ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಪಿಎಂ ಸ್ವನಿಧಿ ಯೋಜನೆ; ಅರ್ಹತೆ, ದಾಖಲೆಗಳು, ಅರ್ಜಿ ಸಲ್ಲಿಕೆ ಹೇಗೆ?

ಪಿಎಂ ಸ್ವನಿಧಿ ಯೋಜನೆ : ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಾರಂಭಿಸಿದ ಯೋಜನೆ ಪಿಎಂ ಸ್ವನಿಧಿ. ಈ ಯೋಜನೆಗೆ ಅರ್ಹತೆ, ದಾಖಲೆಗಳು, ಅರ್ಜಿ ಸಲ್ಲಿಕೆ ಹೇಗೆ? ನೋಡೋಣ ಹೌದು, ಪ್ರಧಾನ…

pm svanidhi yojana

ಪಿಎಂ ಸ್ವನಿಧಿ ಯೋಜನೆ : ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಾರಂಭಿಸಿದ ಯೋಜನೆ ಪಿಎಂ ಸ್ವನಿಧಿ. ಈ ಯೋಜನೆಗೆ ಅರ್ಹತೆ, ದಾಖಲೆಗಳು, ಅರ್ಜಿ ಸಲ್ಲಿಕೆ ಹೇಗೆ? ನೋಡೋಣ

ಹೌದು, ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆತ್ಮನಿರ್ಭರ ನಿಧಿಯನ್ನು (ಪಿಎಂ ಸ್ವನಿಧಿ) ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅಂದರೆ 2020ರ ಜೂನ್ 1ರಂದು ಆರಂಭಿಸಲಾಗಿತ್ತು. ಇನ್ನು ಪಿಎಂ ಸ್ವನಿಧಿ ಯೋಜನೆಯ ಮೂರನೇ ಹಂತದ ಸಾಲ ನೀಡುವ ಕಾರ್ಯಕ್ರಮನ್ನು ಸರ್ಕಾರ 2024ರ ಡಿಸೆಂಬರ್ ತನಕ ವಿಸ್ತರಿಸಿದ್ದು, ಈ ಯೋಜನೆಯಲ್ಲಿ ಮೊದಲ ಸಾಲ ಸೌಲಭ್ಯದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 50,000 ರೂಪಾಯಿ ಸಾಲ ನೀಡಲಾಗುತ್ತಿದೆ.

pm svanidhi yojana
ಪಿಎಂ ಸ್ವನಿಧಿ ಯೋಜನೆ

ಪಿಎಂ ಸ್ವನಿಧಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

ಬೀದಿ ಬದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬೀದಿ ಬದಿ ವ್ಯಾಪಾರಿಗಳ ಕಾಯ್ದೆ 2014 ಅಡಿಯಲ್ಲಿ ರೂಪಿಸಿರುವ ನಿಯಮಗಳು ಹಾಗೂ ಯೋಜನೆಗಳ ಅಧಿಸೂಚನೆ ಹರಡಿಸಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Vijayaprabha Mobile App free

ಇದನ್ನೂ ಓದಿ: New Ration Card : ಹೊಸ ಪಡಿತರ ಚೀಟಿ ಪಡೆಯಲು ಮಾನದಂಡಗಳೇನು? ಯಾವ ದಾಖಲೆ ಕಡ್ಡಾಯ

ಈ ಯೋಜನೆ ಹೆಚ್ಚು ಫಲಾನುಭವಿಗಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಪಿಎಂ ಸ್ವನಿಧಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಈ ಆ್ಯಪ್ ಸಾಲ ನೀಡುವ ಸಂಸ್ಥೆಗಳು ಹಾಗೂ ಅವುಗಳ ಫೀಲ್ಡ್ ಏಜೆಂಟ್ ಗಳಿಗೆ ಸಾಲದ ಅರ್ಜಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನೆರವು ನೀಡುತ್ತದೆ.

ಪಿಎಂ ಸ್ವನಿಧಿ ಯೋಯನೆಯಡಿ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಅಗತ್ಯ?

ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಪರಿಶಿಷ್ಟ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು, ಸೂಕ್ಷ್ಮ ಹಣಕಾಸು ಸಂಸ್ಥೆಗಳು ಮತ್ತು ಸ್ವಸಹಾಯ ಬ್ಯಾಂಕುಗಳು ಕೂಡಾ ಸಾಲ ನೀಡುತ್ತದೆ. ಈ ಯೋಜನೆಯ ಲಾಭ ಪಡೆಯಲು ನಗರ ಸ್ಥಳೀಯ ಸಂಸ್ಥೆಗಳು ನೀಡುವ ಮಾರಾಟ / ಗುರುತಿನ ಚೀಟಿಯ ಪ್ರಮಾಣಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ. ಮುಂತಾದ ದಾಖಲೆಗಳು ಬೇಕಾಗುತ್ತದೆ.

ಇದನ್ನೂ ಓದಿ: Gruhalakshmi yojana : ಗೃಹಲಕ್ಷ್ಮಿ 14,15ನೇ ಕಂತಿನ ಹಣ ₹4000 ಯಾವಾಗ ಬರುತ್ತೆ? ಇಲ್ಲಿದೆ ಮಾಹಿತಿ

ಪಿಎಂ ಸ್ವನಿಧಿ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಕೆ ಹೇಗೆ?

  • ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳು 50 ಸಾವಿರ ರೂ ತನಕ ಸಾಲ ಪಡೆಯಬಹುದಾಗಿದ್ದು, ಇದಕ್ಕೆ ಅರ್ಜಿ ಸಲ್ಲಿಸಲು ಮೊದಲನೆಯದಾಗಿ www.pmsvanidhi.mohua.gov.in ಭೇಟಿ ನೀಡಬೇಕು.
  • ನಂತರ Apply for a loan ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸಿ.
  • ಆ ಬಳಿಕ ವರ್ಗ ಆಯ್ಕೆ ಮಾಡಿ ಹಾಗೂ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ನಂತರ submit ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ಇನ್ನು, ಮಾರಾಟದಲ್ಲಿ ಸಕ್ರಿಯ ಆಗಿರುವ ಎಲ್ಲ ಬೀದಿ ವ್ಯಾಪಾರಿಗಳು ಈ ಯೋಜನೆಯಡಿಯಲ್ಲಿ ಈ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Dairy farming | ಹೈನುಗಾರಿಕೆ ಪ್ರೋತ್ಸಾಹಿಸಲು 57,000 ರೂ ಸಹಾಯಧನ, 1.60 ಲಕ್ಷ ಸಾಲ ಸೌಲಭ್ಯ; ಸರ್ಕಾರದ ಯೋಜನೆಗಳು ಇಲ್ಲಿವೆ

ಆರ್ಥಿಕ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ನೆರವಾದ ಪಿ ಎಂ ಸ್ವನಿಧಿ

ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ಹೊಸ ವ್ಯಾಪಾರ ಹಾಗೂ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಸಹಕಾರಿಯಾಗಿದ್ದು, ಯಾವುದೇ ಅಡಮಾನವಿಲ್ಲದೇ ಆರಂಭಿಕ 10 ಸಾವಿರ ರೂಪಾಯಿಯನ್ನು ಪಡೆದುಕೊಂಡು, ಅದನ್ನು ತೀರಿಸಿದ ನಂತರ ಇನ್ನೂ ಹೆಚ್ಚಿನ ಸಾಲವನ್ನು ಪಡೆದುಕೊಳ್ಳುವ ಅವಕಾಶವಿದ್ದು ಬೀದಿ ಬದಿಯ ವ್ಯಾಪಾರಿಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮ ವ್ಯವಾಹರವನ್ನು ವೃದ್ದಿಸಿಕೊಂಡಿದ್ದಾರೆ.

English summary : PM Swanidhi is a scheme launched by the central government with the aim of helping street vendors. How to apply for this scheme, eligibility, documents? Let’s find out

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.