ಪೆರ್ನೆಮ್: ಹಸಾಪುರ-ಪೆರ್ನೆಮ್ ನಲ್ಲಿರುವ ಶ್ರೀ ಸಾತೇರಿ ದೇವಸ್ಥಾನ ಸಮಿತಿಯು ಹಸಾಪುರ-ಚಂದೇಲ್ ಪಂಚಾಯತ್ ವ್ಯಾಪ್ತಿಯಲ್ಲಿ ದೇವಸ್ಥಾನದ ವಾರ್ಷಿಕ ಜಾತ್ರೆ ಅಥವಾ ಯಾವುದೇ ಹಿಂದೂ ಹಬ್ಬದ ಸಮಯದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಹಾಕಲು ಅವಕಾಶ ನೀಡದಿರಲು ನಿರ್ಧರಿಸಿದೆ.
ಇದನ್ನು ದೃಢೀಕರಿಸಿದ ಸಮಿತಿಯ ಅಧ್ಯಕ್ಷ ಸಂತೋಷ್ ಮಲಿಕ್, ಮುಸ್ಲಿಂ ಸಮುದಾಯದ ಮಾರಾಟಗಾರರನ್ನು ದೇವಾಲಯ ಜಾತ್ರೋತ್ಸವದಲ್ಲಿ ವ್ಯಾಪಾರ ಮಾಡಲು ನಿಷೇಧಿಸಲಾಗಿದೆ ಎಂದು ಹೇಳಿದರು. ದೇವಾಲಯದ ಸಮಿತಿಯ ನಿರ್ಧಾರವನ್ನು ತಿಳಿಸಲು ಸ್ಥಳೀಯರು ಈ ಪ್ರದೇಶದಲ್ಲಿ ಜಾಗೃತಿ ಫಲಕಗಳನ್ನು ಸಹ ಹಾಕುತ್ತಿದ್ದರು.
ಗ್ರಾಮದಲ್ಲಿ ಡಿಸೆಂಬರ್ 23 ರಂದು ಶ್ರೀ ದೇವಿ ಸಾತೇರಿಯ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಮುಸ್ಲಿಂ ಮಾರಾಟಗಾರರೊಬ್ಬರು ಬೆಳಿಗ್ಗೆ ಮೇಳದಲ್ಲಿ ತಮ್ಮ ಅಂಗಡಿಯನ್ನು ಹಾಕಲು ಮುಂದಾಗಿದ್ದನ್ನು ಸಮಿತಿಯವರು ಗಮನಿಸಿದ್ದು, ಈ ವೇಳೆ ಅಂಗಡಿ ಹಾಕದಂತೆ ಸಮಿತಿ ತಿಳಿಸಿದೆ ಎಂದು ಅವರು ಹೇಳಿದರು.
“ಭವಿಷ್ಯದಲ್ಲೂ, ಮುಸ್ಲಿಂ ಮಾರಾಟಗಾರರಿಗೆ ಜಾತ್ರೋತ್ಸವ ಸೇರಿದಂತೆ ಗ್ರಾಮದಲ್ಲಿ ಆಚರಿಸಲಾಗುವ ಯಾವುದೇ ಹಿಂದೂ ಹಬ್ಬಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಅವಕಾಶವಿರುವುದಿಲ್ಲ” ಎಂದು ಅವರು ಹೇಳಿದರು.
ಇತ್ತೀಚೆಗೆ ಫತೋರ್ಪಾ ದ ಶ್ರೀ ಶಾಂತಾದುರ್ಗಾ ದೇವಸ್ಥಾನ ದೇವಾಲಯ ಸಮಿತಿಯು ಈ ವರ್ಷ ತಮ್ಮ ವಾರ್ಷಿಕ ಜಾತ್ರೆಯಲ್ಲಿ ಮುಸ್ಲಿಂ ಮಾರಾಟಗಾರರಿಗೆ ಅವಕಾಶ ನೀಡದಿರಲು ನಿರ್ಧರಿಸಿತ್ತು.