GT Devegowda : ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ನೀಡಬೇಕೆಂದು ವಾದಿಸುತ್ತ ಹೋದರೆ ರಾಜ್ಯದಲ್ಲಿ ಎಲ್ಲಾ ರಾಜಕೀಯ ನಾಯಕರೂ ರಾಜೀನಾಮೆ ನೀಡಬೇಕಾದೀತು ಎಂದು ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ (GT Devegowda) ಹೇಳಿದ್ದಾರೆ.
ಹೌದು, ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತನಾಡಿರುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು, ‘ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು?’ ಎಂದು ಸ್ವಪಕ್ಷದವರ ವಿರುದ್ಧವೇ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾ 2024 ಉದ್ಘಾಟನೆ, ಈ ಬಾರಿಯ ವಿಶೇಷತೆಗಳೇನು?
ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಎಫ್‌ಐಆರ್ ದಾಖಲಾದ ತಕ್ಷಣ ಸಿಎಂ ರಾಜೀನಾಮೆ ಕೊಡಬೇಕಿಲ್ಲ. ಬಿಜೆಪಿ-ಜೆಡಿಎಸ್‌ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಅಭಿವೃದ್ಧಿ ಆದಷ್ಟು ಯಾವತ್ತೂ ಆಗಿಲ್ಲ’ ಎಂದಿದ್ದಾರೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ 2 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಕುಮಾರಸ್ವಾಮಿ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಅದೇ ರೀತಿ ಸಿದ್ದರಾಮಯ್ಯ ಸಹ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದರು
GT Devegowda : ಸಿಎಂರನ್ನು ಹಾಡಿ ಹೊಗಳಿದ ಜಿಟಿಡಿ
‘ಮಂತ್ರಿಗಳಾದ ಮೇಲೆ ಎಷ್ಟು ಜವಾಬ್ದಾರಿಗಳಿವೆ ಎಂಬುದನ್ನು ಅರಿತುಕೊಳ್ಳದೆ ರಾಜೀನಾಮೆ ಕೊಟ್ಟು ಬಿಡಿ ಎನ್ನುವುದು ಸರಿಯಲ್ಲ. ಸಿಎಂ ರಾಜೀನಾಮೆ ಕೊಡಬೇಕೆಂದು ಯಾವ ಕಾನೂನಿದೆ ತೋರಿಸಿ’ ಎಂದು ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
‘ಕರ್ನಾಟಕ ರಾಜ್ಯ ಇಡೀ ಭಾರತ ದೇಶಕ್ಕೆ ಮಾದರಿ ರಾಜ್ಯ. ಇಂತಹದ್ದೆಲ್ಲ ನೋಡಿಲ್ಲ. ಸಿದ್ದರಾಮಯ್ಯ ತಂದ ಯೋಜನೆಗಳಿಂದ ರಾಜ್ಯದ ಮಹಿಳೆಯರು ದೇವಾಲಯಗಳಿಗೆ ಹೋಗುತ್ತಿದ್ದಾರೆ. ಅಂದೂ ಹೊಗಳಿದ್ದೇನೆ, ಇಂದೂ ಹೊಗಳುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: ಕಾರು, ಬೈಕ್ ಇದ್ರೆ ರೇಷನ್ ಕಾರ್ಡ್ ರದ್ದು; ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್