ಬೆಂಗಳೂರು,ಸೆ.14: ರಾಜ್ಯದಲ್ಲಿ ಇಂದು 8,244 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇಂದು 119 ಜನರು ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿಂದು 8,865 ಜನರು ಕರೋನ ಸೋಂಕಿನಿಂದ ಗುಣಮುಖರಾಗಿದ್ದು, ಸೋಂಕಿತರ ಸಂಖ್ಯೆ 4,67,689 ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಪೈಕಿ 3,61,823 ಜನರು ಕರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 98,463 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 7,384 ಜನರು ಕೊರೋನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.
ಇದನ್ನು ಓದಿ: ಬಾಲಿವುಡ್ ಡ್ರಗ್ಸ್ ಪ್ರಕರಣ; ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ತಪ್ಪಿತಸ್ಥರಲ್ಲ: ಎನ್‌ಸಿಬಿಯಿಂದ ಮಹತ್ವದ ಹೇಳಿಕೆ!
ಇಲ್ಲಿದೆ ಜಿಲ್ಲಾವಾರು ಸೋಂಕಿತರ ಮಾಹಿತಿ :
ಬಾಗಲಕೋಟೆ-166, ಬಳ್ಳಾರಿ-264, ಬೆಳಗಾವಿ-167, ಬೆಂಗಳೂರು ಗ್ರಾ.-275, ಬೆಂಗಳೂರು ನಗರ-2966, ಬೀದರ್-51, ಚಾಮರಾಜನಗರ-54, ಚಿಕ್ಕಬಳ್ಳಾಪುರ-140, ಚಿತ್ರದುರ್ಗ-198, ಚಿಕ್ಕಮಗಳೂರು-200, ದ.ಕನ್ನಡ-413, ದಾವಣಗೆರೆ-325, ಧಾರವಾಡ-117, ಗದಗ-96, ಹಾಸನ-295, ಹಾವೇರಿ-208, ಕಲಬುರಗಿ-185, ಕೊಡಗು-32, ಕೋಲಾರ-57, ಕೊಪ್ಪಳ-162, ಮಂಡ್ಯ-109, ಮೈಸೂರು-677, ರಾಯಚೂರು-51, ರಾಮನಗರ-113, ಶಿವಮೊಗ್ಗ-220, ತುಮಕೂರು-192, ಉಡುಪಿ-40, ಉತ್ತರಕನ್ನಡ-191, ವಿಜಯಪುರ-176 ಮತ್ತು ಯಾದಗಿರಿ-104 ಸೋಂಕಿತರು ಪತ್ತೆಯಾಗಿದ್ದಾರೆ.