ್ರತೀ ತಿಂಗಳು 116 ರೂ. ಕಟ್ಟಬೇಕು. 40ನೇ ವಯಸ್ಸಿನಲ್ಲಿ ಅಟಲ್ ಪೆನ್ನನ್ ಯೋಜನೆ ಸ್ವೀಕರಿಸಿದರೆ 1,000 ಪಿಂಚಣಿ ಪಡೆಯಲು 20 ವರ್ಷ ಕಾಲ ತಿಂಗಳಿಗೆ 264 ರೂ ಕಟ್ಟಬೇಕು.
Atal Pension Yojana ಸದಸ್ಯ ಮೃತಪಟ್ಟರೆ
ಒಂದು ವೇಳೆ ಸದಸ್ಯನು ಮೃತಪಟ್ಟರೆ ನಾಮಿನಿಗೆ ಪರಿಹಾರ ಸಿಗಲಿದ್ದು, 1,000 ರೂ. ಮಾಸಿಕ ಪಿಂಚಣಿ ಪಡೆಯುತ್ತಿರುವವರು ಮೃತಪಟ್ಟರೆ ನಾಮಿನಿಗೆ 1.7 ಲಕ್ಷ ರೂ ಸಿಗಲಿದ್ದು, 5,000 ರೂ ಮಾಸಿಕ ಪೆನ್ನನ್ ಪಡೆಯುತ್ತಿರುವವರು ಮೃತಪಟ್ಟರೆ ವಾರಸುದಾರರಿಗೆ 8.5 ಲಕ್ಷ ರೂ ಸಿಗುತ್ತದೆ.
ಇದನ್ನೂ ಓದಿ: Atal Pension Scheme: ಕೇಂದ್ರದ ಈ ಯೋಜನೆಯಡಿ ಪತಿ ಪತ್ನಿಗೆ ತಿಂಗಳಿಗೆ 10 ಸಾವಿರ ರೂ..!
Atal Pension Yojana : 60 ವರ್ಷ ತಲುಪಿದ ನಂತರ ಸ್ಥಿರ ಪಿಂಚಣಿ
60 ವರ್ಷ ವಯಸ್ಸನ್ನು ತಲುಪಿದ ನಂತರ ನಿವೃತ್ತದಾರರು 1000 ರೂ, 2000 , 3000 , 4000 , ಅಥವಾ 5000 ರೂ ಸ್ಥಿರ ಪಿಂಚಣಿ ಪಡೆಯುವ ಆಯ್ಕೆಯನ್ನು ಮಾಡಿಕೊಳ್ಳಬಹುದು.
5,000 ಮಾಸಿಕ ಪಿಂಚಣಿ
5,000 ರೂ. ಮಾಸಿಕ ಪಿಂಚಣಿ ಬೇಕೆಂದರೆ, 30ನೇ ವಯಸ್ಸಿನಿಂದ 30 ವರ್ಷ ಕಾಲ ತಿಂಗಳಿಗೆ 577 ರೂ ಕಟ್ಟಬೇಕು. 40ನೇ ವಯಸ್ಸಿನಲ್ಲಿ ಸ್ಟೀಮ್ ಆರಂಭಿಸಿದರೆ ತಿಂಗಳಿಗೆ 1,318 ರೂ. ಕಟ್ಟಬೇಕು.