Blood Cancer : ಬ್ಲಡ್ ಕ್ಯಾನ್ಸರ್‌ನಿಂದ ಪಾರಾಗಲು ಈ ರೀತಿ ಜೀವನಶೈಲಿ ಬದಲಿಸಿಕೊಳ್ಳಿ..!

Blood Cancer : ಹೆಮಟೊಲಾಜಿಕ್ ಕ್ಯಾನ್ಸರ್ ಅನ್ನು ಸಾಮಾನ್ಯವಾಗಿ ರಕ್ತದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ, ಇದು ದುಗ್ಧರಸ, ಮೂಳೆ ಮಜ್ಜೆ ಮತ್ತು ರಕ್ತ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ವಿವಿಧ ಕ್ಯಾನ್ಸರ್‌ಗಳನ್ನು ಉಲ್ಲೇಖಿಸುವ ಸಾಮಾನ್ಯ…

Blood Cancer

Blood Cancer : ಹೆಮಟೊಲಾಜಿಕ್ ಕ್ಯಾನ್ಸರ್ ಅನ್ನು ಸಾಮಾನ್ಯವಾಗಿ ರಕ್ತದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ, ಇದು ದುಗ್ಧರಸ, ಮೂಳೆ ಮಜ್ಜೆ ಮತ್ತು ರಕ್ತ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ವಿವಿಧ ಕ್ಯಾನ್ಸರ್‌ಗಳನ್ನು ಉಲ್ಲೇಖಿಸುವ ಸಾಮಾನ್ಯ ಪದವಾಗಿದೆ. ಲ್ಯುಕೇಮಿಯಾ, ಲಿಂಫೋಮಾ ಮತ್ತು ಮೈಲೋಮಾಗಳು ಈ ಮಾರಣಾಂತಿಕ ಗುಂಪಿನಲ್ಲಿವೆ. ರಕ್ತದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ, ಆದರೆ ಕೆಲವು ಜೀವನಶೈಲಿ ಬದಲಾವಣೆಗಳು ಮತ್ತು ಅಪಾಯ-ಕಡಿತ ಕ್ರಮಗಳು ನಿಮ್ಮ ಕಾಯಿಲೆಗೆ ತುತ್ತಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

Blood Cancer : ಬ್ಲಡ್ ಕ್ಯಾನ್ಸರ್‌ನಿಂದ ಪಾರಾಗಲು ಜೀವನಶೈಲಿ

Blood Cancer

  1. ಆರೋಗ್ಯಕರ ಆಹಾರ ಸೇವನೆ
  2. ದೈಹಿಕ ಚಟುವಟಿಕೆ
  3. ಧೂಮಪಾನ ಮತ್ತು ಮದ್ಯಪಾನ ಅಭ್ಯಾಸ ತಪ್ಪಿಸಿ
  4. ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಿ
  5. ನಿಯಮಿತ ಆರೋಗ್ಯ ತಪಾಸಣೆ
  6. ಸೋಂಕುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
  7. ಒತ್ತಡ ನಿರ್ವಹಣೆ

ಇದನ್ನೂ ಓದಿ: Gastric Problem : ಗ್ಯಾಸ್ಟಿಕ್ ಸಮಸ್ಯೆಗೆ ಮನೆಮದ್ದುಗಳು; ಐದೇ ನಿಮಿಷದಲ್ಲೇ ಸಿಗುತ್ತೆ ಇಸ್ಟ್ಯಾಂಟ್ ರಿಲೀಫ್..!

Vijayaprabha Mobile App free

1. ಆರೋಗ್ಯಕರ ಆಹಾರ ಸೇವನೆ

ನಿಮ್ಮ ಆರೋಗ್ಯ ಉತ್ತಮವಾಗಿರಲು ನೀವು ಉತ್ತಮ ಆಹಾರ ತಿನ್ನಲೇಬೇಕು. ತಾಜಾ ತರಕಾರಿ, ಹಣ್ಣು, ಧಾನ್ಯಗಳು, ಸೊಪ್ಪುಗಳು ನಿಮ್ಮ ರಕ್ತದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಂಸ್ಕರಿಸಿದ ಮತ್ತು ಕೆಂಪು ಮಾಂಸಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

2. ದೈಹಿಕ ಚಟುವಟಿಕೆ

ನಿತ್ಯ ಸ್ವಲ್ಪ ಹೊತ್ತು ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಉತ್ತಮ. ನಿಯಮಿತ ದೈಹಿಕ ಚಟುವಟಿಕೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ-ತೀವ್ರತೆಯ ವ್ಯಾಯಾಮ ಮಾಡುವರಿಂದ ಆರೋಗ್ಯಕರ ತೂಕ ಕಾಪಾಡಿಕೊಳ್ಳಬಹುದು.

