T20 World Cup : ಶಾರ್ಜಾ ಕ್ರಿಕೆಟ್ ಸ್ಟೇಡಿಯಂ, ಶಾರ್ಜಾದಲ್ಲಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾವು ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ವಿರೋಚಿತ ಸೋಲನ್ನು ಕಂಡಿದೆ.
ಹೌದು, ಭಾರತ ವಿರುದ್ಧ ನಡೆದ ಟಿ20 ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 151/8 ಸ್ಕೋರ್ ಮಾಡಿತು. ಈ ಪಂದ್ಯ ಭಾರತಕ್ಕೆ ಟೂರ್ನಿಯಲ್ಲಿ ಉಳಿಯಲು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆಸೀಸ್ ಬ್ಯಾಟ್ಸ್‌ಮನ್‌ಗಳಲ್ಲಿ ಗ್ರೇಸ್ ಹ್ಯಾರಿಸ್ 40 ರನ್, ತಹ್ಲಿಯಾ ಮತ್ತು ಪೆರ್ರಿ ತಲಾ 32 ರನ್ ಗಳಿಸಿದರು. ಭಾರತದ ಪರ ರೇಣುಕಾ & ದೀಪ್ತಿ ತಲಾ 2 ವಿಕೆಟ್ ಪಡೆದರೆ, ಶ್ರೇಯಾಂಕಾ, ಪೂಜಾ & ರಾಧಾ ಯಾದವ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: ಸ್ಯಾಮ್ಸನ್ ಭರ್ಜರಿ ಶತಕ, ಸೂರ್ಯ ಅಬ್ಬರದ ಅರ್ಧಶತಕ; ಭಾರತಕ್ಕೆ 133 ರನ್ ಗಳ ಭರ್ಜರಿ ಜಯ, ಸರಣಿ ಕ್ಲೀನ್ ಸ್ವೀಪ್
ಹರ್ಮನ್ ಪ್ರೀತ್ ಕೌರ್ ಏಕಾಂಗಿ ಹೋರಾಟ; ಭಾರತಕ್ಕೆ 9 ರನ್‌ಗಳ ವಿರೋಚಿತ ಸೋಲು
ಇನ್ನು, ಆಸ್ಟ್ರೇಲಿಯಾ ನೀಡಿದ 152 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಂ ಇಂಡಿಯಾ 20 ಓವರ್‌ನಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿದ್ದು, 9 ರನ್‌ಗಳಿಂದ ಸೋಲನ್ನು ಅನುಭವಿಸಿದೆ. ಟೀಮ್ ಇಂಡಿಯಾ ಪರ ಹರ್ಮನ್ ಪ್ರೀತ್ ಕೌರ್ (54*) ಕೊನೆಯವರೆಗೂ ಹೋರಾಡಿದರೂ ಫಲ ಸಿಗಲಿಲ್ಲ. ಇದರಿಂದ ಭಾರತ ಸೆಮಿ ಫೈನಲ್ ಗೆ ಹೋಗುವ ಆಸೆ ಕಷ್ಟವಾಗಿದೆ. ಇಂದು ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ್ ಗೆದ್ದರಷ್ಟೇ ಭಾರತ ಸೆಮಿ ಫೈನಲ್ ಗೆ ಹೋಗಲು ಸಾಧ್ಯ.
ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಭಾರತ; ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಟೀಮ್ ಇಂಡಿಯಾ
ಇಂದಿನ ಪಂದ್ಯದ ಮೇಲೆ ಭಾರತದ ಸೆಮಿ ಭರವಸೆ!
ಮಹಿಳಾ ವಿಶ್ವಕಪ್‌ನ ಅಂಗವಾಗಿ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ 9 ರನ್‌ಗಳಿಂದ ಸೋತಿದೆ. ಹರ್ಮನ್ ಪ್ರೀತ್ ಕೌರ್ (54*) ಏಕಾಂಗಿ ಹೋರಾಟ ನಡೆಸಿದರೂ ಗೆಲ್ಲಲಾಗಲಿಲ್ಲ. ಸದ್ಯ ಟೀಂ ಇಂಡಿಯಾ ಖಾತೆಯಲ್ಲಿ 4 ಅಂಕಗಳಿವೆ. ಇಂದಿನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದರೆ ತಂಡ ಸೆಮೀಸ್ ತಲುಪಲಿದೆ. ಒಂದು ವೇಳೆ ಸೋತರೆ ರನ್ ರೇಟ್ ಆಧರಿಸಿ ಭಾರತಕ್ಕೆ ಸೆಮಿಸ್ ಅವಕಾಶವಿರುತ್ತದೆ.