ಶಿರಸಿ: ಎದೆ ನೋವಿಗೆ ಚಿಕಿತ್ಸೆ ಪಡೆದುಕೊಂಡು ತನ್ನ ತಾಯಿಯೊಂದಿಗೆ ಬೈಕ್ ಮೇಲೆ ಸಾಗುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಬಿದ್ದು ಮೃತಪಟ್ಟ ಘಟನೆ ಶಿರಸಿ ದೇವಿಕೆರೆ ಬಳಿ ಇಂದು ಮದ್ಯಾಹ್ನ ನಡೆದಿದೆ.
ಮೂಲತಃ ಗಣೇಶ ನಗರದ, ಹಾಲಿ ಹನುಮಂತಿಯ ನಿವಾಸಿಯಾಗಿದ್ದ ಪ್ರೇಮಾನಂದ ಗಂಗಾಧರ ತಳಗೇರಿ(25) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಈ ಘಟನೆಯಲ್ಲಿ ಬೈಕ್ ನ ಮೇಲಿದ್ದ ಮೃತನ ತಾಯಿ ಕೂಡಾ ಗಾಯಗೊಂಡಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟ ವ್ಯಕ್ತಿ ಎದೆ ನೋವಿನಿಂದ ಬಿದ್ದು ಮೃತಪಟ್ಟಿದ್ದಾನೋ ಅಥವಾ ನಗರಸಭೆಯವರು ರಸ್ತೆ ಬದಿಯಲ್ಲಿ ಅಗೆದ ಹಾಕಿದ ಮಣ್ಣಿಗೆ ಬೈಕ್ ಟಯರ್ ಸಿಲುಕಿ ಬಿದ್ದು ಮೃತಪಟ್ಟಿದ್ದಾನೋ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿದ್ದಾನೋ ಎಂಬುವುದು ಪೋಲಿಸರ ತನಿಖೆಯಿಂದ ತಿಳಿದು ಬರಬೇಕಾಗಿದೆ. ಎಕೆಂದರೆ ಮೃತಪಟ್ಟವನ ಹಣೆಗೆ ಕಲ್ಲು ತಾಗಿ ಬಲವಾಗಿ ಗಾಯವಾಗಿರುವುದು ಕಂಡು ಬಂದಿದೆ.