3. ಧೂಮಪಾನ ಮತ್ತು ಮದ್ಯಪಾನ ಅಭ್ಯಾಸ ತಪ್ಪಿಸಿ

ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸ ರೋಗದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದರೊಂದಿಗೆ ತಂಬಾಕು ಸೇವನೆ ಕೂಡಾ ಬಾಯಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆದಷ್ಟು ಈ ಅಭ್ಯಾಸಗಳನ್ನು ನಿಧಾನವಾಗಿ ತಗ್ಗಿಸಿಕೊಳ್ಳವುದು ಒಳ್ಳೆಯದು. ಅತಿಯಾದ ಮದ್ಯಪಾನ ಕೆಲವು ರಕ್ತದ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಏಲಕ್ಕಿ ಸೇವನೆ ಮಾಡಿದರೆ ಸಿಗುವ ಆರೋಗ್ಯ ಪ್ರಯೋಜನಗಳು

4. ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಿ

ಅತಿಯಾದ ದೇಹದ ತೂಕ ಹಾಗು ಅತಿ ಕಡಿಮೆ ದೇಹದ ತೂಕಗಳು ಅನೇಕ ಆರೋಗ್ಯ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. ಅಧಿಕ ಬೊಜ್ಜು ರಕ್ತದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಉತ್ತಮ.

5. ನಿಯಮಿತ ಆರೋಗ್ಯ ತಪಾಸಣೆ

ಯಾವುದಾದರೋ ರೋಗ ಲಕ್ಷಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಬಹಳಷ್ಟು ಜನರು ರಕ್ತ ಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆ ಮಾಡಿಸಿಕೊಳ್ಳಲು ಹೆದರುವುದರಿಂದ ಅಪಾಯ ಹೆಚ್ಚು. ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಅಥವಾ ಪರೀಕ್ಷೆಗೆ ಒಳಗಾದರೆ ಪ್ರಾರಂಭದಲ್ಲೇ ಕಾಯಿಲೆಗಳನ್ನು ತಡೆಯಬಹುದು.

ಇದನ್ನೂ ಓದಿ: ನಿಂಬೆ ಚಹಾ ಕುಡಿದರೆ ಆಗುವ ಪ್ರಯೋಜನಗಳು

6. ಸೋಂಕುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ

ಸೋಂಕುಗಳಿಂದಲೂ ರಕ್ತದ ಕ್ಯಾನ್ಸರ್ ಉ೦ಟಾಗುವ ಸಾಧ್ಯೆತೆ ಇದೆ. ಸಾಧ್ಯವಾದಷ್ಟು ಸ್ವಚ್ಛತೆ ಕಡೆ ಗಮನ ವಹಿಸಿ. ಹೆಪಟೈಟಿಸ್ ಬಿ ಮತ್ತು ಸಿ, ಎಚ್‌ಐವಿ ಮತ್ತು ಎನ್-ಬಾರ್ ವೈರಸ್‌ನಂತಹ ಕೆಲವು ಸೋಂಕುಗಳು ರಕ್ತದ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುವುದರಿಂದ ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡುವ ಮೂಲಕ ನಿಮ್ಮನ್ನು ರಕ್ಷಿಸಿಕೊಳ್ಳಿ.

7. ಒತ್ತಡ ನಿರ್ವಹಣೆ

ದೀರ್ಘಕಾಲದ ಒತ್ತಡವು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಕ್ಯಾನ್ಸ‌ರ್ ಬೆಳವಣಿಗೆಗೆ ಕಾರಣವಾಗಬಹುದು. ನಿಮ್ಮ ದೈನಂದಿನ ಜೀವನದಲ್ಲಿ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡಲು ಧ್ಯಾನ, ಯೋಗ ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.