ತಂದೆಯ ಅರ್ಧ ಶವ ಬೇಕು: ಅಂತ್ಯಕ್ರಿಯೆಗೆ ವೈಷಮ್ಯದ ಸಹೋದರರ ವಿಚಿತ್ರ ಬೇಡಿಕೆ

ಮಧ್ಯಪ್ರದೇಶ: ವಿಚಿತ್ರ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಟಿಕಮ್ಗಢ ಜಿಲ್ಲೆಯಲ್ಲಿ ಅಂತ್ಯಕ್ರಿಯೆಯ ಬಗ್ಗೆ ತನ್ನ ಸಹೋದರನೊಂದಿಗಿನ ವಿವಾದದ ನಂತರ ವ್ಯಕ್ತಿಯೊಬ್ಬ ತನ್ನ ತಂದೆಯ ಅರ್ಧ ಶವಕ್ಕೆ ಬೇಡಿಕೆ ಇಟ್ಟಿದ್ದು, ಪರಿಣಾಮ ಪೊಲೀಸರು ಮಧ್ಯಪ್ರವೇಶಿಸುವಂತಾಯಿತು ಎಂದು ಜಟಾರಾ ಪೊಲೀಸ್…

ಮಧ್ಯಪ್ರದೇಶ: ವಿಚಿತ್ರ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಟಿಕಮ್ಗಢ ಜಿಲ್ಲೆಯಲ್ಲಿ ಅಂತ್ಯಕ್ರಿಯೆಯ ಬಗ್ಗೆ ತನ್ನ ಸಹೋದರನೊಂದಿಗಿನ ವಿವಾದದ ನಂತರ ವ್ಯಕ್ತಿಯೊಬ್ಬ ತನ್ನ ತಂದೆಯ ಅರ್ಧ ಶವಕ್ಕೆ ಬೇಡಿಕೆ ಇಟ್ಟಿದ್ದು, ಪರಿಣಾಮ ಪೊಲೀಸರು ಮಧ್ಯಪ್ರವೇಶಿಸುವಂತಾಯಿತು ಎಂದು ಜಟಾರಾ ಪೊಲೀಸ್ ಠಾಣೆಯ ಉಸ್ತುವಾರಿ ಅರವಿಂದ್ ಸಿಂಗ್ ಡಾಂಗಿ ಸೋಮವಾರ ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ 45 ಕಿ. ಮೀ. ದೂರದಲ್ಲಿರುವ ಲಿಧೋರಾತಾಲ್ ಗ್ರಾಮದಲ್ಲಿ ಭಾನುವಾರ ಈ ಗಲಾಟೆ ನಡೆದಿದೆ. ಸಹೋದರರ ನಡುವಿನ ಜಗಳದ ನಂತರ, ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು.

ತಮ್ಮ ಕಿರಿಯ ಮಗ ದೇಶರಾಜ್ ಅವರೊಂದಿಗೆ ವಾಸಿಸುತ್ತಿದ್ದ ಧ್ಯಾನಿ ಸಿಂಗ್ ಘೋಷ್ (84) ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾದರು. ಗ್ರಾಮದ ಹೊರಗೆ ವಾಸಿಸುತ್ತಿದ್ದ ಅವರ ಹಿರಿಯ ಮಗ ಕಿಶನ್ ಅವರು ಸಾವಿನ ಬಗ್ಗೆ ಮಾಹಿತಿ ಪಡೆದ ನಂತರ ಅಲ್ಲಿಗೆ ಆಗಮಿಸಿದ್ದ. ಅಲ್ಲದೇ ತಮ್ಮ ತಂದೆಯ ಅಂತಿಮ ವಿಧಿಗಳನ್ನು ಮಾಡುವುದಾಗಿ ಹೇಳಿ ಕಿಶನ್ ಗದ್ದಲ ಎಬ್ಬಿಸಿದ್ದಾನೆ. ಆದರೆ ಕಿರಿಯ ಮಗನು ಶವಸಂಸ್ಕಾರವನ್ನು ನಡೆಸುವುದು ತಂದೆಯ ಕೊನೆಯ ಆಸೆ ಎಂದು ಹೇಳಿಕೊಂಡಿದ್ದಾನೆ.

Vijayaprabha Mobile App free

ಕುಡಿದ ಮತ್ತಿನಲ್ಲಿದ್ದ ಕಿಶನ್, ದೇಹವನ್ನು ಅರ್ಧಕ್ಕೆ ಕತ್ತರಿಸಿ ಸಹೋದರರ ನಡುವೆ ಹಂಚುವಂತೆ ಒತ್ತಾಯಿಸಲು ಪ್ರಾರಂಭಿಸಿದನು ಎಂದು ಅಧಿಕಾರಿ ಹೇಳಿದರು. ಪೊಲೀಸರು ಸ್ಥಳಕ್ಕೆ ತಲುಪಿ ಕಿಶನ್ನ ಮನವೊಲಿಸುವಲ್ಲಿ ಯಶಸ್ವಿಯಾದರು, ಆತ ಸ್ಥಳದಿಂದ ಹೊರಟುಹೋದನು ಮತ್ತು ಕಿರಿಯ ಮಗ ಅಂತ್ಯಕ್ರಿಯೆ ನಡೆಸಿದನು ಎಂದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply