ಶ್ವೇತಾ ಗೌಡ ವಂಚನೆ ಪ್ರಕರಣ: ಗಿಫ್ಟ್ ನೊಂದಿಗೆ ಠಾಣೆಗೆ ತೆರಳಿ ಮರಳಿಸಿದ ವರ್ತೂರು ಪ್ರಕಾಶ್

ಬೆಂಗಳೂರು: ವ್ಯಾಪಾರದ ನೆಪದಲ್ಲಿ ಚಿನ್ನದ ವ್ಯಾಪಾರಸ್ಥರಿಗೆ ವರ್ತೂರು ಪ್ರಕಾಶ್ ಆಪ್ತೆ ಶ್ವೇತಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರು ಪೊಲೀಸ್ ವಿಚಾರಣೆಗೆ ಹಾಜರಾಗಿ, ನಗದು ಹಣ, ಚಿನ್ನದ ಉಂಗುರ, ಬ್ರೆಸ್‌ಲೆಟ್ ಗಳನ್ನು…

ಬೆಂಗಳೂರು: ವ್ಯಾಪಾರದ ನೆಪದಲ್ಲಿ ಚಿನ್ನದ ವ್ಯಾಪಾರಸ್ಥರಿಗೆ ವರ್ತೂರು ಪ್ರಕಾಶ್ ಆಪ್ತೆ ಶ್ವೇತಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರು ಪೊಲೀಸ್ ವಿಚಾರಣೆಗೆ ಹಾಜರಾಗಿ, ನಗದು ಹಣ, ಚಿನ್ನದ ಉಂಗುರ, ಬ್ರೆಸ್‌ಲೆಟ್ ಗಳನ್ನು ವಾಪಾಸ್ ನೀಡಿದ್ದಾರೆ.

ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಎಸಿಪಿ ಗೀತಾ ಅವರಿಂದ ವರ್ತೂರು ಪ್ರಕಾಶ್ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ವಂಚನೆ ಪ್ರಕರಣದ ಆರೋಪಿ ಶ್ವೇತಾ ಗೌಡ ಕೊಟ್ಟಿದ್ದ ಗಿಫ್ಟ್ ಗಳನ್ನು ವಾಪಾಸ್ ನೀಡಿದ್ದಾರೆ. 12.50 ಲಕ್ಷ ನಗದು ಹಣ, ಮೂರು ಬ್ರೆಸ್ ಲೆಟ್, 1 ಚಿನ್ನದ ಉಂಗುರವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಚಾರಣೆ ಬಳಿಕ ಪ್ರತಿಕ್ರಿಯಿಸಿದ ವರ್ತೂರು ಪ್ರಕಾಶ್, ಶ್ವೇತಾ ಗೌಡ 6 ತಿಂಗಳ ಹಿಂದಷ್ಟೇ ಪರಿಚಯ. ಆಕೆ ಹೀಗೆ ಮಾಡುತ್ತಾಳೆ ಎಂದು ನನಗೆ ಗೊತ್ತಿರಲಿಲ್ಲ. ನನಗೂ ಆಕೆಗೂ ಯಾವುದೇ ಸಂಬಂಧವಿಲ್ಲ. ಗಿಫ್ಟ್ ಅಂತ ಶ್ವೇತಾ ಗೌಡ ನನಗೆ ಕೆಲ ಒಡವೆ ನೀಡಿದ್ದಳು ಎಂದಿದ್ದಾರೆ.

Vijayaprabha Mobile App free

ನನ್ನ ಹೆಸರು ಬಳಸಿಕೊಂಡು ಆಕೆ ಚಿನ್ನಾಭರಣ ಖರೀದಿ ಮಾಡಿದ್ದಾಳೆ. ಚಿನ್ನದ ಅಂಗಡಿಯವರು 2 ಕೋಟಿ ರೂ. ಚಿನ್ನಾಭರಣವನ್ನ ಆಕೆಗೆ ಕೊಟ್ಟಿದ್ದಾರೆ. ಅದು ಹೇಗೆ ಕೊಟ್ಟರು? ಗೊತ್ತಿಲ್ಲ. ನನ್ನ ತರಹ ಹಲವು ರಾಜಕಾರಣಿಗಳ ಹೆಸರು, ಫೋಟೋ ತೆಗೆದುಕೊಂಡು ವಂಚನೆ ಮಾಡಿದ್ದಾಳೆ. ವಂಚನೆ ಮಾಡುವುದೇ ಆಕೆ ಕೆಲಸ. ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.