ಜಗಳೂರು: ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಹೊರ ವಲಯದಲ್ಲಿರುವ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ ನಡೆದಿದ್ದು, ಮೀನುಗಳು ಸತ್ತು ದಡ ಸೇರುತ್ತಿವೆ. ಆದ್ರೆ ಸಾವಿಗೆ ಕಾರಣ ಮಾತ್ರ ನಿಗೂಢವಾಗಿದೆ.
ಹೌದು, ಜಗಳೂರು ಪಟ್ಟಣದ ಕೆರೆ 700ಕ್ಕೂ ಅಧಿಕ ಎಕರೆ ಪ್ರದೇಶವನ್ನು ಹೊಂದಿದೆ. ಇನ್ನು, ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ಕೆರೆಗೆ ಸಾಕಷ್ಟು ನೀರು ಹರಿದು ಬಂದಿದ್ದು, ಇದರ ಜೊತೆಗೆ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೆರೆಗೆ ನೀರು ಬರುತ್ತಿದ್ದು ಕೆರೆ ಕೋಡಿ ಬೀಳುವ ಹಂತದಲ್ಲಿದೆ.
ಇದನ್ನೂ ಓದಿ: Ratan Tata : ಅವಮಾನಿಸಿದ್ದ ಕಂಪನಿಯನ್ನೇ ಖರೀದಿಸಿದ್ದ ರತನ್ ಟಾಟಾ!
ಈ ವೇಳೆ ಕೆರೆಯಲ್ಲಿದ್ದ ಮೀನುಗಳು ಸಾವಿಗೀಡಾಗಿರುವುದು ಗುತ್ತಿಗೆ ಪಡೆದವರ ಚಿಂತೆಗೆ ಕಾರಣವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಕೆರೆಗೆ ನೀರು ಬರದೇ ಇದ್ದಿದ್ದರಿಂದ ಮೀನಿನ ಉತ್ಪಾದನೆ ಆಗಿರಲಿಲ್ಲ. ಆದರೆ ಈ ಬಾರಿ ಕೆರೆ ತುಂಬಿದ್ದರೂ ಮೀನುಗಳು ಸಾಯುತ್ತಿದ್ದು, ಗುತ್ತಿಗೆದಾರರು ಗೋಳಾಡಿದ್ದಾರೆ.