ಹಳೆಯ ವೈಷಮ್ಯಕ್ಕೆ ಕೊಡಲಿಯಿಂದ ಹೊಡೆದು ಮಹಿಳೆ ಹತ್ಯೆ!

ಬೆಳಗಾವಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ‌ಮಹಿಳೆಯೋರ್ವರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ್ ಗ್ರಾಮದಲ್ಲಿ ನಡೆದಿದೆ. ಕಲಹಾಳ್ ಗ್ರಾಮದ ಶೇಖವ್ವ ಮಾದರ್(45) ಕೊಲೆಯಾದ ಮಹಿಳೆಯಾಗಿದ್ದಾರೆ. ಸಹೋದರ ಸಂಬಂಧಿಯಿಂದಲೇ ಶೇಖವ್ವ ಮೇಲೆ…

ಬೆಳಗಾವಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ‌ಮಹಿಳೆಯೋರ್ವರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ್ ಗ್ರಾಮದಲ್ಲಿ ನಡೆದಿದೆ.

ಕಲಹಾಳ್ ಗ್ರಾಮದ ಶೇಖವ್ವ ಮಾದರ್(45) ಕೊಲೆಯಾದ ಮಹಿಳೆಯಾಗಿದ್ದಾರೆ. ಸಹೋದರ ಸಂಬಂಧಿಯಿಂದಲೇ ಶೇಖವ್ವ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದ್ದರಿಂದ ಕುಟುಂಬದವರು ಊರು ಬಿಟ್ಟಿದ್ದರು. ಆದರೆ ತಿಂಗಳಿಗೊಮ್ಮೆ ಪಡಿತರ ತರಲು‌ ಶೇಖವ್ವಾ ಊರಿಗೆ ಬರುತ್ತಿದ್ದರು.

ಅದರಂತೆ ಬಂದಿದ್ದ ವೇಳೆ ಕಲಹಾಳ್ ಗ್ರಾಮದಲ್ಲಿ ಇರುವ ಮನೆಯ ಬಳಿಯಲ್ಲೇ ಆರೋಪಿ ಅಟ್ಯಾಕ್ ಮಾಡಿದ್ದು, ಕೊಡಲಿಯಿಂದ ಬಲವಾಗಿ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಹತ್ಯೆ ಆರೋಪಿ ಮಂಜುನಾಥ ‌ಮಾದರನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.