Womens Day Special: ಸಂಪೂರ್ಣ ಮಹಿಳಾ ಸಿಬ್ಬಂದಿಯೊಂದಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹಾರಾಟ

ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಮಂಗಳೂರು-ಮಸ್ಕತ್ ವಿಮಾನವು ಪೂರ್ಣವಾಗಿ ಮಹಿಳಾ ಸಿಬ್ಬಂದಿಯೊಂದಿಗೆ ಹಾರಾಟ ನಡೆಸಿ ವಿಶೇಷವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ಒಟ್ಟು 14 ವಿಮಾನಗಳು…

ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಮಂಗಳೂರು-ಮಸ್ಕತ್ ವಿಮಾನವು ಪೂರ್ಣವಾಗಿ ಮಹಿಳಾ ಸಿಬ್ಬಂದಿಯೊಂದಿಗೆ ಹಾರಾಟ ನಡೆಸಿ ವಿಶೇಷವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿದೆ.

ಏರ್ ಇಂಡಿಯಾ ಎಕ್ಸ್ಪ್ರೆಸ್ನ ಒಟ್ಟು 14 ವಿಮಾನಗಳು ಸಂಪೂರ್ಣ ಮಹಿಳಾ ಸಿಬ್ಬಂದಿಯೊಂದಿಗೆ ಹಾರಾಟ ನಡೆಸಲಾಗಿದೆ.

ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳೂರಿನಿಂದ ವಾರಕ್ಕೆ 70ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿದ್ದು, ನಗರವನ್ನು 4 ದೇಶೀಯ ಮತ್ತು 8 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕಿಸುತ್ತದೆ. ಮಹಿಳಾ ದಿನದ ಅಂಗವಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಶೇಷ ಯೋಜನೆಯನ್ನು ಹೊರತಂದಿದೆ. ಎಲ್ಲ ಮಹಿಳಾ ಸಿಬ್ಬಂದಿಗಳು ನಿರ್ವಹಿಸುತ್ತಿದ್ದ ತಾಣಗಳಲ್ಲಿ ಮೆಲ್ಬರ್ನ್ ಅತಿ ಉದ್ದದ ಮಾರ್ಗಗಳಲ್ಲಿ ಒಂದಾಗಿದೆ.

Vijayaprabha Mobile App free

ಈ ಯೋಜನೆಯಡಿ ಲಂಡನ್ ಹೀಥ್ರೂ, ದಮ್ಮಾಮ್, ಮಸ್ಕತ್, ರಾಸ್ ಅಲ್ ಖೈಮಾ, ಅಬುಧಾಬಿ, ವಾರಣಾಸಿ, ಪುಣೆ, ವಿಶಾಖಪಟ್ಟಣಂ, ಕೋಲ್ಕತ್ತಾ, ಬಾಗ್ಡೋಗ್ರಾ, ಭುವನೇಶ್ವರ, ವಿಜಯವಾಡ ಮತ್ತು ಗುವಾಹಟಿಗೆ ಸಂಪರ್ಕಿಸುವ ವಿಮಾನಗಳನ್ನು ನಿರ್ವಹಿಸಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply