Annabhagya Yojana: ಅನ್ನಭಾಗ್ಯ ವಿಚಾರದಲ್ಲಿ ಸರ್ಕಾರದ ಜತೆ ಸಂಘರ್ಷ ಉಂಟಾಗಿದೆ. ಈ ಸಂಘರ್ಷ ಇನ್ನೂ ಬಗೆಹರಿಯದ ಕಾರಣ ಅನ್ನಭಾಗ್ಯಕ್ಕೂ ಸಂಕಷ್ಟ ಎದುರಾಗಿದ್ದು, ಸದ್ಯದ ಪರಿಸ್ಥಿತಿ ನೋಡಿದರೆ ಇನ್ನೂ ಎರಡು ತಿಂಗಳು ಹೆಚ್ಚುವರಿ ಅಕ್ಕಿ ಸಿಗುವುದು ಕಷ್ಟ ಎಂಬಂತಾಗಿದೆ.

ಈ ತಿಂಗಳು ಹೆಚ್ಚುವರಿ 5 ಕೆಜಿ ಅಕ್ಕಿ ಸಿಗುವುದಿಲ್ಲ, ಅದರ ಬದಲಿಗೆ ಪಡಿತರದಾರರ ಖಾತೆಗೆ ಹಣ ಜಮೆ ಮಾಡಲಾಗುವುದು. ಆಗಸ್ಟ್ -ಸೆಪ್ಟೆಂಬರ್ನಲ್ಲೂ ಹೆಚ್ಚುವರಿ ಅಕ್ಕಿ ಸಿಗುವುದು ದೌಟು ಎಂದು ಆಹಾರ ಸಚಿವರ ಮಾತುಗಳಿಂದ ತಿಳಿದುಬಂದಿದೆ.
ಇದನ್ನು ಓದಿ: ಗ್ರಾಹಕರಿಗೆ ಮತ್ತೊಂದು ಶಾಕ್; ಟೊಮೆಟೊ ಆಯ್ತು, ಈಗ ಈ ಬೆಳೆಗೆ ಬಂಪರ್ ಬೆಲೆ!?
Annabhagya Yojana: ಮತ್ತೆ ಅಕ್ಕಿ ಬದಲು ಹಣ ? –ಆಹಾರ ಸಚಿವರು ಹೇಳಿದ್ದೇನು?
ಕೇಂದ್ರ ಸರ್ಕಾರವು ಹೆಚ್ಚುವರಿ 5 ಕೆಜಿ ಅಕ್ಕಿ ಪೂರೈಕೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅಕ್ಕಿ ಬದಲು ಖಾತೆಗೆ ಹಣವನ್ನ ಹಾಕಿದ್ದ ರಾಜ್ಯ ಸರ್ಕಾರ ಇದೀಗ ಈ ತಿಂಗಳು ಕೂಡ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು ಪಡಿತರ ಚೀಟಿದಾರರ ಖಾತೆಗಳಿಗೆ ಹಣ ಜಮಾ ಮಾಡಲಿದೆ.
ಇದನ್ನು ಓದಿ: ಮುಂದಿನ ನಾಲ್ಕು ದಿನ ಭಾರಿ ಮಳೆ; ಐಎಂಡಿ ಕೊಟ್ಟ ಎಚ್ಚರಿಕೆ ಸಂದೇಶವೇನು!?
ಈ ಬಗ್ಗೆಆಹಾರ ಸಚಿವ ಕೆ.ಎಚ್ ಮುನಿಯಪ್ಪ ಮಾಹಿತಿ ನೀಡಿದ್ದು, ಈ ತಿಂಗಳು ಕೂಡ ಹೆಚ್ಚುವರಿ 5 ಕೆಜಿ ಬದಲು ಹಣ ನೀಡುತ್ತೇವೆ. ಸೆಪ್ಟೆಂಬರ್ ತಿಂಗಳಿನಲ್ಲೂ ಕೂಡ ಹೆಚ್ಚುವರಿ ಅಕ್ಕಿ ಸಿಗುವುದು ಅನುಮಾನ. ಹೀಗಾಗಿ ಅಕ್ಕಿ ಬದಲು ಹಣ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಆದಷ್ಟು ಬೇಗ ಹೆಚ್ಚುವರಿ ಅಕ್ಕಿ ಖರೀದಿಸಿ ವಿತರಣೆ ಮಾಡುತ್ತೇವೆ. ಹೆಚ್ಚುವರಿ 5 ಕೆಜಿ ಅಕ್ಕಿ ಪೂರೈಸುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಪೂರೈಕೆಗೆ ನಿರಾಕರಿಸಿತ್ತು ಎಂದು ಹೇಳಿದ್ದಾರೆ.
Annabhagya Yojana: ಅಕ್ಕಿ ಬದಲು ಹಣ ನೀಡಬೇಡಿ: ವಿತರಕರ ಈ ಆಗ್ರಹವೇಕೆ?
1 ಕೆಜಿ ಅಕ್ಕಿಗೆ ವಿತರಕರಿಗೆ ₹1.24 ರೂ. ಕಮಿಷನ್ ಸಿಗುತ್ತದೆ. ಆದರೆ, ಅಕ್ಕಿ ಬದಲು ಹಣ ಕೊಟ್ರೆ ವರ್ಷಕ್ಕೆ 360 ಕೋಟಿ ರೂ. ಕಮಿಷನ್ ಸಿಗಲ್ಲ. 5 ಕೆಜಿಯಂತೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು 2.28 ಲಕ್ಷ ಮೆಟ್ರಿಕ್ ಟನ್ ವಿತರಕರಿಗೆ ತಿಂಗಳಿಗೆ ₹30 ಕೋಟಿ ಕಮಿಷನ್ ಆಗಿದ್ದು, ವರ್ಷಕ್ಕೆ ₹360 ಕೋಟಿ ಕಮಿಷನ್ ಸಿಗಲಿದೆ. ಅಕ್ಕಿ ಸಿಗದೇ ಇದ್ರೆ ಸಕ್ಕರೆ, ಎಣ್ಣೆ, ಬೇಳೆ, ಗೋಧಿ, ರಾಗಿ ನೀಡಿ ಎಂದು ವಿತರಕರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 22,260 ಪಡಿತರ ವಿತರಕರಿದ್ದಾರೆ.
ಇದನ್ನು ಓದಿ: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಗೊತ್ತಾ? ಹೀಗೆ ತಿಳಿದುಕೊಳ್ಳಿ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |