Asha workers : ಜನಸಾಮಾನ್ಯರ ಬದುಕಿನ ಆಶಾಕಿರಣ ಈ ಆಶಾ ಕಾರ್ಯಕರ್ತೆಯರು

Asha workers : ಸರ್ಕಾರದ ಆರೋಗ್ಯ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ದೇಶದ 10.4 ಲಕ್ಷ ಆಶಾ ಕಾರ್ಯಕರ್ತರನ್ನು (Asha workers) ‘ಜಾಗತಿಕ ಆರೋಗ್ಯ ನಾಯಕರು’ ಎ೦ದು ಗುರುತಿಸಿದೆ. Asha workers ಜಾಗತಿಕ…

Asha workers

Asha workers : ಸರ್ಕಾರದ ಆರೋಗ್ಯ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ದೇಶದ 10.4 ಲಕ್ಷ ಆಶಾ ಕಾರ್ಯಕರ್ತರನ್ನು (Asha workers) ‘ಜಾಗತಿಕ ಆರೋಗ್ಯ ನಾಯಕರು’ ಎ೦ದು ಗುರುತಿಸಿದೆ.

Asha workers ಜಾಗತಿಕ ಆರೋಗ್ಯ ನಾಯಕರು

ಸರ್ಕಾರದ ಆರೋಗ್ಯ ಕಾರ್ಯಕ್ರಮಗಳಿಗೆ ಸಮುದಾಯವನ್ನು ಸಂಪರ್ಕಿಸುವ ಅವರ ಪ್ರಯತ್ನಗಳಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ದೇಶದ 10.4 ಲಕ್ಷ ಆಶಾ ಕಾರ್ಯಕರ್ತರನ್ನು ‘ಜಾಗತಿಕ ಆರೋಗ್ಯ ನಾಯಕರು’ ಎ೦ದು ಗುರುತಿಸಿದೆ. 2005ರಲ್ಲಿ NRHM ಅಡಿಯಲ್ಲಿ ಈ ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲಾಯಿತು.

ಇದನ್ನೂ ಓದಿ: Anila Bhagya Yojana : ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್; ಸಿಗುವ ಸೌಲಭ್ಯಗಳು, ಪಡೆಯುವ ವಿಧಾನ ಹೇಗೆ..?

Vijayaprabha Mobile App free

ಸಂಪರ್ಕ ಸೇತುವೆ

ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರಗಳು & ಜಿಲ್ಲಾಸ್ಪತ್ರೆಗಳಲ್ಲಿ ಸೌಲಭ್ಯ ಪಡೆಯಬೇಕಾದ ಸಮುದಾಯಗಳನ್ನು ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಪ್ರಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ತರಬೇತಿ ಪಡೆದಿದ್ದಾರೆ.

ಅರ್ಹತೆ – Eligibility

ಆಶಾ ಕಾರ್ಯಕರ್ತೆಯರು ಪ್ರಾಥಮಿಕವಾಗಿ ಸಮುದಾಯದಿಂದ ಬಂದ ವಿವಾಹಿತರು, ವಿಧವೆಯರು ಅಥವಾ ವಿಚ್ಛೇದಿತ ಮಹಿಳೆಯರಾಗಿದ್ದು 25 ರಿಂದ 45 ವರ್ಷ ವಯಸ್ಸಿನವರಾಗಿರುತ್ತಾರೆ. ಉತ್ತಮ ಸಂವಹನ, ನಾಯಕತ್ವ ಕೌಶಲ್ಯ ಹೊಂದಿರಬೇಕು. ಮಾರ್ಗಸೂಚಿಗಳ ಪ್ರಕಾರ 8ನೇ ತರಗತಿಯವರೆಗೆ ಔಪಚಾರಿಕ ಶಿಕ್ಷಣದೊಂದಿಗೆ ಸಾಕ್ಷರರಾಗಿರಬೇಕು.

ಕೋರೋನಾ ಸಮಯದಲ್ಲಿ ಸಹಾಯ

ಆಶಾ ಕಾರ್ಯಕರ್ತರು ಕೋರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕಂಟೈನ್‌ಮೆಂಟ್ ವಲಯಗಳ ಜನರನ್ನು ಪರೀಕ್ಷಿಸಲು, ಸಂಪರ್ಕ ತಡೆಯನ್ನು ಕೇಂದ್ರಗಳಿಗೆ ಕರೆದೊಯ್ಯಲು, ಹೋಮ್ ಕ್ವಾರಂಟೈನ್‌ಗೆ ಹೋಗಲು ಸಹಾಯ ಮಾಡಿದರು. ಎಷ್ಟು ಜನರು ಲಸಿಕೆ ಪಡೆಯಬೇಕಾಗಿದೆ ಎಂಬುದರ ಕುರಿತು ಡೇಟಾವನ್ನು ಸಂಗ್ರಹಿಸುವಲ್ಲಿ ನೇರವಾದರು.

ಇದನ್ನೂ ಓದಿ: BPL card : ಮಾನದಂಡಗಳ ವಿರುದ್ಧವಾಗಿ ಬಿಪಿಎಲ್​ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಖಡಕ್​ ಸೂಚನೆ

ಜೀವನ ಸಾಗಿಸುವುದು ಕಷ್ಟ

ಸರ್ಕಾರವು ಆಶಾ ಕಾರ್ಯಕರ್ತೆಯರನ್ನು ‘ಸ್ವಯಂಸೇವಕರು’ ಎಂದು ಪರಿಗಣಿಸಿ ಪ್ರೋತ್ಸಾಹಧನ ಸೇರಿ ತಿಂಗಳಿಗೆ 6,000 ರಿಂದ 8,000 ರೂ.ಗಳವರೆಗೆ ವೇತನ ನೀಡುತ್ತದೆ. ಬರುವ ವೇತನದಿಂದ ಜೀವನ ಸಾಗಿಸುವುದು ಕಷ್ಟವಾಗಿದ್ದು, ತಮ್ಮನ್ನು ಖಾಯಂ ಸರಕಾರಿ ನೌಕರರನ್ನಾಗಿ ಮಾಡಿ ಸವಲತ್ತುಗಳನ್ನು ನೀಡಬೇಕು ಎಂದು ಕಾರ್ಯಕರ್ತೆಯರು ಒತ್ತಾಯಿಸುತ್ತಿದ್ದಾರೆ.

ನ್ಯಾಯಯುತ ವೇತನವಿಲ್ಲ

24 ಗಂಟೆಗಳ ಕಾಲ ಕೆಲಸ ಮಾಡಿದರೂ, ಪಿಂಚಣಿ & ಆರೋಗ್ಯ ವಿಮೆಯ೦ತಹ ಯಾವುದೇ ಪ್ರಯೋಜನಗಳಿಲ್ಲ. ವಿಶ್ವ ಆರೊಗ್ಯ ಸಂಸ್ಥೆ, ಸರ್ಕಾರ ನಮ್ಮನ್ನು ಗುರುತಿಸಿದರೂ ನಾವು ಮಾಡುವ ಎಲ್ಲಾ ಕೆಲಸಗಳಿಗೆ ಅವರು ನಮಗೆ ನ್ಯಾಯಯುತವಾಗಿ ವೇತನ ನೀಡುತ್ತಿಲ್ಲ. COVID-19 ಸಮಯದಲ್ಲಿ ಕೇವಲ 1,000 ರೂ ನೀಡಲಾಗಿದೆ ಎನ್ನುತ್ತಾರೆ ಆಶಾ ಕಾರ್ಯಕರ್ತೆಯರು.

10.4 ಲಕ್ಷ ಆಶಾ ಕಾರ್ಯಕರ್ತೆಯರು

ರಾಷ್ಟ್ರೀಯ ಆರೋಗ್ಯ ಮಿಷನ್ ಡೇಟಾ ಪ್ರಕಾರ, ದೇಶಾದ್ಯಂತ ಸುಮಾರು 10.4 ಲಕ್ಷ ಆಶಾ ಕಾರ್ಯಕರ್ತರು ಇದ್ದು, ಪ್ರತಿ 1,000 ವ್ಯಕ್ತಿಗಳಿಗೆ ಅಥವಾ ಗುಡ್ಡಗಾಡು, ಬುಡಕಟ್ಟು ಅಥವಾ ಇತರ ವಿರಳ ಜನನಿಬಿಡ ಪ್ರದೇಶಗಳಲ್ಲಿ ಪ್ರತಿ ವಸತಿಗೆ ಒಬ್ಬ ಆಶಾ ನೇಮಿಸುವುದು ಸರ್ಕಾರದ ಗುರಿಯಾಗಿದೆ.

ಬೇಡಿಕೆಗಳಿಗಾಗಿ ಒತ್ತಾಯ

ಪ್ರಧಾನಮಂತ್ರಿ & ಆರೋಗ್ಯ ಸಚಿವರಿಂದ ಮೆಚ್ಚುಗೆಗಳು ಹರಿದುಬಂದಿದ್ದರೂ ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಭಾವನೆ, ನಿಯಮಿತ ಉದ್ಯೋಗ, ಆರೋಗ್ಯ ಪ್ರಯೋಜನಗಳಿಗಾಗಿ ಹೋರಾಟವನ್ನು ನಡೆಸುತ್ತಲೇ ಇದ್ದಾರೆ. ಕಳೆದ ವರ್ಷ ಸೆಪ್ಟೆಂಬ‌ರ್ ನಲ್ಲಿ ದೇಶಾದ್ಯಂತ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗಾಗಿ ಬೀದಿಗಿಳಿದು ಪ್ರತಿಭಟಿಸಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.