ಟೋಕಿಯೋ: 276 ಕೆಜಿ ತೂಕದ ದೈತ್ಯ ಟ್ಯೂನಾ ಮೀನು, 11 ಕೋಟಿ ರೂಪಾಯಿ (1.3 ಮಿಲಿಯನ್ ಡಾಲರ್) ದರದಲ್ಲಿ ಜಪಾನಿನಲ್ಲಿ ಹರಾಜುಗೊಂಡಿದೆ.
ಈ ವರ್ಷದ ಪ್ರಾರಂಭದಲ್ಲಿ, ಮೀನುಗಾರರ ಬಲೆಗೆ 276 ಕೆಜಿ ತೂಕದ ದೈತ್ಯ ಮೀನು ಬಲೆಗೆ ಬಿದ್ದಿತ್ತು. ಬ್ಲೂಫಿನ್ ಟ್ಯೂನಾ ಹೆಸರಿನ ಮೀನು, ಟೋಕಿಯೋದಲ್ಲಿನ ಮೀನು ಮಾರುಕಟ್ಟೆಯಲ್ಲಿ ಹರಾಜು ಮಾಡಲಾಯಿತು. ಓನೋಡೆರಾ ಗುಂಪು ಬರೋಬ್ಬರಿ 11 ಕೋಟಿ ರೂಪಾಯಿಗೆ ಈ ದೈತ್ಯ ಮೀನನ್ನು ತನ್ನದಾಗಿಸಿಕೊಂಡಿತು.
ಒನೋಡೆರಾ ಗುಂಪು ಕಳೆದ ಐದು ವರ್ಷಗಳಿಂದ ಹರಾಜುಗಳಲ್ಲಿ ಮೀನುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸುತ್ತಿದೆ. ಕಳೆದ ವರ್ಷ, ಒನೋಡೆರಾ ಗುಂಪು 6.2 ಕೋಟಿ ರೂಪಾಯಿಯನ್ನು ನೀಡಿ ಟ್ಯೂನಾ ಮೀನು ಖರೀದಿಸಿತ್ತು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.