Medicines : ಇತ್ತೀಚಿನ ದಿನಗಳಲ್ಲಿ ನಕಲಿ ಔಷಧಗಳ ಹಾವಳಿ ಹೆಚ್ಚಾಗಿದೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳಲ್ಲಿ ಶೇಕಡ 25ರಷ್ಟು ನಕಲಿ, ಆದ್ದರಿಂದ ಔಷಧಿ ಕಂಪನಿಯ ಹೆಸರು, ಟ್ರೇಡ್ ಮಾರ್ಕ್ ಗಮನಿಸಿ. ಔಷಧಿಯ ಗುಣಮಟ್ಟದ ಬಗ್ಗೆ ನಿಮಗೆ ಅನುಮಾನ ಬ೦ದರೆ ಔಷಧ ನಿಯಂತ್ರಕರಿಗೆ ದೂರುಕೊಡಿ.
ಕಣ್ಣಿಗೆ ಹಾಕುವ ಔಷಧಗಳು – Ophthalmic Medicines
ಒಬ್ಬರಿಗೆ ಉಪಯೋಗಿಸಿದ ಕಣ್ಣಿಗೆ ಹಾಕುವ ಔಷಧವನ್ನು ಇನ್ನೊಬ್ಬರಿಗೆ ಬಳಸಬಾರದು. ಕಣ್ಣಿಗೆ ಔಷಧ ಹಾಕಿದ ಅವಧಿಯಲ್ಲಿ ವಾಹನ ಚಾಲನೆ ಮಾಡಬಾರದು. ಯಾವುದೇ ಹನಿ ಅಥವಾ ಆಯಿಂಟ್‌ಮೆಂಟ್ ಹಾಕಿದ ಕೂಡಲೇ ಕಣ್ಣುರಿ, ಕಣ್ಣುಗಳಲ್ಲಿ ನೀರು ಬರತೊಡಗಿದರೆ, ಕೆರೆತ ಉಂಟಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: ಮಾರಣಾಂತಿಕ ಮೆದುಳಿನ ಗೆಡ್ಡೆಯ ರೋಗ ಲಕ್ಷಣಗಳೇನು? ಚಿಕಿತ್ಸೆ ಹೇಗೆ..? ಸೇವಿಸಬೇಕಾದ ಆಹಾರಗಳು..!
ಚರ್ಮದ ಮೇಲೆ ಲೇಪಿಸುವ ಔಷಧಗಳು
ಯಾವುದೇ ರೀತಿಯ ಕ್ರೀಂ, ಲೋಶನ್, ಆಯಿಂಟ್‌ಮೆಂಟ್ ಚರ್ಮದ ಮೇಲೆ ಮಾತ್ರ ಹಾಕಿ. ಇವು ಕಣ್ಣಿಗೆ, ಮೂಗಿಗೆ, ಬಾಯಿಗೆ ಸೋಕದಂತೆ ಎಚ್ಚರ ವಹಿಸಿ. ಇವುಗಳನ್ನು ಬಳಸುವ ಮೊದಲು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಚರ್ಮದ ಭಾಗವನ್ನು ತೊಳೆದು ಸ್ವಚ್ಛಗೊಳಿಸಿ. ಔಷಧ ಹಚ್ಚಿಕೊಂಡ ನಂತರ ನಿಮ್ಮ ಕೈಗಳನ್ನು ತೊಳೆಯಿರಿ.
ವಿಟಮಿನ್ ಮಾತ್ರೆಗಳು -Vitamin Medicines
ವಿಟಮಿನ್ ಕೊರತೆ ಇಲ್ಲದಿರುವಾಗ ಮಾತ್ರೆ ಸೇವಿಸಬೇಡಿ. ಹೌದು, ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿಟಮಿನ್ ಇರುವುದು ಕೂಡ ಅಪಾಯಕಾರಿಯಾಗಿದ್ದು, ವಿಟಮಿನ್ ಕೊರತೆಯಿಂದ ಬಳಲುವವರು, ವಾಂತಿ, ಭೇದಿಯಾದಾಗ, ಕರುಳಿನ ಶಸ್ತ್ರಚಿಕಿತ್ಸೆಯಾದಾಗ ಆಹಾರ ಸೇವನೆ ಮಾಡಲಾಗುವುದಿಲ್ಲವಾದ್ದರಿಂದ ಮಾತ್ರ ವಿಟಮಿನ್ ಮಾತ್ರೆಗಳನ್ನು ಕೊಡಬೇಕಾಗುತ್ತದೆ
ಗರ್ಭಿಣಿಯರು
ಗರ್ಭಿಣಿಯರು ಯಾವುದೇ ಔಷಧಿಯನ್ನಾಗಲೀ ವೈದ್ಯರ ಸಲಹೆಯಿಲ್ಲದೆ ಬಳಸಬಾರದು. ಆರಂಭದ ಮೂರು ತಿಂಗಳು ಯಾವುದೇ ಔಷಧಿ ಸೇವಿಸಬಾರದು. ಮಗುವಿಗೆ ದೇಹದ ಮುಖ್ಯ ಅ೦ಗಾ೦ಗಗಳು ಮೂಡುವುದರಿಂದ ಔಷಧಿಗಳ ದುಷ್ಟರಿಣಾಮವು೦ಟಾಗಿ ಅಂಗವಿಕಲತೆ ಉಂಟಾಗಬಹುದು.
ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತವೆ..!
ಇನ್‌ಸುಲಿನ್
ಇನ್‌ಸುಲಿನ್ ಚರ್ಮದ ಕೆಳಗೆ ಇಂಜಕ್ಷನ್ ಮೂಲಕ ನೀಡುವಂತಹುದು. ರೋಗಿಯ ಮನೆಯವರೇ ಕಲಿತು ಇಂಜಕ್ಷನ್ ಕೊಡಬಹುದು. ಆದರೆ, ಸ್ವಚ್ಛತೆ ಬಗ್ಗೆ ವಿಶೇಷ ಎಚ್ಚರಿಕೆ ಇರಬೇಕು. ಇಲ್ಲದಿದ್ದರೆ ಇಂಜಕ್ಷನ್ ಚುಚ್ಚುವ ಜಾಗದಲ್ಲಿ ಸೋ೦ಕು೦ಟಾಗಿ ಕೀವಾಗಬಹುದು. ಇನ್‌ಸುಲಿನ್ ಇಂಜಕ್ಷನ್ ಅನ್ನು ಫ್ರಿಜ್‌ನಲ್ಲಿಡಬೇಕು ಆದರೆ ಫ್ರೀಜರಲ್ಲಿಡಬಾರದು.
ಮನೆಮದ್ದು
ಸಣ್ಣ ಪುಟ್ಟ ತಲೆನೋವು, ನೆಗಡಿ, ಕೆಮ್ಮುಗಳಿಗೆ ಮನೆಮದ್ದುಗಳನ್ನು ಸೇವಿಸುವುದು ಉತ್ತಮ. ಮೆಡಿಕಲ್ ಶಾಪ್‌ಗಳಿಗೆ ನೀವಾಗಿಯೇ ಹೋಗಿ ಮಾತ್ರೆ ಖರೀದಿ ಮಾಡುವುದರ ಬದಲು ವೈದ್ಯರ ಸಲಹೆ ಪಡೆದು ಔಷಧ ತೆಗೆದುಕೊಳ್ಳುವುದು ಉತ್ತಮ.