ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ

ದಾವಣಗೆರೆ ಸೆ.14: ಎ.ಆರ್.ಟಿ ಪ್ಲಸ್ ವಿಭಾಗಕ್ಕೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಸಂದರ್ಶನ ಆಯೋಜಿಸಲಾಗಿದೆ. ಸೆ.21 ರಂದು ಬೆಳಿಗ್ಗೆ 11 ಗಂಟೆಗೆ ಎ.ಆರ್.ಟಿ ಪ್ಲಸ್…

ದಾವಣಗೆರೆ ಸೆ.14: ಎ.ಆರ್.ಟಿ ಪ್ಲಸ್ ವಿಭಾಗಕ್ಕೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಸಂದರ್ಶನ ಆಯೋಜಿಸಲಾಗಿದೆ.

ಸೆ.21 ರಂದು ಬೆಳಿಗ್ಗೆ 11 ಗಂಟೆಗೆ ಎ.ಆರ್.ಟಿ ಪ್ಲಸ್ ವಿಭಾಗ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಇಲ್ಲಿಗೆ ಸಂದರ್ಶನಕ್ಕೆ ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬಹುದು.

ಒಂದು ವೈದ್ಯಾಧಿಕಾರಿ ಹುದ್ದೆ ಖಾಲಿಯಿದ್ದು, ಅವಧಿ ಒಂದು ವರ್ಷದ್ದಾಗಿದೆ. ಮಾಸಿಕ ರೂ. 50 ಸಾವಿರ ವೇತನ ನೀಡಲಾಗುವುದು. ಅಭ್ಯರ್ಥಿಯು ಎಂ.ಬಿ.ಬಿ.ಎಸ್‍ನಲ್ಲಿ ಉತ್ತೀಣರಾಗಿರಬೇಕು. ಹೆಚ್.ಐ.ವಿ ವಿಭಾಗದಲ್ಲಿ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ವಯೋಮಿತಿ 70 ವರ್ಷದೊಳಗಿರಬೇಕು ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.

Vijayaprabha Mobile App free

ಇದನ್ನು ಓದಿ: ನ್ಯಾಮತಿಯ ಪವಿತ್ರ ಶ್ರೀ ಕ್ಷೇತ್ರ ಸೇವಾಲಾಲ್ ಗೆ ರೈಲು ಮಾರ್ಗ ಕಲ್ಪಿಸುವ ಭರವಸೆ ನೀಡಿದ್ದೆ, ಈಗದು ಕಾರ್ಯರೂಪಕ್ಕೆ ಬಂದಿದೆ : ಎಂ.ಪಿ ರೇಣುಕಾಚಾರ್ಯ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.