Mysore Dussehra 2024 : ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dussehra) ಮಹೋತ್ಸವವನ್ನು ಸಾಹಿತಿ ಹಂ ಪ ನಾಗರಾಜಯ್ಯ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಬೆಳಿಗ್ಗೆ 9.15 ರಿಂದ 9.45ರ ನಡುವಿನ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ದಸರಾಗೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ: ಕಾರು, ಬೈಕ್ ಇದ್ರೆ ರೇಷನ್ ಕಾರ್ಡ್ ರದ್ದು; ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್
ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು. ಅಕ್ಟೋಬರ್ 3 ರಿಂದ 11 ರವರೆಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. ಇಂದು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಆಗುತ್ತದೆ. 11 ವೇದಿಕೆಗಳಲ್ಲಿ 508 ಕಲಾ ತಂಡಗಳ ಕಲಾವಿದರು ಟೌನ್ ಹಾಲ್ ನಲ್ಲಿ ನಾಟಕ ಪ್ರದರ್ಶನ ನೀಡಲಿದ್ದಾರೆ.
Mysore Dussehra 2024: ಕಾರ್ಯಕ್ರಮಗಳೇನು?
ಅಕ್ಟೋಬರ್ 3ರಂದು ಚಾಮುಂಡೇಶ್ವರಿ ದೇವಿಗೆ ನವರಾತ್ರಿಯ ಪ್ರಥಮ ಪೂಜೆ ನೆರವೇರಲಿದ್ದು, ನಂತರ 9 ದಿನಗಳ ಕಾಲ ದೇವಿಯ ಆರಾಧನೆ ನಡೆಯಲಿದೆ. ಅ.12ರಂದು ನವಮಿಯ ದಿನ ದುರ್ಗಾಷ್ಟಮಿ, ಮಹಾನವಮಿ, ಆಯುಧ, ಆನೆ & ಕುದುರೆ ಪೂಜೆ ನೆರವೇರಲಿದೆ.
ಇದನ್ನೂ ಓದಿ: ನಾಗಚೈತನ್ಯ-ಸಮಂತಾ ವಿಚ್ಛೇದನಕ್ಕೆ ಕೆಟಿಆರ್ ಕಾರಣ ವಿವಾದ : ಸಮಂತಾ, ಎನ್ಟಿಆರ್, ನಾಗಾರ್ಜುನ ಆಕ್ರೋಶ!
Mysore Dussehra 2024: ಜಂಬೂ ಸವಾರಿ
ದಸರಾ ಮಹೋತ್ಸವದ ಕೊನೆಯ ದಿನ ಅಕ್ಟೋಬರ್ 13ರ೦ದು ವಿಜಯ ದಶಮಿ ಪೂಜೆ ನೆರವೇರಲಿದೆ. ಸಂಜೆ 04.30ರ ನಂತರ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ 07.30ರ ನಂತರ ಪಂಜಿನ ಕವಾಯತು ನಡೆಯಲಿದೆ.
Mysore Dussehra 2024: ವಿಶೇಷತೆ ಏನು?
ಈ ವರ್ಷ ಉತ್ತಮ ಮುಂಗಾರು ಮಳೆ ಆಗಿರುವುದರಿಂದ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ದಸರಾ ಸ೦ಬ೦ಧ ಕಾರ್ಯಕ್ರಮಗಳ ಪಟ್ಟಿ & ಉದ್ಘಾಟಕರು ಯಾರೆಂಬುದನ್ನು ಸರ್ಕಾರ ಪ್ರಕಟಿಸಬೇಕಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮೊದಲ ವಾರ ಯಾರಿಗೆ ಗೇಟ್ ಪಾಸ್? ಚೈತ್ರಾ ಕುಂದಾಪುರಗೆ ಸಿಗುತ್ತಾ ಗೇಟ್ ಪಾಸ್?
Mysore Dussehra 2024: ಮೈಸೂರು ದಸರಾ ಇತಿಹಾಸ
ದಸರಾ ಹಬ್ಬಕ್ಕೆ 400 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಸುಮಾರು 14ನೇ ಶತಮಾನದಲ್ಲಿ ಪ್ರಾರಂಭವಾದ ಈ ಉತ್ಸವ ಸಾಮಾನ್ಯವಾಗಿ ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ನಲ್ಲಿ ಬರುತ್ತದೆ. ಇದು 10 ದಿನಗಳ ಹಬ್ಬವಾಗಿದೆ. ಮೈಸೂರು ದಸರಾ ‘ನಾಡಹಬ್ಬ’ ಎಂದೇ ಪ್ರಸಿದ್ಧವಾಗಿದೆ.
Mysore Dussehra 2024: ಗೋಲ್ಡ್ ಕಾರ್ಡ್ ಪ್ರಯೋಜನವೇನು?
ದಸರಾ ಗೋಲ್ಡ್ ಕಾರ್ಡ್ ಮೈಸೂರಿನ ವಿವಿಧ ಪ್ರವಾಸಿ ತಾಣಗಳಿಗೆ ತಡೆರಹಿತ ಪ್ರವೇಶ & ನಿರ್ಗಮನವನ್ನು ಖಚಿತಪಡಿಸುತ್ತದೆ. ಇದು ಜಂಬೂ ಸವಾರಿ ಮೆರವಣಿಗೆ ಪ್ರವೇಶಾತಿಯನ್ನು ಒಳಗೊಂಡಿದೆ. ಮೈಸೂರು ಜಿಲ್ಲಾಡಳಿತದಿಂದ ಆನ್ಲೈನ್ನಲ್ಲಿ ಗೋಲ್ಡ್ ಕಾರ್ಡ್ಗಳನ್ನು ನೀಡಲಾಗುತ್ತದೆ.